ಮತ್ತೆ ಯಶ್‌ ಬೋಲ್ಡ್‌ ಅವತಾರ! – ಟಾಕ್ಸಿಕ್‌ ಮೊದಲ ಹಾಡು ರಿಲೀಸ್‌ಗೆ ಡೇಟ್‌ ಫಿಕ್ಸ್!

ಮತ್ತೆ ಯಶ್‌ ಬೋಲ್ಡ್‌ ಅವತಾರ! – ಟಾಕ್ಸಿಕ್‌ ಮೊದಲ ಹಾಡು ರಿಲೀಸ್‌ಗೆ ಡೇಟ್‌ ಫಿಕ್ಸ್!

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಇದೇ ಮಾರ್ಚ್‌ 19ರಂದು ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ರಿಲೀಸ್‌ ಆಗಲಿದೆ. ಇದೀಗ ಚಿತ್ರತಂಡ ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಟ್ಟಿದೆ. ಸಿನಿಮಾದ ಮೊದಲ ಹಾಡು ತಬಾಹಿ ಬಿಡುಗಡೆ ದಿನಾಂಕ ಘೋಷಿಸಿದೆ.

ಇದನ್ನೂ ಓದಿ:‌ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಹಿಂದಕ್ಕೆ ಪಡೆಯಲು ಒತ್ತಾಯ! –  ಚಿತ್ತಾಪುರದಲ್ಲಿ ಪ್ರತಿಭಟನೆ

ಟಾಕ್ಸಿಕ್‌ ಸಿನಿಮಾವು ಮಾರ್ಚ್ 19ರಂದು ಜಾಗತಿಕ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಈಗ ಬಿಡುಗಡೆಯಾಗಿರುವ ಈ ಪೋಸ್ಟರ್ ಚಿತ್ರದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೀಗ ಸಿನಿಮಾದ ಮೊದಲ ಹಾಡು ರಿಲೀಸ್‌ಗೆ ಡೇಟ್‌ ಅನೌನ್ಸ್‌ ಆಗಿದೆ.  ಚಿತ್ರತಂಡ ಅಧಿಕೃತವಾಗಿ ಹಾಡಿನ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡ್ತಿದೆ. ಪೋಸ್ಟರ್‌ನಲ್ಲಿ ಯಶ್ ನಟಿಯೊಬ್ಬರನ್ನು ಹೊತ್ತುಕೊಂಡು ಹೋಗುತ್ತಿರುವಂತೆ ಈ ಪೋಸ್ಟರ್‌ ಡಿಸೈನ್‌ ಮಾಡಲಾಗಿದೆ. ಆದರೆ ಆ ನಟಿಯು ಮುಖವನ್ನು ತೋರಿಸಿಲ್ಲ. ಹಾಗಾದರೆ, ಆ ನಟಿ ಯಾರು? ಕಿಯಾರಾ ಅಡ್ವಾಣಿ! ಹೌದು, ಈ ಪೋಸ್ಟರ್‌ನಲ್ಲಿ ಯಶ್‌ ಮತ್ತು ಕಿಯಾರಾ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳ ನಿದ್ದೆ ಗೆಡಿಸಿದೆ.

ಪೋಸ್ಟರ್ನಲ್ಲಿ ಏನಿದೆ?

ಸಮುದ್ರದ ಅಲೆಗಳ ಅಬ್ಬರದ ನಡುವೆ ಯಶ್ ಮತ್ತು ಕಿಯಾರಾ ಅಡ್ವಾಣಿ ಗಾಢವಾದ ಆಲಿಂಗನದಲ್ಲಿರುವ ದೃಶ್ಯ ಈ ಪೋಸ್ಟರ್‌ನಲ್ಲಿದೆ. ಯಶ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರೆ, ಕಿಯಾರಾ ಬಿಳಿ ಉಡುಪಿನಲ್ಲಿ ಅಷ್ಟೇ ತೀವ್ರವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. ಇದು ಬರೀ ಒಂದು ಹಾಡಿನ ಪೋಸ್ಟರ್‌ ಅಲ್ಲ, ಅದಕ್ಕಿಂತಲೂ ಹೆಚ್ಚಾಗಿ ಚಿತ್ರದಲ್ಲಿ ಒಂದು ಗಾಢ ಪ್ರೇಮಕಥೆ ಇದೆ ಎಂಬ ಸುಳಿವನ್ನು ಈ ಪೋಸ್ಟರ್‌ ನೀಡುತ್ತಿದೆ. ಪ್ರೀತಿ, ಆಸೆ ಮತ್ತು ತೀವ್ರತೆಯುಳ್ಳ ಭಾವನೆಗಳ ಸಂಗಮದಂತೆ ಈ ಪೋಸ್ಟರ್ ಮೂಡಿಬಂದಿದೆ.

ತಬಾಹಿಹಾಡಿಗೆ ವಿಶಾಲ್ ಮಿಶ್ರಾ ಮ್ಯೂಸಿಕ್

ಭಾವನಾತ್ಮಕ ಹಾಗೂ ಸೂಪರ್ ಹಿಟ್ ಹಾಡುಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ‌ಬಾಲಿವುಡ್‌ನ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಈ ಹಾಡನ್ನು ಸಂಯೋಜಿಸಿ, ಹಾಡಿದ್ದಾರೆ. ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿಬಂದಿರುವ ‘ತಬಾಹಿ’ ಹಾಡು ಮಾರ್ಚ್ 2 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಯಶ್‌ ಅಭಿಮಾನಿಗಳು ಟಾಕ್ಸಿಕ್‌ ಸಿನಿಮಾದ ಈ ಮೊದಲ ಹಾಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *