ರಾಮಾಯಣಕ್ಕೆ ಬಂದ ಯಶ್ -‌ 1 ತಿಂಗಳು ʼರಾವಣʼನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ರಾಕಿ ಭಾಯ್

ರಾಮಾಯಣಕ್ಕೆ ಬಂದ ಯಶ್ -‌ 1 ತಿಂಗಳು ʼರಾವಣʼನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ರಾಕಿ ಭಾಯ್

ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್ ʼರಾಮಾಯಣʼ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದ ಪ್ರಮುಖ ದೃಶಗಳನ್ನು ವೇಗವಾಗಿ ಚಿತ್ರತಂಡ ಶೂಟ್‌ ಮಾಡುತ್ತಿದೆ. ರಣ್ಬೀರ್‌ ಕಪೂರ್, ಸಾಯಿ ಪಲ್ಲವಿ ಜತೆ ನಟ ಯಶ್‌ ಕೂಡ ಭಾಗಿಯಾಗಿದ್ದಾರೆ.

ಇದನ್ನೂ ಓದಿ: RCB ಕಂಟಕ ಜಸ್ಟ್ ಮಿಸ್!! 20 ಕೋಟಿ ಜೊತೆ ವೆಂಕಿ ಹೊರೆ

yash 2ರಾವಣ ಪಾತ್ರಧಾರಿಯಾಗಿ ಮೊದಲ ದೃಶ್ಯದಲ್ಲಿ ಯಶ್ ನಟಿಸಿದ್ದಾರೆ. ಏ.30ರಿಂದ ಒಂದು ತಿಂಗಳುಗಳ ಕಾಲ ಯಶ್ ‘ರಾಮಾಯಣ ಪಾರ್ಟ್ 1’ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಮುಂಬೈನಲ್ಲಿಯೇ ಯಶ್ ಬೀಡು ಬೀಡಲಿದ್ದಾರೆ. ಸದ್ಯದಲ್ಲೇ ಸಾಯಿ ಪಲ್ಲವಿ (ಸೀತಾ), ರಣಬೀರ್ ಕಪೂರ್ (ರಾಮ), ಸನ್ನಿ ಡಿಯೋಲ್ (ಹನುಮಾನ್) ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ರಾವಣ ಪಾತ್ರಕ್ಕೆ ಜೀವತುಂಬಲು ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಂಡೇ ಯಶ್ ಅಖಾಡಕ್ಕೆ ಇಳಿದಿದ್ದಾರೆ. ನಟನೆಯ ಜೊತೆ ಸಹ- ನಿರ್ಮಾಪಕನಾಗಿ ಕೂಡ ಅವರು ಕೈಜೋಡಿಸಿದ್ದಾರೆ. ರಾವಣ ಪಾತ್ರಕ್ಕೆ ಬಣ್ಣ ಹಚ್ಚೋದಕ್ಕೂ ಮುನ್ನ ಇತ್ತೀಚೆಗೆ ಉಜ್ಜನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ಅಂದಹಾಗೆ, ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಕನ್ನಡ, ಇಂಗ್ಲಿಷ್‌ ಜೊತೆ ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಮುಂದಿನ ವರ್ಷ ಜ.19ರಂದು ಚಿತ್ರ ರಿಲೀಸ್‌ ಆಗ್ತಿದೆ.

Shwetha M

Leave a Reply

Your email address will not be published. Required fields are marked *