WTC ಫೈನಲ್ ಸೋಲಿಗೆ ಆಸೀಸ್ ಸೇಡು! – 214 ರನ್‌ಗಳ ಭರ್ಜರಿ ಜಯ! ದಕ್ಷಿಣ ಆಫ್ರಿಕಾ 3ನೇ ಸ್ಥಾನಕ್ಕೆ ಕುಸಿತ!

WTC ಫೈನಲ್ ಸೋಲಿಗೆ ಆಸೀಸ್ ಸೇಡು! – 214 ರನ್‌ಗಳ ಭರ್ಜರಿ ಜಯ! ದಕ್ಷಿಣ ಆಫ್ರಿಕಾ 3ನೇ ಸ್ಥಾನಕ್ಕೆ ಕುಸಿತ!

2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ ಸೋಲಿಗೆ ಆಸ್ಟ್ರೇಲಿಯಾ ಸೇಡು ತೀರಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಆಸ್ಟ್ರೇಲಿಯಾ ದಾಖಲಿಸಿರುವ ಭರ್ಜರಿ ಗೆಲುವು ಇದೀಗ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.

ಡರ್ಬನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 214 ರನ್‌ಗಳ ಭರ್ಜರಿ ಜಯ ಸಾಧಿಸಿದೆ ಎಂಬ ವರದಿಯಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತನ್ನ ಬಲವನ್ನು ಪ್ರದರ್ಶಿಸಿದೆ. 2018ರ ಸ್ಯಾಂಡ್‌ಪೇಪರ್ ಹಗರಣದ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಗೆಲುವು ದಾಖಲಿಸಿದೆ .

ಈ ಗೆಲುವಿನೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 137.2 ಓವರ್‌ಗಳಲ್ಲಿ 390/10 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 91 ಓವರ್‌ಗಳಲ್ಲಿ 284/10 ರನ್ ಗಳಿಸಿದೆ. ನಂತರ 2ನೇ ಇನ್ನings‌ನಲ್ಲಿ ಆಸ್ಟ್ರೇಲಿಯಾ ತಂಡ 58 ಓವರ್‌ಗಳಲ್ಲಿ 314/6 ಗಳಿಸಿ ಡಿಕ್ಲೇರ್ ಘೋಷಿಸಿತು. 421 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 86.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತ್ತು.

ಇದನ್ನೂ ಓದಿ: ಶಮಿಗೂ ಕಂ ಬ್ಯಾಕ್ ಟೈಂ ಬಂತಾ? – ರಣಜಿ 4 ವಿಕೆಟ್.. BCCI ಅಲರ್ಟ್

ಇನ್ನು 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ಉಭಯ ತಂಡಗಳ ನಡುವಿನ ಪೈಪೋಟಿಗೆ ಮತ್ತಷ್ಟು ಮಹತ್ವ ಬಂದಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲೂ ಈ ಫಲಿತಾಂಶ ಮಹತ್ವದ ಬದಲಾವಣೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಗಟ್ಟಿಪಡಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾ ಮೂರನೇ ಸ್ಥಾನಕ್ಕೆ ಕುಸಿದಿದೆ ಎನ್ನಲಾಗಿದೆ.

ಮತ್ತೊಂದೆಡೆ, ಈ ಪಂದ್ಯಕ್ಕೂ ಮುನ್ನ 80% (PCT) ನೊಂದಿಗೆ ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು, ಈ ಸೋಲಿನ ನಂತರ 60.00% (PCT) ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. 2025ರ ಡಬ್ಲ್ಯುಟಿಸಿ ವಿಜೇತರಾದ ದಕ್ಷಿಣ ಆಫ್ರಿಕಾ, ಪ್ರಸ್ತುತ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಎರಡರಲ್ಲಿ ಸೋಲನ್ನು ಅನುಭವಿಸಿದೆ. ದಕ್ಷಿಣ ಆಫ್ರಿಕಾ ತಂಡ ಹಿಂಬಡ್ತಿ ಪಡೆಯುತ್ತಿದ್ದಂತೆ ಕಿವೀಸ್ ತಂಡ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಕಿವೀಸ್ ಪಡೆ 6 ಪಂದ್ಯಗಳನ್ನಾಡಿದ್ದು, 4 ಗೆಲುವು, 1 ಸೋಲು, 1 ಡ್ರಾನೊಂದಿಗೆ 72.22% (PCT) ಅಂಕ ಹೊಂದಿದೆ.

ಆದರೆ, ಸರಣಿಯ ಮೊದಲ ಪಂದ್ಯವೊಂದರ ಫಲಿತಾಂಶದಿಂದಲೇ ಅಂತಿಮ ಚಿತ್ರಣ ನಿರ್ಧಾರವಾಗುವುದಿಲ್ಲ. ಮುಂದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಹೇಗೆ ತಿರುಗೇಟು ನೀಡಲಿದೆ ಎಂಬುದೇ ಈಗಿನ ಕುತೂಹಲ. ಆಸ್ಟ್ರೇಲಿಯಾ ತನ್ನ ಗೆಲುವಿನ ಓಟ ಮುಂದುವರಿಸಲಿದೆಯಾ? ಕಾದು ನೋಡಬೇಕು!

Kishor KV

Leave a Reply

Your email address will not be published. Required fields are marked *