ಒಂದೂವರೆ ವರ್ಷದ ಬಳಿಕ ಯಶ್ ಸಿನಿಮಾ ಟೈಟಲ್ ಅನೌನ್ಸ್ – ಫ್ಯಾನ್ಸ್ ಗೆ ಶಾಕ್ ಕೊಟ್ಟ ರಾಕಿಂಗ್ ಸ್ಟಾರ್!

ಒಂದೂವರೆ ವರ್ಷದ ಬಳಿಕ ಯಶ್ ಸಿನಿಮಾ ಟೈಟಲ್ ಅನೌನ್ಸ್ – ಫ್ಯಾನ್ಸ್ ಗೆ ಶಾಕ್ ಕೊಟ್ಟ ರಾಕಿಂಗ್ ಸ್ಟಾರ್!

ಕೆಜಿಎಫ್ ಸಕ್ಸಸ್ ಬಳಿಕ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ತಮ್ಮ ಮುಂದಿನ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ. ಜೊತೆಗೆ ದೊಡ್ಡ ಶಾಕ್ ಕೂಡ ಕೊಟ್ಟಿದ್ದಾರೆ. ಕೆವಿಎನ್ ಪ್ರೋಡಕ್ಸನ್‌ ನಿರ್ಮಾಣದಲ್ಲಿ ಯಶ್ ಟಾಕ್ಸಿಕ್ (Toxic) ಶೀರ್ಷಿಕೆಯ ಹೊಸ ಸಿನಿಮಾ ಮಾಡುವುದಾಗಿ ಇಂದು ಘೋಷಣೆ ಆಗಿದೆ. ಈ ಮೂಲಕ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಪ್ಯಾನ್ ಇಂಡಿಯಾ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ : ವಿನಯ್ ಸೇಡಿಗೆ ಆಸ್ಪತ್ರೆ ಸೇರಿದರಾ ಸಂಗೀತಾ, ಡ್ರೋನ್ ಪ್ರತಾಪ್ – ಬಿಗ್‌ಬಾಸ್ ಮನೆಯಲ್ಲಿ ಏನಾಗುತ್ತಿದೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಸಿನಿಮಾ ಟೈಟಲ್ ಘೋಷಣೆಯಾಗಿದ್ದು ಟಾಕ್ಸಿಕ್ ಅಂತಾ ಹೆಸರಿಡಲಾಗಿದೆ. ಈ ಸಿನಿಮಾಗೆ ಕೆವಿಎನ್‌ ಸಂಸ್ಥೆ ಹಣ ಹೂಡುತ್ತಿದ್ದು, ಗೀತಾ ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಆದ್ರೆ ಸಿನಿಮಾ ಟೈಟಲ್ ಅನೌನ್ಸ್ ಆಗಿದ್ರು ಅಭಿಮಾನಿಗಳು ಬೇಜಾರಾಗಿದ್ದಾರೆ. ಯಾಕಂದ್ರೆ ಈ ಸಿನಿಮಾ 2025ರ ಏಪ್ರಿಲ್ 10 ರಂದು ರಿಲೀಸ್ ಆಗಲಿದೆ. ಹೀಗಾಗಿ 2024ಕ್ಕೂ ಯಶ್ ಯಾವ ಸಿನಿಮಾನೂ ಬಿಡುಗಡೆ ಆಗಲ್ಲ. ಈಗಾಗಲೇ ಸಿಕ್ಕಾಪಟ್ಟೆ ಗ್ಯಾಪ್‌ ಆಗಿದ್ದು, ಇನ್ನೂ ಒಂದೂವರೆ ವರ್ಷ ಕಾಯೋದು ಕಷ್ಟ ಅಂತಿದ್ದಾರೆ. ಕೆಜಿಎಫ್ 2 ತೆರೆಕಂಡು ಈಗಾಗಲೇ 18 ತಿಂಗಳು ಕಳೆದಿತ್ತು. ಈ ಮೂಲಕ ಮೂರು ವರ್ಷಗಳ ಬಳಿಕ ಯಶ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಯಶ್ ಮಾತ್ರ ಊಟ ರೆಡಿಯಾದಾಗ ಮಾತ್ರ ಬಡಿಸಬೇಕು ಅನ್ನೋ ಮೂಲಕ ಮತ್ತೊಂದು ಬಿಗ್ ಸಕ್ಸಸ್ ನ ಸಿನಿಮಾ ಕೊಡುವ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಮತ್ತೊಂದು ಹೊಸ ವಿಷಯ ಹರಿದಾಡುತ್ತಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಕೇವಲ ಒಬ್ಬರು ನಾಯಕಿಯರಲ್ಲ, ಮೂವರು ನಾಯಕಿಯರ ಇರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ. ಸಾಯಿ ಪಲ್ಲವಿ, ಮೃಣಲಾ ಠಾಕೂರ್ ಹೀಗೆ ಮೂವರು ಹಿರೋಯಿನ್ ಚಿತ್ರದಲ್ಲಿ ಪಾತ್ರವಾಗಲಿದ್ದಾರಂತೆ.

Shantha Kumari