ಯಶ್ ದಯಾಳ್ ವಿರುದ್ಧ ಮತ್ತೊಂದು ರೇ* ಕೇಸ್ – ಅತ್ಯಾ*ಚಾರ ಮತ್ತು ಪೋ*ಕ್ಸೋ ಕಾಯ್ದೆಯಡಿ ಎಫ್‌ಐಆರ್

ಯಶ್ ದಯಾಳ್ ವಿರುದ್ಧ ಮತ್ತೊಂದು ರೇ* ಕೇಸ್ – ಅತ್ಯಾ*ಚಾರ ಮತ್ತು ಪೋ*ಕ್ಸೋ ಕಾಯ್ದೆಯಡಿ ಎಫ್‌ಐಆರ್

ಯಶ್ ದಯಾಳ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮತ್ತೊಂದು ಅತ್ಯಾಚಾರ ಕೇಸ್ ದಾಖಲಾಗಿದೆ.. ಕೆಲ ದಿನಗಳ ಹಿಂದೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣಕ್ಕೆ ಸಂಬಂಧ ಬಂಧನದಿಂದ ಪಾರಾಗಿದ್ದ ಆರ್‌ಸಿಬಿ ಆಟಗಾರ ದಯಾಳ್ ಮೇಲೆ  ಈಗ ಮತ್ತೊಂದು ಅತ್ಯಾಚಾರ ಆರೋಪದ ಕೇಸ್‌ ದಾಖಲಾಗಿದೆ. ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯೊಬ್ಬರು ಕ್ರಿಕೆಟಿಗ ಎರಡು ವರ್ಷಗಳ ಅವಧಿಯಲ್ಲಿ ತನ್ನ ಮೇಲೆ ಪದೇಪದೇ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿ ಕೇಸ್ ದಾಖಲಿಸಿದ್ದಾಳೆ. ಜೈಪುರದಲ್ಲಿ ದಯಾಳ್ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಸಂತ್ರಸ್ತೆ 17 ವರ್ಷ ಇದ್ದಾಗ ದಯಾಳ್ ಅವರನ್ನ ಜೈಪುರದಲ್ಲಿ ಮೊದಲಬಾರಿಗೆ ಭೇಟಿ ಮಾಡಿದ್ದಳಂತೆ. ಸಂತ್ರಸ್ತೆ ಕೂಡ ಕ್ರಿಕೆಟರ್ ಆಗಿದ್ದು, ದಯಾಳ್ ಅವರು ವೃತ್ತಿ ಸಲಹೆ ನೀಡುವ ನೆಪದಲ್ಲಿ ಸೀತಾಪುರದ ಹೋಟೆಲ್‌ಗೆ ಸಂತ್ರಸ್ತೆಯನ್ನ ಕರೆಸಿಕೊಂಡಿದ್ರಂತೆ.  ಅಲ್ಲಿ ಮೊದಲ ಬಾರಿದೆ ದಯಾಳ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿತ್ತಂತೆ..  ಎರಡು ವರ್ಷಗಳ ಕಾಲ ಇವರಿಬ್ಬರು ಸಂಪರ್ಕದಲ್ಲಿದ್ದು, ಯಶ್ ದಯಾಳ್ ಲೈಂಗಿಕ ದೌರ್ಜನ್ಯ ಎಸಗಿದ್ದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣಕ್ಕೂ ಮುನ್ನ ಉತ್ತರಪ್ರದೇಶದ ಗಾಜಿಯಾಬಾದ್‌ನ ಮಹಿಳೆಯೊಬ್ಬರು ಮದುವೆಯಾಗುವುದಾಗಿ ನಂಬಿಸಿ 5 ವರ್ಷಗಳಿಂದ ನನ್ನ ಮೇಲೆ ದಯಾಳ್‌ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕೇಸ್‌ ದಾಖಲಿಸಿದ್ದರು. ಈ ಕೇಸ್‌ನಲ್ಲಿ ಬಂಧನಕ್ಕೆ ತಡೆ ನೀಡುವಂತೆ ದಯಾಳ್‌, ಅಲಹಾಬಾದ್‌ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಂದಿನ ವಿಚಾರಣೆ ನಡೆಸುವವರೆಗೂ ದಯಾಳ್‌ ಅವರನ್ನು ಬಂಧಿಸದಿರುವಂತೆ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಇದೀಗ ದಯಾಳ್‌ ವಿರುದ್‌ ಮತ್ತೊಂತು ಅತ್ಯಾಚಾರ ಪ್ರಕರಣ ಕೇಳಿ ಬಂದಿದೆ. ಹೀಗಾಗಿ ಯಶ್ ದಯಾಳ್ ಯಾವಾಗ ಬೇಕಾದ್ರೂ ಅರೆಸ್ಟ್ ಆಗುವ ಚಾನ್ಸ್ ತುಂಬಾ ಇದೆ.

Kishor KV