ಎಲಾನ್ ಮಸ್ಕ್ಗೆ ಸಂಕಷ್ಟ ತಂದ X – ಟ್ವಿಟರ್ ಕೇಂದ್ರ ಕಚೇರಿ ಕಟ್ಟಡದಲ್ಲಿದ್ದ ಲೋಗೋಗೆ ಗೇಟ್ಪಾಸ್!
ಸ್ಯಾನ್ ಫ್ರಾನ್ಸಿಸ್ಕೋ: ಎಲಾನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಸಾವಿರಾರು ಉದ್ಯೋಗಿಗಳ ವಜಾ, ಸಿಇಒ ಬದಲಾವಣೆ ಹೀಗೆ ಸಾಕಷ್ಟು ವಿಚಾರಗಳಿಂದ ಟ್ವಿಟರ್ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟ್ಟರ್ ಕಂಪನಿಯ ಲೋಗೋವನ್ನ ಎಲಾನ್ ಮಸ್ಕ್ ʼXʼ ಅಂತಾ ಬದಲಾಯಿಸಿದ್ದರು. ಬಳಿಕ ಲೋಗೋವನ್ನ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿರುವ ಮುಖ್ಯಕಚೇರಿ ಕಟ್ಟಡ ಮೇಲೂ ಅಳವಡಿಸಲಾಗಿತ್ತು. ಆದ್ರೀಗ ಇದ್ದಕ್ಕಿದ್ದಂತೆ ಲೋಗೋವನ್ನ ಕಚೇರಿ ಕಟ್ಟಡದಿಂದ ತೆಗೆದು ಹಾಕಲಾಗಿದೆ.
ಇದನ್ನೂ ಓದಿ: ‘ಲೀಡರ್ ರಾಮಯ್ಯ’ ಸಿನಿಮಾದ ಮೊದಲ ಪಾರ್ಟ್ನಲ್ಲಿ ನಿರೂಪ್ ಭಂಡಾರಿ ಹೀರೋ..!
ಎಲಾನ್ ಮಸ್ಕ್ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿರುವ ಹಕ್ಕಿಗೆ ಬದಲಾಗಿ ಎಕ್ಸ್ ಚಿಹ್ನೆ ಬಂದಿದೆ. ಮಸ್ಕ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ನ ಪ್ರಧಾನ ಕಚೇರಿಯಲ್ಲಿ ‘X’ ಗುರುತಿನ ಲೋಗೋ ಹಾಕಿದ್ದರು. ಕಂಪನಿಯ ಕಟ್ಟಡದ ಮೇಲೆ ಹಾಕಿದ್ದ ಲೋಗೋಗೆ ಪ್ರಕಾಶಮಾನವಾದ ವಿದ್ಯುತ್ ಬಲ್ಬ್ಗಳನ್ನು ಅಳವಡಿಸಲಾಗಿತ್ತು. ರಾತ್ರಿ ಹೊತ್ತಿನಲ್ಲಿ ಪ್ರಕಾಶಮಾನವಾಗಿ ದೀಪ ಬೆಳಗುವುದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳು ಕೇಳಿಬಂದಿವೆ.
ಮಾಧ್ಯಮಗಳ ವರದಿ ಪ್ರಕಾರ, ಕಟ್ಟಡದ ಮೇಲೆ ದೀಪದೊಂದಿಗೆ ಎಕ್ಸ್ ಲೋಗೋವನ್ನು ಅಳವಡಿಸಿದ ನಂತರ ನಗರ ಕಟ್ಟಡ ಇಲಾಖೆಗೆ ಸುಮಾರು 24 ದೂರುಗಳು ದಾಖಲಾಗಿವೆ. ಈ ಬೆಳಕಿನಿಂದ ತೊಂದರೆಯಾಗುತ್ತಿದ್ದು, ಕಟ್ಟಡದಿಂದ ತೆರವು ಮಾಡಬೇಕು ಎಂಬುದು ಬಹುತೇಕರ ದೂರು. ಕಟ್ಟಡ ಮಾಲೀಕರಿಗೂ ದಂಡ ಸ್ಥಳೀಯ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಲಾಂಛನ ತೆಗೆಸುವುದರ ಜತೆಗೆ ಕಟ್ಟಡ ಮಾಲೀಕರಿಗೂ ದಂಡ ವಿಧಿಸಲಾಗಿದೆ.