ಯಶ್ ಡಿಪ್ರೆಷನ್​ನಲ್ಲಿದ್ದಾರೆ.. – ರಾಕಿಂಗ್‌ ಸ್ಟಾರ್‌ ಬಗ್ಗೆ ಶಾಕಿಂಗ್‌ ಭವಿಷ್ಯ ಹೇಳಿದ ಜ್ಯೋತಿಷಿ!

ಯಶ್ ಡಿಪ್ರೆಷನ್​ನಲ್ಲಿದ್ದಾರೆ.. – ರಾಕಿಂಗ್‌ ಸ್ಟಾರ್‌ ಬಗ್ಗೆ ಶಾಕಿಂಗ್‌ ಭವಿಷ್ಯ ಹೇಳಿದ ಜ್ಯೋತಿಷಿ!

ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ಯಶ್‌ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಶಾಕಿಂಗ್‌ ಭವಿಷ್ಯ ನುಡಿದಿದ್ದಾರೆ. ಯಶ್ ಡಿಪ್ರೆಷನ್​ನಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಜ್ಯೋತಿಷಿ ವಿರುದ್ದ ಯಶ್‌ ಫ್ಯಾನ್ಸ್‌ ಸಿಟ್ಟಾಗಿದ್ದಾರೆ.

ಇದನ್ನೂ ಓದಿ: ಶ್ರೀ ಗಂಧದಗುಡಿಗೂ ಕೈಕೊಟ್ಟ ಸಂಜನಾ? – ಸೀರಿಯಲ್‌ ಬಿಡೋದಾದ್ರೆ ಒಪ್ಪಿಕೊಳ್ಳುವುದೇಕೆ?

ಜ್ಯೋತಿಷಿ ವೇಣು ಸ್ವಾಮಿ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ರಾಕಿಂಗ್‌ ಸ್ಟಾರ್‌ ಯಶ್‌ ಬಗ್ಗೆ ಭವಿಷ್ಯ ಹೇಳಿದ್ದಲ್ಲದೇ, ಯಶ್ ಅವರನ್ನು ಏಕವಚನದಲ್ಲಿ ಕರೆದಿದ್ದಾರೆ. ಸದ್ಯ ಈ ವೈರಲ್ ಆಗಿದೆ. ಯಶ್ ಬಗ್ಗೆ ಈ ರೀತಿ ಮಾತನಾಡಿದ ವೇಣು ಸ್ವಾಮಿ ವಿರದ್ಧ ಯಶ್ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ.

ಯಶ್ ಅಂತ ಒಬ್ಬರು ಹೀರೋ ಇದಾನೆ. ಆತನ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ. ಕನ್ನಡದ ಹೀರೋ ಅಂತ ಹೆಸರು ತೆಗೆದುಕೊಂಡು ಮಾತನಾಡುತ್ತಿದ್ದೇನೆ. ತೆಲುಗು ಹೀರೋ ಆಗಿದ್ರೆ ಮಾತನಾಡುತ್ತಾ ಇರಲಿಲ್ಲ. ಯಶ್ ಡಿಪ್ರೆಷನ್​ ಅಲ್ಲಿದ್ದಾನೆ. ಆತ ಮಾಡಿದ ಎರಡು ಸಿನಿಮಾ ಎಲ್ಲಿಯೋ ಇವೆ. ಕೆಜಿಎಫ್​ನ ಪದೇ ಪದೇ ತೆಗೆಯೋಕಾಗಲ್ಲ. ಕೆಜಿಎಫ್ ರೀತಿಯ ಸಿನಿಮಾ ತೆಗೆಯಲು ಸಾಧ್ಯವಾಗದೆ, ಹೊಸ ಸಿನಿಮಾ ಆಯ್ಕೆ ಮಾಡಲಾಗದೆ ಡಿಪ್ರೆಷನ್​ಗೆ ಹೋಗಿದ್ದಾನೆ. ಸ್ಟಾರ್​ ಡಂನ ಉಳಿಸಿಕೊಳ್ಳೋಕೆ ಆಗ್ತಿಲ್ಲ. ಅದೇ ಟೆನ್ಷನ್​ ಅಲ್ಲಿ ಯಶ್ ಇದ್ದಾನೆ ಎಂದಿದ್ದಾರೆ ವೇಣು ಸ್ವಾಮಿ.

ಯಶ್ ಅವರು ಟಾಕ್ಸಿಕ್ ರೀತಿಯ ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಅಕ್ಕಿನೇನಿ ನಾಗ ಚೈತನ್ಯ-ಸಮಂತಾ ಜಾತಕದ ಬಗ್ಗೆ ವೇಣುಸ್ವಾಮಿ ಹೇಳಿಕೆ ನೀಡಿದ್ದರು. ಅವರು ಬೇರೆ ಆಗುತ್ತಾರೆ ಎಂದು ಭವಿಷ್ಯ ಹೇಳಿದ್ದರು. ಅವರು ಬೇರೆ ಆಗುತ್ತಿದ್ದಂತೆ ಇವರಿಗೆ ಜನಪ್ರಿಯತೆ ಸಿಕ್ಕಿತು. ಸಮಂತಾ ಎರಡನೇ ವಿವಾದಹ ಬಗ್ಗೆಯೂ ಅವರು ಟೀಕೆ ಮಾಡಿದ್ದರು.

Shwetha M