ಗಂಡಸರಂದ್ರೆ ಈಕೆಗೆ ದ್ವೇಷ.. ರೀಲ್ಸ್‌ ಕ್ವೀನ್‌ ಈಗ ಸೀರಿಯಲ್‌ ಝಾನ್ಸಿ! -ಮಧುಶ್ರೀ ಭೈರಪ್ಪ ರಿಯಲ್‌ ಸ್ಟೋರಿ!

ಗಂಡಸರಂದ್ರೆ ಈಕೆಗೆ ದ್ವೇಷ.. ರೀಲ್ಸ್‌ ಕ್ವೀನ್‌ ಈಗ ಸೀರಿಯಲ್‌ ಝಾನ್ಸಿ! -ಮಧುಶ್ರೀ ಭೈರಪ್ಪ ರಿಯಲ್‌ ಸ್ಟೋರಿ!

ಕಲರ್ಸ್‌ ಕನ್ನಡದಲ್ಲಿ ಈಗ ಹೊಸ ಸೀರಿಯಲ್‌ ಯಜಮಾನ ಶುರುವಾಗಿದೆ. ವಿಭಿನ್ನ ಕಥಾ ಹಂದರವಿರುವ ಸೀರಿಯಲ್‌ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಗಂಡಸರನ್ನ ದ್ವೇಷಿಸೋ ಹೆಣ್ಣಿನ ಕಥೆ ಇದಾಗಿದೆ. ಇದ್ರಲ್ಲಿ ಸೀರಿಯಲ್‌ ನಾಯಕಿ ಝಾನ್ಸಿ ಪಾತ್ರ ಸಖತ್‌ ಹೈಲೈಟ್‌ ಆಗಿದೆ. ಖಡಕ್‌ ಮಾತು.. ಲುಕ್ ಎಲ್ಲವೂ ವೀಕ್ಷಕರ ಮನಗೆದ್ದಿದೆ. ಇದೀಗ ಝಾನ್ಸಿ ಪಾತ್ರ ಮಾಡ್ತಿರೋ ನಟಿ ಯಾರು? ಆಕೆಯ ಹಿನ್ನೆಲೆ ಏನು ಅಂತಾ ವೀಕ್ಷಕರು ಹುಡುಕಾಡ್ತಿದ್ದಾರೆ. ಅಷ್ಟಕ್ಕೂ ಝಾನ್ಸಿ ಪಾತ್ರ ಮಾಡುತ್ತಿರೋ ನಟಿಯ ಬಗ್ಗೆ ಡಿಟೇಲ್ಸ್‌ ಇಲ್ಲಿದೆ.

ಇದನ್ನೂ ಓದಿ:  ವೈಟ್ ಬಾಲ್ ನಲ್ಲೂ HITಮ್ಯಾನ್ ಠುಸ್ – ಹೀರೋ & ವಿಲನ್ ಹರ್ಷಿತ್ ರಾಣಾ  

ಝಾನ್ಸಿಗೆ ಗಂಡಸರನ್ನ ಕಂಡ್ರೇನೆ ಆಗಲ್ಲ.. ಅವರನ್ನ ಕಂಡ್ರೆ ಕೆಂಡಕಾರ್ತಾಳೆ. ಹೀಗಾಗೇ ಮದುವೆ ಕೂಡ ಆಗಿಲ್ಲ.. ಕೋಟ್ಯಾಂತರ ಬೆಲೆಬಾಳೋ ಆಸ್ತಿ ಇದ್ರೂ ಅದು ಝಾನ್ಸಿ ಕೈಗೆ ಸಿಕ್ತಿಲ್ಲ.. ಆಸ್ತಿ ಸಿಗ್ಬೇಕು ಅಂದ್ರೆ ಆಕೆ ಮದುವೆ ಆಗ್ಬೇಕು. ಇದು ಆಕೆಯ ತಾತನ ಬಯಕೆ ಮಾತ್ರವಲ್ಲ..  ಅವರು ವಿಲ್‌ನಲ್ಲೂ ಹಾಗೇ ಬರೆದಿದ್ದಾರೆ. ಇದೀಗ ಗಂಡಸರನ್ನ ಕಂಡು ದ್ವೇಷಕಾರೋ ಝಾನ್ಸಿ ಆಸ್ತಿಗಾಗಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.  ಅದೂ ಕೂಡ ಕಾಂಟ್ರಾಕ್ಟ್ ಮದುವೆ. ಈಗ ಝಾನ್ಸಿಗೆ ಒಳ್ಳೆ ಬಕ್ರಾ ಸಿಕ್ಕಿದ್ದಾನೆ. ಆಫೀಸ್‌ ಗೆ ಕೆಲಸ ಕೇಳಲು ಬಂದಿರೋ ನಾಯಕ ರಾಘವೇಂದ್ರನಿಗೆ ಕಾಂಟ್ರಾಕ್ಟ್ ಮದುವೆಯಾಗಲು ಹೇಳಿದ್ದಾಳೆ..  ಆದರೆ ರಾಘವೇಂದ್ರ ಇದನ್ನು ತಿರಸ್ಕರಿಸಿದ್ದಾನೆ. ಆದರೆ ಝಾನ್ಸಿ ಅವನನ್ನು ಒಂದು ತಿಂಗಳ ಮಟ್ಟಿಗೆ ಗಂಡನನ್ನಾಗಿ ಮಾಡುವ ನಿರ್ಧಾರ ಮಾಡಿಯಾಗಿದೆ. ಇದೀಗ ನಾಯಕಿ ಅದು ಹೇಗೆ ನಾಯಕನನ್ನು ಮದುವೆಗೆ ಒಪ್ಪಿಸುತ್ತಾಳೆ. ಮದುವೆಯ ನಂತರ ಕಥೆಯಲ್ಲಿ ಯಾವ ರೀತಿ ಟ್ವಿಸ್ಟ್ ಸಿಗಲಿದೆ ಎಂಬುವುದೇ ಈ ಸೀರಿಯಲ್‌ ಸ್ಟೋರಿ.. ಇದೀಗ ಝಾನ್ಸಿ ಆಕ್ಟಿಂಗ್‌ ಗೆ ವೀಕ್ಷಕರು ಫಿದಾ ಆಗಿದ್ದಾರೆ. ಆ ನಟಿಯ ಲೈಫ್‌ ಸ್ಟೋರಿ ತಿಳಿದುಕೊಳ್ಳಲು ಮುಂದಾಗಿದ್ದಾರೆ.. ಅಷ್ಟಕ್ಕೂ ಯಜಮಾನ ಸೀರಿಯಲ್‌ ನಲ್ಲಿ ಝಾನ್ಸಿ ಪಾತ್ರಕ್ಕೆ ಜೀವ ತುಂಬುತ್ತಿರೋದು  ಮಧುಶ್ರೀ ಭೈರಪ್ಪ.

ಮೂಲತಃ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಮಧುಶ್ರೀಗೆ ಇದು ಮೊದಲ ಧಾರಾವಾಹಿ ಹೌದು. ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಆಗಿರೋ ಮಧುಶ್ರೀ,  ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡುವ ಈಕೆ ಅವುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.  ಇನ್ನು ಮಧುಶ್ರೀ ಯೂಟ್ಯೂಬ್‌ ಚಾನೆಲ್‌ ಕೂಡ ಹೊಂದಿದ್ದು, , ಆಗಾಗ ವ್ಲಾಗ್‌ಗಳನ್ನು ಕೂಡಾ ಮಾಡುತ್ತಿರುತ್ತಾರೆ.

ಇನ್ನು ಮಧುಶ್ರೀ ಎಂಕಾಂ ಪದವೀಧರೆಯಾಗಿದ್ದಾರೆ.  ಮಧುಶ್ರೀ ಭೈರಪ್ಪ ಅವರು ‘ಯಜಮಾನ’ ಧಾರಾವಾಹಿಗಿಂತಲೂ ಮೊದಲು ಬೇರೊಂದು ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ನಿರ್ದೇಶಕ ರಾಮ್ ಜೀ ಅವರ ನಿರ್ದೇಶನದ ‘ಯಜಮಾನ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಿರುತೆರೆಗೆ ಎಂಟ್ರಿ ಪಡೆದಿದ್ದಾರೆ.  ಝಾನ್ಸಿ  ಪಾತ್ರದ ಮೂಲಕ ವೀಕ್ಷಕರರನ್ನ ಮನರಂಜಿಸುತ್ತಿದ್ದಾರೆ.

ಒಟ್ಟಿನಲ್ಲಿ ರೀಲ್ಸ್ ಮಾಡಿ ನೆಟ್ಟಿಗರ ಮನ ಸೆಳೆದಿದ್ದ ಬೆಡಗಿ ಇದೀಗ ನಟನೆಯ ಮೂಲಕ ಕಿರುತೆರೆ ಎಂಟ್ರಿ ಪಡೆದಿದ್ದಾರೆ..  ಇದೇ ಮೊದಲ ಬಾರಿಗೆ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಇವರಿಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ ಅನ್ನೋದೇ ಎಲ್ಲರ ಆಶಯ.

Shwetha M