ಚಂದನವನಕ್ಕೆ ಕಾಲಿಡ್ತಿದ್ದಾರೆ ದಿ ಗ್ರೇಟ್ ಖಲಿ – ‘ಕೆಂಡದ ಸೆರಗು’ ಚಿತ್ರದಲ್ಲಿ ‘ರಿಯಲ್ ಫೈಟರ್’ ಹವಾ..!
ಚಂದನವನದಲ್ಲಿ ಸದ್ಯ ಟೀಸರ್ ಮೂಲಕವೇ ಸದ್ದು ಮಾಡ್ತಿರುವ ಸಿನಿಮಾ ಕೆಂಡದ ಸೆರಗು. ಟೀಸರ್ ನೋಡಿದ ಬಹುತೇಕರಿಗೆ ಇದು ಫೈಟಿಂಗ್ ಆಧಾರಿತ ಚಿತ್ರ ಅನ್ನೋದು ಗೊತ್ತಾಗುತ್ತೆ. ಸದ್ಯ ಇದೇ ಸಿನಿಮಾಗೆ WWE ಫೈಟರ್ ದಿ ಗ್ರೇಟ್ ಖಲಿ ಎಂಟ್ರಿ ಕೊಡ್ತಿದ್ದಾರೆ. ಈ ವಿಚಾರ ದ್ಯ ಭಾರೀ ಹಲ್ ಚಲ್ ಸೃಷ್ಟಿಸಿದೆ.
ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಕೆಂಡದ ಸೆರಗು’. ಭೂಮಿ ಶೆಟ್ಟಿ, ಮಾಲಾಶ್ರೀ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಕಿ ಸೋಮ್ಲಿ ಅವರೇ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಕುಸ್ತಿ ಪಟುವಿನ ಕಥೆಯನ್ನು ಹೇಳಲಾಗುತ್ತಿದೆ.
ಇದನ್ನೂ ಓದಿ : ‘ಫಿಫಾ’ ಬಳಿಕ ‘ಆಸ್ಕರ್’ ಅಂಗಳಕ್ಕೆ ದೀಪಿಕಾ ಪಡುಕೋಣೆ – ಹಾಲಿವುಡ್ ಮಂದಿ ಜತೆ ಮಿಂಚಲಿದ್ದಾರೆ ಬಾಲಿವುಡ್ ಬೆಡಗಿ!
ರಿಲೀಸ್ ಆದ ಟೀಸರ್ನಲ್ಲಿ ಉತ್ತರ ಕರ್ನಾಟಕ ಭಾಷೆ ಹೆಚ್ಚು ಗಮನ ಸೆಳೆದಿದೆ. ರಾಕಿ ಸೋಮ್ಲಿ ಅವರು ಖಲಿ ಅವರನ್ನು ಭೇಟಿ ಮಾಡಿ ಕಥೆ ಹಾಗೂ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಸಿನಿಮಾದ ಕಥೆ ಹಾಗೂ ಪಾತ್ರ ಇಷ್ಟವಾಗಿದ್ದು, ಚಿತ್ರದಲ್ಲಿ ನಟಿಸೋಕೆ ಖಲಿ ಒಪ್ಪಿದ್ದಾರೆ. ಖಲಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ರಾಕಿ ಸೋಮ್ಲಿ ಚಿತ್ರತಂಡಕ್ಕೆ ಖಲಿ ಎಂಟ್ರಿ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಖಲಿ ಭಾಗದ ಚಿತ್ರೀಕರಣ ಆರಂಭವಾಗಲಿದೆ.
ನಟಿ ಮಾಲಾಶ್ರೀ ಅವರು ಇತ್ತೀಚೆಗೆ ಸಿನಿಮಾದಿಂದ ದೂರವೇ ಉಳಿದಿದ್ರು. ಆದ್ರೀಗ ‘ಕೆಂಡದ ಸೆರಗು’ ಚಿತ್ರದಲ್ಲಿ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ. ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.