WTC ರೇಸ್ ನಿಂದ ಭಾರತ OUT? – 1 ಸೋಲು.. 3 ಪಂದ್ಯ.. ಸವಾಲುಗಳೆಷ್ಟು?
IND & AUSಗೆ ಸೌತ್ ಆಫ್ರಿಕಾ ಆಘಾತ

WTC ರೇಸ್ ನಿಂದ ಭಾರತ OUT? – 1 ಸೋಲು.. 3 ಪಂದ್ಯ.. ಸವಾಲುಗಳೆಷ್ಟು?IND & AUSಗೆ ಸೌತ್ ಆಫ್ರಿಕಾ ಆಘಾತ

ಒಂದು ಸೋಲು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಸೋಲು ಭಾರತದ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡ್ಬೇಕು ಅನ್ಕೊಂಡಿದ್ದ ಟೀಂ ಇಂಡಿಯಾ ಕನಸಿಗೆ ಕೊಳ್ಳಿ ಇಟ್ಟಿದೆ. ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 290ಕ್ಕೂ ಹೆಚ್ಚು ರನ್​​ಗಳಿಂದ ಗೆದ್ದು ವಿಶ್ವದಾಖಲೆ ಬರೆದಿದ್ದ ಟೀಮ್​​ ಇಂಡಿಯಾ 2ನೇ ಮ್ಯಾಚ್​​ನಲ್ಲಿ ಹೀನಾಯ ಸೋಲು ಕಂಡಿದೆ. ಇದೇ ಸೋಲು ಭಾರತವನ್ನು ಡಬ್ಲ್ಯುಟಿಸಿ ಫೈನಲ್ ರೇಸ್​ನಿಂದಲೇ ಹೊರಬೀಳೋ ಸಿಚುಯೇಷನ್ ತಂದಿಟ್ಟಿದೆ. ಸದ್ದು ಗದ್ಧಲವಿಲ್ಲದೆ ಸೌತ್ ಆಫ್ರಿಕಾ ತಂಡ ಟಾಪ್​1ಗೆ ಲಗ್ಗೆ ಇಟ್ಟಿದ್ರೆ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಹಾಗಾದ್ರೆ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಿಂದ ಹೊರಬೀಳುತ್ತಾ? ಇನ್ನು ಎಷ್ಟು ಪಂದ್ಯಗಳನ್ನ ಗೆದ್ರೆ ಅವಕಾಶ ಇದೆ? ಮೂರನೇ ಮ್ಯಾಚ್​ಗೆ ಹೇಗಿದೆ ಸ್ಟ್ರಾಟರ್ಜಿ? ಈ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಅಣ್ಣಯ್ಯ ಅಲ್ಲ ಮಿಲನಾ 2!! – ಸಿದ್ಧಾರ್ಥ್‌ ಸತ್ಯ.. ಶಿವು ಮೇಲೆ ಲವ್!

ಟೀಂ ಇಂಡಿಯಾ ಬ್ಯಾಟರ್​​ಗಳ ಫ್ಲ್ಯಾಪ್ ಶೋದಿಂದಾಗಿ ಈಗ ಇಡೀ ತಂಡವೇ ದೊಡ್ಡ ಬೆಲೆ ತೆರಬೇಕಾಗಿದೆ. ಆಸ್ಟೇಲಿಯಾ ವಿರುದ್ಧ ಪರ್ತ್ ನಲ್ಲಿನ ಸೋಲು ಟೀಂ ಇಂಡಿಯಾವನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಫಸ್ಟ್ ಪ್ಲೇಸ್​ನಿಂದ 3ನೇ ಸ್ಥಾನಕ್ಕೆ ದೂಡಿದೆ. ಶ್ರೀಲಂಕಾ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ ಅಚ್ಚರಿಯ ರೀತಿಯಲ್ಲಿ ನಂಬರ್ 1 ಸ್ಥಾನಕ್ಕೆ ಜಂಪ್ ಆಗಿದೆ. ಟಾಪ್ 2ನಲ್ಲಿ ಆಸ್ಟ್ರೇಲಿಯಾ ತಂಡ ಇದೆ.

ಆಸ್ಟ್ರೇಲಿಯಾ ಮತ್ತು ಭಾರತಕ್ಕೆ ಶಾಕ್ ಕೊಟ್ಟ ಹರಿಣಗಳ ಪಡೆ!

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್​ನಲ್ಲಿ ಆಲ್ಮೋಸ್ಟ್ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳೇ ಆಡುತ್ವೆ ಅಂತಾ ಎಲ್ರೂ ಅನ್ಕೊಂಡಿದ್ರು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಮತ್ತು 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾಗಳೇ ಫೈನಲ್ ಆಡುವ ತಂಡಗಳು ಅಂತಾ ಎಲ್ರೂ ಅನ್ಕೊಳ್ತಿದ್ರು. 75ಕ್ಕೂ ಅಧಿಕ ಸರಾಸರಿ ಅಂಕಗಳನ್ನ ಕಲೆ ಹಾಕಿದ್ದ ಭಾರತದ ತಂಡದ ಹತ್ತಿರಕ್ಕೂ ಯಾರೂ ಸುಳಿಯುವ ಸಾಧ್ಯತೆಯೇ ಇರಲಿಲ್ಲ. 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಔಟ್ ಆದ್ರೂ ಭಾರತ ಸೇಫ್ ಅನ್ನೋದೇ ಎಲ್ಲರ ಲೆಕ್ಕಾಚಾರವಾಗಿತ್ತು. ಬಟ್ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ ಸೌತ್ ಆಫ್ರಿಕಾ ತಂಡ ಭಾರತ ಮತ್ತು ಆಸ್ಟ್ರೇಲಿಯಾಗೆ ಶಾಕ್ ಕೊಟ್ಟು ಟಾಪ್ ಪ್ಲೇಸ್​ನಲ್ಲಿದೆ.

ನ್ಯೂಜಿಲೆಂಡ್ ವಿರುದ್ಧದ ವೈಟ್ ವಾಷ್ ಎಫೆಕ್ಟ್!

ಭಾರತದ ಕ್ಯಾಲ್ಕುಲೇಶನ್​ಗಳನ್ನ ಉಲ್ಟಾ ಪಲ್ಟಾ ಮಾಡಿದ್ದೇ ನ್ಯೂಜಿಲೆಂಡ್ ವಿರುದ್ಧದ ಸರಣಿ. ಟೀಂ ಇಂಡಿಯಾಗೆ  ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಮುಂಚಿತವಾಗಿ ಉಳಿದಿದ್ದು ಜಸ್ಟ್ ಎರಡೇ ಸಿರೀಸ್. ಒಂದು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ. ಎರಡನೇಯದು ಆಸ್ಚ್ರೇಲಿಯಾದಲ್ಲಿ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ. ನ್ಯೂಜಿಲೆಂಡ್ ವಿರುದ್ಧ ಸುಲಭದಲ್ಲಿ ಗೆದ್ದು, ಆಸ್ಟ್ರೇಲಿಯಾ ಸರಣಿಯಲ್ಲಿ ಎರಡು ಪಂದ್ಯ ಗೆದ್ದರೂ ಭಾರತದ ಫೈನಲ್ ಪ್ರವೇಶ ಫಿಕ್ಸ್ ಆಗಿತ್ತು. ಬಟ್ ನ್ಯೂಜಿಲೆಂಡ್ ತಂಡ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿತು. ಯಾರೂ ಊಹಿಸದ ರೀತಿಯಲ್ಲಿ ಸರಣಿಯನ್ನು 3-0 ಅಂತರದಿಂದ ಕ್ವೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್ ಭಾರತಕ್ಕೆ ದೊಡ್ಡ ಪೆಟ್ಟು ನೀಡಿತು. ಇದೇ ಎಫೆಕ್ಟ್ ಈಗ ಆಸ್ಟ್ರೇಲಿಯಾ ಸರಣಿ ಮೇಲೆ ಬೀರ್ತಿದೆ. ಪರ್ತ್ ನಲ್ಲಿ ಗೆದ್ದರೂ ಅಡಿಲೇಡ್ ನಲ್ಲಿ ಸೋತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್​ನಲ್ಲಿ ಭಾರತಕ್ಕೆ ಉಳಿದಿರೋದು  ಕೇವಲ 3 ಪಂದ್ಯಗಳಷ್ಟೇ. ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ರಷ್ಟೇ ಭಾರತಕ್ಕೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಲು ಸಾಧ್ಯವಾಗುತ್ತೆ.

ಭಾರತ Vs ಆಸ್ಟ್ರೇಲಿಯಾ.. ಯಾರಿಗೆ ಫೈನಲ್ ರೇಸ್? 

ಶ್ರೀಲಂಕಾ ವಿರುದ್ದದ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕಾ ಸದ್ಯ ಅಂಕಪಟ್ಟಿಯಲ್ಲಿ 63.33 ಸರಾಸರಿ ಅಂಕ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ಹರಿಣಗಳು ಪಾಕಿಸ್ತಾನದ ವಿರುದ್ಧ 2 ಟೆಸ್ಟ್ ಗಳ ಸರಣಿಯನ್ನು ಆಡಬೇಕಿದೆ. ಪಾಕ್ ವಿರುದ್ಧದ ಸರಣಿಯಲ್ಲಿ 1 ಪಂದ್ಯ ಗೆದ್ದರೂ ಆಫ್ರಿಕಾ 1ನೇ ಸ್ಥಾನದಲ್ಲೇ ಭದ್ರವಾಗಿರಲಿದೆ. ಒಂದು ವೇಳೆ ಸರಣಿ 1-1 ಸಮಬಲಗೊಂಡಲ್ಲಿ ಆಫ್ರಿಕಾ 61.11 ಸರಾಸರಿ ಅಂಕಗಳಾಗಲಿದೆ. ಆಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ 1ನೇ ಸ್ಥಾನಕ್ಕೇರಲು ಅವಕಾಶವಿದೆ. ಒಂದು ವೇಳೆ ಎರಡೂ ಪಂದ್ಯಗಳು ಡ್ರಾ ಆದಲ್ಲಿ ಆಗ ದಕ್ಷಿಣ ಆಫ್ರಿಕಾ ತಂಡದ ಸರಾಸರಿ ಅಂಕ 58.33 ಆಗುತ್ತೆ. ಆಗ ಭಾರತ ತಂಡ ಆಸ್ಟ್ರೇಲಿಯಾವನ್ನು ಉಳಿದಿರೋ 3 ಪಂದ್ಯಗಳ ಪೈಕಿ ಎರಡನ್ನಾದ್ರೂ ಗೆಲ್ಲಲೇಬೇಕು. ಆ ನಂತ್ರ ಆಸ್ಚ್ರೇಲಿಯಾ ತನ್ನ ಮುಂದಿನ ಸರಣಿಯಲ್ಲಿ ಶ್ರೀಲಂಕಾವನ್ನು 2-0 ಅಂತರದಿಂದ ಸೋಲಿಸಿದಲ್ಲಿ ದಕ್ಷಿಣ ಆಫ್ರಿಕಾ ಫೈನಲ್ ಸ್ಪರ್ಧೆಯಿಂದ ಹೊರಬೀಳಲಿದೆ. ಪಾಕಿಸ್ತಾನ ತಂಡ ಎರಡೂ ಪಂದ್ಯಗಳನ್ನು ಗೆದ್ದರೆ ಭಾರತದ ಫೈನಲ್ ಪ್ರವೇಶ ಸುಲಭವಾಗಲಿದೆ.

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ರಿಸಲ್ಟ್.. ಸೌತ್ ಆಫ್ರಿಕಾಗೆ ಎಫೆಕ್ಟ್!

ಪಾಯಿಂಟ್ಸ್ ಟೇಬಲ್​ನಲ್ಲಿ ಟಾಪ್​ನಲ್ಲಿರೋ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನದ ವಿರುದ್ಧ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡ್ರೆ ಬೇರೆಯದ್ದೇ ಲೆಕ್ಕಾಚಾರ ಇರಲಿದೆ. ಸೌತ್ ಆಫ್ರಿಕಾ ಪಡೆ ಫೈನಲ್ ಪ್ರವೇಶಿಸಲು ಆಸ್ಟ್ರೇಲಿಯಾದ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಆಸ್ಚ್ರೇಲಿಯಾ ಇನ್ನುಳಿದಿರುವ 3 ಪಂದ್ಯಗಳಲ್ಲಿ ಭಾರತವನ್ನು 2ರಲ್ಲಿ ಸೋಲಿಸಿದರೆ ಅದು ಆಫ್ರಿಕಾಗೆ ಪ್ಲಸ್ ಆಗುತ್ತೆ. ಅಥವಾ ಭಾರತ ಒಂದು ಗೆಲುವು ಮತ್ತು ಒಂದು ಡ್ರಾ ಕೂಡ ಆಫ್ರಿಕಾದ ಫೈನಲ್ ಯಾತ್ರೆಗೆ ಬಹಳ ಸಹಾಯಕವಾಗಲಿದೆ. ನಾಲ್ಕನೇ ಸ್ಥಾನದಲ್ಲಿರೋ ಶ್ರೀಲಂಕಾ ಟಾಪ್ 2ಗೆ ಬರೋದು ಕಷ್ಟ ಇದೆ. ಪ್ರಸ್ತುತ 45.45 ಸರಾಸರಿ ಅಂಕಗಳನ್ನು ಹೊಂದಿರುವ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ತಂಡದ ವಿರುದ್ದ ಉಳಿದಿರುವ 2 ಟೆಸ್ಟ್ ಪಂದ್ಯಗಳನ್ನು ಗೆದ್ದರೂ ಅಂತಿಮವಾಗಿ 53.85 ಸರಾಸರಿ ಅಂಕಗಳನ್ನು ಗಳಿಸಲಿದೆ. ಆಗ ಬೇರೆ ತಂಡಗಳ ಫಲಿತಾಂಶವನ್ನ ಅವಲಂಬಿಸಬೇಕಾಗುತ್ತದೆ. ಹೀಗಾಗಿ ಶ್ರೀಲಂಕಾ ಫೈನಲ್ ಹಾದಿ ಕಷ್ಟವಿದೆ. ಹೀಗಾಗಿ ಸದ್ಯಕ್ಕೆ ಫೈನಲ್ ರೇಸ್ ಒಂದು ರೀತಿಯಲ್ಲಿ ಭಾರತ- ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ನಡುವಿನ ತ್ರಿಕೋನ ಸರಣಿಯ ರೂಪ ಪಡೆದುಕೊಂಡಿದೆ.

ಸದ್ಯ ಮುಂದಿನ 3 ಪಂದ್ಯಗಳನ್ನ ಗೆಲ್ಲಲೇಬೇಕು ಅಂತಾ ಟಾರ್ಗೆಟ್ ಇಟ್ಟುಕೊಂಡಿರೋ ಟೀಂ ಇಂಡಿಯಾ ಈಗಾಗ್ಲೇ ಅಭ್ಯಾಸ ಶುರು ಮಾಡಿದೆ. ಬ್ರಿಸ್ಬೇನ್​​ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ್ದಾರೆ. ಮೂರನೇ ಪಂದ್ಯವನ್ನು ರೆಡ್ ಬಾಲ್​ನಲ್ಲಿ ಆಡಲಾಗುತ್ತದೆ. ಅಡಿಲೇಡ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗಿತ್ತು. ಮೂರನೇ ಪಂದ್ಯವು ಸಾಮಾನ್ಯ ಟೆಸ್ಟ್ ಪಂದ್ಯವಾಗಿದ್ದು, ಅದರಂತೆ ಈ ಮ್ಯಾಚ್​ನಲ್ಲಿ ಎಂದಿನಂತೆ ರೆಡ್ ಬಾಲ್ ಬಳಸಲಾಗುತ್ತದೆ. ಮೂರನೇ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಬ್ರಿಸ್ಬೇನ್​ನ ಗಾಬ್ಬಾ ಮೈದಾನ ಆತಿಥ್ಯವಹಿಸಲಿದೆ.  ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯಗಳನ್ನ ಗೆದ್ದುಕೊಂಡಿವೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಹಾಗೇ ಡಬ್ಲ್ಯುಟಿಸಿ ಫೈನಲ್ ರೇಸ್ ಗೆ ಹತ್ತಿರವಾಗಲಿವೆ.

Shwetha M

Leave a Reply

Your email address will not be published. Required fields are marked *