ಭಾರತಕ್ಕೆ WTC ಫೈನಲ್ ಚಾಲೆಂಜ್ – 2 ಮ್ಯಾಚ್.. 3 ಟೀಂ.. ಯಾರಿಗೆ ಟಿಕೆಟ್?

ಭಾರತಕ್ಕೆ WTC ಫೈನಲ್ ಚಾಲೆಂಜ್ – 2 ಮ್ಯಾಚ್.. 3 ಟೀಂ.. ಯಾರಿಗೆ ಟಿಕೆಟ್?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾ ಆಯ್ತು. ಮ್ಯಾಚ್ ಡ್ರಾ ಆಗಿದ್ದು ಸೌತ್ ಆಫ್ರಿಕಾಗೆ ಲಾಭವಾಯ್ತು. ನಂಬರ್ 1 ಸ್ಥಾನದಲ್ಲೇ ಮುಂದುವರಿದಿರೋ ಸೌತ್ ಆಫ್ರಿಕಾ ಪಡೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್ ಕನ್ಫರ್ಮ್ ಮಾಡ್ಕೊಂಡಿದೆ. ಸೆಕೆಂಡ್ ಪ್ಲೇಸ್​ಗೆ ಈಗ ಭಾರತ ಮತ್ತು ಆಸಿಸ್ ನಡುವೆ ಅಸಲಿ ಚಾಲೆಂಜ್ ಶುರುವಾಗಿದೆ. ಉಳಿದಿರೋ ಎರಡು ಪಂದ್ಯಗಳೇ ಗೇಮ್ ಚೇಂಜರ್ ಆಗಲಿವೆ. ಹಾಗಾದ್ರೆ ಡಬ್ಲ್ಯೂಟಿಸಿ ಫೈನಲ್​ಗೆ ಭಾರತಕ್ಕಿರೋ ಸವಾಲುಗಳೇನು? ಆಸ್ಟ್ರೇಲಿಯಾಗೆ ಹೆಚ್ಚಿನ ಅವಕಾಶಗಳು ಇರೊದೇಗೆ? ಸೌತ್ ಆಫ್ರಿಕಾಗೆ ಪ್ಲಸ್ ಪಾಯಿಂಟ್ಸ್ ಏನು? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:IND ಕಾಪಾಡಿದ್ದೇ ಬುಮ್ರಾ, ದೀಪ್..  ಫಾಲೋ-ಆನ್ ತಪ್ಪಿದ್ದೇಗೆ.. ಏನಿದು ರೂಲ್ಸ್? – AUS ವಿರುದ್ಧದ ಮ್ಯಾಚ್ ಡ್ರಾ ಆಗುತ್ತಾ?

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಐದು ಪಂದ್ಯಗಳ ಪೈಕಿ ಈಗಾಗ್ಲೇ ಮೂರು ಪಂದ್ಯಗಳು ಮುಗಿದಿವೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 1 ಪಂದ್ಯ ಗೆದ್ದಿವೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಅಲ್ಲಿಗೆ ಸರಣಿ ಸಮಬಲಗೊಂಡಿದೆ. ಇದೀಗ 4ನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ಸ್ಟ್ರಾಟಜಿ ಮಾಡಿಕೊಳ್ತಿವೆ. ಡಿಸೆಂಬರ್ 26ರಂದು ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಮ್ಯಾಚ್ ಶುರುವಾಗುತ್ತೆ. ಅದ್ರಲ್ಲೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಗಿರೋದ್ರಿಂದ ಕ್ರಿಕೆಟ್​ ಪ್ರೇಮಿಗಳು ಕಾತರದಿಂದ ಕಾಯ್ತಿದ್ದಾರೆ. ಬಾಕ್ಸಿಂಗ್ ಡೇ ಮ್ಯಾಚ್ ಅಂದ್ರೆ ಮತ್ತಿನ್ನೇನು ಅಲ್ಲ. ಡಿಸೆಂಬರ್ 25ರಂದು ಕ್ರಿಸ್​ಮಸ್ ದಿನ. ಕ್ರಿಸ್​ಮಸ್ ದಿನ ಸಿಕ್ಕಂಥ ಗಿಫ್ಟ್​ಗಳನ್ನ ಮರುದಿನ ಅಂದ್ರೆ ಡಿಸೆಂಬರ್ 26ಕ್ಕೆ ಓಪನ್ ಮಾಡ್ತಾರೆ. ಆ ದಿನವನ್ನ ಅನ್ ಬಾಕ್ಸಿಂಡ್ ಡೇ ಅಂತಾ ಸೆಲೆಬ್ರೇಟ್ ಮಾಡ್ತಾರೆ. ಅದೇ ದಿನ ಮ್ಯಾಚ್ ನಡೆಯೋದ್ರಿಂದ ಬಾಕ್ಸಿಂಗ್ ಡೇ ಪಂದ್ಯ ಅಂತಾ ಕರೆಯಲಾಗುತ್ತೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2025ರ ಫೈನಲ್​ ಪಂದ್ಯವು ಜೂನ್ 11 ರಿಂದ 15 ರವರೆಗೆ ನಡೆಯಲಿದೆ. ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ WTC ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಕಣಕ್ಕಿಳಿಯಲಿದೆ. ಪ್ರಸ್ತುತ ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ ಟೀಮ್ ಇಂಡಿಯಾ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಟಾಪ್ 2ಗೆ ಲಗ್ಗೆ ಇಡ್ಬೇಕು ಅಂದ್ರೆ ಭಾರತ ಮುಂದಿನ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಮುಂದಿನ ಎರಡು ಪಂದ್ಯಗಳಲ್ಲಿನ ಸೋಲು ಆಸ್ಟ್ರೇಲಿಯಾ ತಂಡ ಶೇಕಡಾವಾರು ಅಂಕವನ್ನು 53ಕ್ಕೆ ಇಳಿಸಲಿದೆ. ಇದಾಗ್ಯೂ ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಸರಣಿ ಗೆದ್ದರೂ ಒಟ್ಟು  57% ಮಾತ್ರ ಪಡೆಯಲಿದೆ. ಅತ್ತ ಟೀಮ್ ಇಂಡಿಯಾ 60% ಪಡೆಯಲಿರುವ ಕಾರಣ ಫೈನಲ್​ಗೆ ಪ್ರವೇಶಿಸುವುದು ಗ್ಯಾರಂಟಿ.

suddiyaana

Leave a Reply

Your email address will not be published. Required fields are marked *