ಕನ್ನಡ ಓದಲು  ಬರಲ್ಲ.. ವರ್ಷಕ್ಕೆ 3 ಪರೀಕ್ಷೆ ನಡೆಸಲು ಹೊರಟು ಸುಮ್ಮನಾದರು – ಮಧು ಬಂಗಾರಪ್ಪ ವಿರುದ್ಧ ನಾರಾಯಣಸ್ವಾಮಿ ಕಿಡಿ

ಕನ್ನಡ ಓದಲು  ಬರಲ್ಲ.. ವರ್ಷಕ್ಕೆ 3 ಪರೀಕ್ಷೆ ನಡೆಸಲು ಹೊರಟು ಸುಮ್ಮನಾದರು – ಮಧು ಬಂಗಾರಪ್ಪ ವಿರುದ್ಧ ನಾರಾಯಣಸ್ವಾಮಿ ಕಿಡಿ

ವಿಧಾನ ಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವೈಎ ನಾರಾಯಣಸ್ವಾಮಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಅವಾಂತರವಾಗಿದೆ ಎಂದು ಹೇಳಿದ್ದಾರೆ

ಇದನ್ನೂ ಓದಿ:  ನೀರು ಎಂದು ಆ್ಯಸಿಡ್ ಕುಡಿದ ಮಗು – 1 ವಾರ ಜೀವನ್ಮರಣ ಹೊರಾಟ..  ಬದುಕಲಿಲ್ಲ ಪುಟ್ಟ ಕಂದಮ್ಮ

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಅವರು, ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಕನ್ನಡ ಓದಲು ಸರಿಯಾಗಿ ಬರಲ್ಲ. ವರ್ಷಕ್ಕೆ ಮೂರು ಪರೀಕ್ಷೆ ನಡೆಸಲು ಹೊರಟು ಸುಮ್ಮನಾದರು. ಹತ್ತನೆ ತರಗತಿ ಪರೀಕ್ಷೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಮಕ್ಕಳನ್ನು ಹೆದರಿಸಿ ಪರೀಕ್ಷೆ ಬರೆಸಿದರು. 20 ಪರ್ಸೆಂಟ್‌ ಗ್ರೇಸ್‌ ಮಾರ್ಕ್ಸ್‌ ನೀಡಿ ಕಾಂಗ್ರೆಸ್‌ ಸರಕಾರ ಮಾನ ಉಳಿಸಿಕೊಂಡಿದೆ. ಮುಖ್ಯ ಶಿಕ್ಷಕರು, ಶಿಕ್ಷಕರಿಗೆ ಎರಡು ತಿಂಗಳಿನಿಂದ ಸಂಬಳ ನೀಡಿಲ್ಲ. ಸಿ.ಸಿ. ಕ್ಯಾಮೆರಾ ಅಳವಡಿಸಲು ಖರ್ಚಾಗುವ ಎರಡು ಲಕ್ಷ ರೂ.ಗಳನ್ನು ನೀಡುವವರಾರು ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಂಟುವರೆ ಲಕ್ಷ ಮಕ್ಕಳಲ್ಲಿ ಆರು ಲಕ್ಷ ಮಕ್ಕಳು ಪಾಸ್‌ ಆಗಿದ್ದಾರೆ. ಉಳಿದ ಎರಡೂವರೆ ಲಕ್ಷ ಮಕ್ಕಳ ಗತಿ ಏನು? ಶಿಕ್ಷಕರ ರಜೆ ಕಡಿತಗೊಳಿಸಿದೆ. ಶಿಕ್ಷಕರು, ನೌಕರರು, ಅಧಿಕಾರಿಗಳನ್ನು ಕಂಡರೆ ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಆಗಲ್ಲ. ಸದನದ ಒಳಗೆ ಹೊರಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕಳೆದ ಇಪ್ಪತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.

Shwetha M