ರಾವಣ ಪಾತ್ರ.. 15 ನಿಮಿಷ ಮಾತ್ರ.. ಬಾಲಿವುಡ್‌ನಲ್ಲಿ ಯಶ್ ಸೈಡ್‌ಲೈನ್‌?‌ – ರಾಮಾಯಣದಲ್ಲಿ ರಾವಣ ಸೈಲೆಂಟ್?‌

ರಾವಣ ಪಾತ್ರ.. 15 ನಿಮಿಷ ಮಾತ್ರ.. ಬಾಲಿವುಡ್‌ನಲ್ಲಿ ಯಶ್ ಸೈಡ್‌ಲೈನ್‌?‌ – ರಾಮಾಯಣದಲ್ಲಿ ರಾವಣ ಸೈಲೆಂಟ್?‌

ರಾಕಿಂಗ್ ಸ್ಟಾರ್ ಯಶ್.. ಕೆಜಿಎಫ್ ಸಿನಿಮಾ ನಂತ್ರ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ ಗ್ಲೋಬಲ್ ಸ್ಟಾರ್ ಆದ್ರು.. ಇದ್ರ ಬೆನ್ನಲ್ಲೇ  ಯಶ್‌ಗೆ ಡಿಮ್ಯಾಂಡ್‌ ಹೆಚ್ಚಾಯ್ತು.. ಇದೀಗ ಬಾಲಿವುಡ್‌ನಲ್ಲೂ ರಾಕಿಂಗ್‌ ಸ್ಟಾರ್‌ ಮಿಂಚಲು ಸಜ್ಜಾಗಿದ್ದಾರೆ.. ಬಿಗ್‌ ಬಜೆಟ್‌ ಮೂವಿ ರಾಮಾಯಣದಲ್ಲಿ ರಾವಣ ಪಾತ್ರದ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ.. ಆದ್ರೀಗ ರಾಕಿಂಗ್‌ ಸ್ಟಾರ್‌ ಫ್ಯಾನ್ಸ್‌ ಗೆ ಶಾಕಿಂಗ್‌ ಸುದ್ದಿಯೊಂದಿದೆ.. ಬಾಲಿವುಡ್ ನೇ ಇಲ್ಲಿಗೆ ಕರೆಸ್ತೀನಿ ಅಂದಿದ್ದ ರಾಕಿ ಬಾಯ್ ಈಗ ಬಾಲಿವುಡ್‌ನಲ್ಲೇ ಸೈಡ್‌ಲೈನ್‌ ಆದ್ರಾ? ಈ ಒಂದು ಚರ್ಚೆ ಈಗ ಭಾರಿ ಸದ್ದು ಮಾಡ್ತಿದೆ.

ಇದನ್ನೂ ಓದಿ: ಮದುವೆಗೂ ಮುನ್ನವೇ ಮಗುಗಾಗಿ ಬೇಡಿಕೆಯಿಟ್ಟ ಡ್ರೋನ್‌ ಪ್ರತಾಪ್‌ – ಮಕ್ಕಳು ಬೇಡ ಅಂದ್ರೆ ಡಿವೋರ್ಸ್​ ಫಿಕ್ಸ್‌!

ಕೆಜಿಎಫ್‌ ಸಿನಿಮಾ ಸಕ್ಸಸ್‌ ನಂತ್ರ ರಾಕಿಂಗ್‌ ಸ್ಟಾರ್‌ ಯಶ್ ಗ್ಲೋಬಲ್‌ ಸ್ಟಾರ್‌ ಆಗಿದ್ದಾರೆ.. ಇದೀಗ ಟಾಕ್ಸಿಕ್‌ ಸಿನಿಮಾ ಜೊತೆ ಜೊತೆಗೆ ರಾಮಾಯಣದ ಶೂಟಿಂಗ್‌ನಲ್ಲೂ ಬ್ಯೂಸಿಯಾಗಿದ್ದಾರೆ. ಇಷ್ಟು ದಿನ ಹೀರೊ ಆಗಿ ತೆರೆಮೇಲೆ ಮೆರಿತಿದ್ದ ರಾಕಿ ಬಾಯ್‌ ಇದೇ ಮೊದಲ ಬಾರಿಗೆ ವಿಲನ್‌ ಆಗಿ ಮಿಂಚಲು ಸಜ್ಜಾಗಿದ್ದಾರೆ.  ರಾಮಾಯಣದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಲಂಕಾಧಿಪತಿ ರಾವಣನಾಗಿ ಕಾಣಿಸಿಕೊಂಡಿದ್ದಾರೆ.. ರಾಮಾಯಣದಲ್ಲಿ ಯಶ್‌ ರಾವಣನಾಗಿ ಹೇಗೆ ಕಾಣಿಸಿಕೊಳ್ಬೋದು ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್‌ ಇದ್ದೇ ಇದೆ.. ಆದ್ರೀಗ ಯಶ್‌ ಫ್ಯಾನ್ಸ್‌ಗೆ ಸ್ಯಾಡ್‌ ನ್ಯೂಸ್‌ವೊಂದಿದೆ. ರಾಮಾಯಣದಲ್ಲಿ ಯಶ್‌ ಕಾಣಿಸಿಕೊಳ್ಳೋದು ಕೇವಲ 15 ನಿಮಿಷ ಮಾತ್ರ..

ನಿತೇಶ್‌ ತಿವಾರಿ ಅವರ ಬಿಗ್‌ ಬಜೆಟ್‌ ಸಿನಿಮಾ ರಾಮಾಯಣ ಭಾರಿ ನಿರೀಕ್ಷೆ ಹುಟ್ಟಿಸಿದೆ.. ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯಾಗಿ ನಟಿಸಿದ್ದಾರೆ. ಹಾಗೇ, ರಾಕಿಂಗ್‌ ಸ್ಟಾರ್‌ ಯಶ್‌ ಅವರು ರಾವಣನಾಗಿ ನಟಿಸಲಿದ್ದಾರೆ.. ರಾಮಾಯಣ ಭಾಗ 1, 2026ರ ದೀಪಾವಳಿಗೆ ಮತ್ತು ಭಾಗ 2, 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ.. ಈ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ರಾವಣ ಪಾತ್ರದಲ್ಲಿ ನಟಿಸುತ್ತಿರೋದ್ರಿಂದ ಕನ್ನಡಿಗರಿಗೆ ತುಂಬಾನೇ ಸ್ಪೆಷಲ್‌.. ಹೀಗಾಗೇ ಈ ಸಿನಿಮಾದ ಮೇಲೆ ಯಶ್‌ ಫ್ಯಾನ್ಸ್‌ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಮಾಯಣದಲ್ಲಿ ಯಶ್‌ ಎಷ್ಟು ನಿಮಿಷ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಕ್ಯೂರಿಯಾಸಿಟಿ ಇದ್ದೇ ಇದೆ.. ಆದ್ರೆ ಯಶ್‌ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳೋದು ಕೇವಲ 15 ನಿಮಿಷ ಮಾತ್ರ ಅಂತಾ ಹೇಳಲಾಗ್ತಿದೆ.. ಈ ಬೆನ್ನಲ್ಲೇ ಕೆಲವರು ಇದನ್ನೇ ಇಟ್ಕೊಂಡು ಟೀಕೆ ಮಾಡ್ತಿದ್ದಾರೆ..

ಹೌದು.. ರಾಮಾಯಣ ಸಿನಿಮಾದಲ್ಲಿ ಯಶ್‌ ಕಾಣಿಸಿಕೊಳ್ಳುವುದು ಕೇವಲ 15 ನಿಮಿಷ ಅನ್ನೋ ಮ್ಯಾಟರ್‌ ರಿವೀಲ್‌ ಆಗ್ತಿದ್ದಂತೆ ಕೆಲವರು ಯಶ್‌ ಹಳೇ ಡೈಲಾಗ್‌ನ ಮತ್ತೆ ನೆನಪಿಸಿಕೊಂಡಿದ್ದಾರೆ..  ರಾಕಿಂಗ್‌ ಸ್ಟಾರ್‌ ಯಶ್ ಒಮ್ಮೆ ಬಾಲಿವುಡ್‌ನವರನ್ನು ಇಲ್ಲಿಗೆ ಕರೆತರುತ್ತೇನೆ ಎಂದು ಹೇಳಿದ್ದರು. ಆದ್ರೀಗ ಯಶ್‌ ಬಾಲಿವುಡ್‌ ಸಿನಿಮಾದಲ್ಲಿ ಆಕ್ಟ್‌ ಮಾಡ್ತಿದ್ದಾರೆ.. ಹೀರೋ ಆಗಿದ್ದವರು ವಿಲನ್‌ ಆಗಿ ನಟಿಸುತ್ತಿದ್ದಾರೆ.. ಬಾಲಿವುಡ್‌ನ ಇಲ್ಲಿಗೆ ಕರೆಸ್ತೀನಿ ಅಂದಿದ್ದ ಯಶ್‌ ಈಗ ಬಾಲಿವುಡ್‌ನಲ್ಲೇ ಸೈಡ್‌ಲೈನ್‌ ಆಗಿದ್ದಾರೆ.. ಗ್ಲೋಬಲ್‌ ಸ್ಟಾರ್‌ನ ತೆರೆಮೇಲೆ ಕೇವಲ 15 ನಿಮಿಷ ತೋರಿಸೋದು ಎಷ್ಟು ಸರಿ.. ಜಸ್ಟ್‌ ಬಂದು ಒಂದೆರಡು ಡೈಲಾಗ್‌ ಹೊಡೆದು ಹೋಗೋದಾದ್ರೆ ಯಶ್‌ ಅವರನ್ನೇ ಕರೆಸ್ಬೇಕಿತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ಇನ್ನು ಮತ್ತೊಂದು ವಿಚಾರ ಏನಂದ್ರೆ ರಾಮಾಯಣ ಸಿನಿಮಾದಲ್ಲಿ ಆರಂಭದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸಕ್ಕೆ ಹೋಗುವ ಕಥೆಯನ್ನ, ಅದಕ್ಕೂ ಮುಂಚಿತವಾದ ಕೆಲವು ಘಟನೆಗಳ ಕಥೆಯನ್ನ ಹೆಣೆಯಲಾಗಿದೆ ಎಂದು ಹೇಳಲಾಗಿದೆ. ಮೊದಲ ಭಾಗದಲ್ಲಿ ಯಶ್‌ ಪಾತ್ರದ ಒಟ್ಟಾರೆ ಅವಧಿ 15 ನಿಮಿಷವಾದ್ರೂ , 2ನೇ ಭಾಗದಲ್ಲಿ ಯಶ್‌ ಪಾತ್ರದ ಅವಧಿ ಜಾಸ್ತಿ ಇರೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಮತ್ತೊಂದು ವಿಚಾರ ಏನಂದ್ರೆ ರಾವಣ ಅಂದ್ರೆ ಕೆಟ್ಟವನು, ಖಳನಾಯಕ ಅಂತ ಮಾತ್ರ ಇಲ್ಲಿತನಕ ತೋರಿಸಲಾಗ್ತಿತ್ತು. ಆದ್ರೆ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾವಣ ಕೇವಲ ಒಬ್ಬ ವಿಲನ್ ಅಲ್ಲ. ಅವನು ಜ್ಞಾನಿ, ಮಹಾನ್ ಶಿವಭಕ್ತ, ತನ್ನವರಿಗಾಗಿ ಏನನ್ನಾದರೂ ಮಾಡೋ ರಾಜ. ಈ ಎಲ್ಲಾ ಶೇಡ್‌ಗಳನ್ನು ತೋರಿಸಲಾಗ್ತಿದೆ. ಹೀಗಾಗೇ ರಾವಣ ತೆರೆಮೇಲೆ ಕಡಿಮೆ ಸಮಯ ಕಾಣಿಸಿಕೊಂಡ್ರೂ ವೀಕ್ಷಕರ ಮನಸಲ್ಲಿ ಗಟ್ಟಿಯಾಗೇ ನೆಲೆಯಾಗ್ತಾರೆ. ಆ ರೀತಿಯಲ್ಲಿ ರಾವಣನ್ನ ತೆರೆಮೇಲೆ ತೋರಿಸೋದು ಪಕ್ಕಾ ಆಗಿದೆ. ಸೋ ಇಷ್ಟು ದಿನ ಹೀರೋ ಆಗಿ ಮಿಂಚಿದ್ದ ಯಶ್‌ ಗೆ ರಾವಣ ಪಾತ್ರ ಸಕ್ಸಸ್‌ ತಂದು ಕೊಡುತ್ತಾ ಅಂತಾ ಕಾದು ನೋಡ್ಬೇಕು.

Shwetha M