ಸಚಿನ್ ದಾಖಲೆ ಮುರಿದ ಸೂರ್ಯವಂಶಿ – ಮಯಾಂಕ್ ಯಾದವ್ ಕಂಬ್ಯಾಕ್
ಟೀಂ INDಗೆ ಅಶೋಕ ಅಸ್ತ್ರ  

ಸಚಿನ್ ದಾಖಲೆ ಮುರಿದ ಸೂರ್ಯವಂಶಿ –   ಮಯಾಂಕ್ ಯಾದವ್ ಕಂಬ್ಯಾಕ್ಟೀಂ INDಗೆ ಅಶೋಕ ಅಸ್ತ್ರ  

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಜಿಂಬಾಬ್ವೆ ವಿರುದ್ಧದ ಮೊದಲ T20 ಪಂದ್ಯದಲ್ಲಿ ಮಯಾಂಕ್ ಯಾದವ್ 649 ದಿನಗಳ ನಂತರ ಅದ್ಭುತ ಕಂಬ್ಯಾಕ್ ಮಾಡಿದರು. ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಗಮನ ಸೆಳೆದರು. ಇದರೊಂದಿಗೆ, ಪಂದ್ಯದ ಮೊದಲ ಎಸೆತದಲ್ಲೇ ಎರಡು ಬಾರಿ ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ದಾಖಲೆ ಬರೆದರು. 4 ಓವರ್‌ಗಳಲ್ಲಿ 18 ರನ್‌ಗಳಿಗೆ 2 ವಿಕೆಟ್ ಕಬಳಿಸಿ ಭಾರತದ ಗೆಲುವಿಗೆ ನೆರವಾದರು.

ಶ್ರೇಯಸ್ ಅಯ್ಯರ್ ಪೂರ್ಣಾವಧಿ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಸತತ ಎಂಟು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು, ದೋನಿ ದಾಖಲೆ ಮುರಿದಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯೊಂದಿಗೆ ಪ್ರಾರಂಭವಾದ ಈ ‘ಟಾಸ್ ಮ್ಯಾಜಿಕ್’ ಜಿಂಬಾಬ್ವೆ ಪಂದ್ಯದವರೆಗೂ ಮುಂದುವರೆದಿದೆ. ಸಸತ 8 ಪಂದ್ಯ ಟಾಸ್ ಗೆಲ್ಲುವ ಮೂಲಕ ಶ್ರೇಯಸ್ ಅಯ್ಯರ್‌ ಎಂಎಸ್ ಧೋನಿ ಅವರ ಸತತ 7 ಟಾಸ್ ಗೆದ್ದ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: ಭಾರತದ ಹೊಸ ಬೌಲಿಂಗ್ ಅಸ್ತ್ರ ಅಶೋಕ್ ಶರ್ಮಾ – ಅಣ್ಣನ ತ್ಯಾಗಕ್ಕೆ ಸಿಕ್ಕ ಪ್ರತಿಫಲ

15 ವರ್ಷದ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20ಯಲ್ಲಿ ಅರ್ಧಶತಕ ಗಳಿಸಿದ ಜಗತ್ತಿನ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಸಚಿನ್ ತೆಂಡಲ್ಕೂರ್ ಹೆಸರನಲ್ಲಿ ದಾಖಲೆಯನ್ನ ಮುರಿದಿದ್ದಾರೆ. ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಟಿ20 ಅರ್ಧಶತಕವನ್ನು ತಮ್ಮ ಕುಟುಂಬ, ತರಬೇತುದಾರರಿಗೆ ಮತ್ತು ಬೆಂಬಲ ನೀಡಿದ ಎಲ್ಲರಿಗೂ ಅರ್ಪಿಸಿದ್ದಾರೆ.

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಚೊಚ್ಚಲ ಅವಕಾಶ ಪಡೆಯುವ ಮೂಲಕ ಅಶೋಕ್‌ ಶರ್ಮಾ  ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಪಂದ್ಯದ ಟಾಸ್‌ಗೂ ಮುನ್ನ ಭಾರತ ತಂಡದ ಸಹಾಯಕ ಕೋಚ್‌ ಸುನೀಲ್‌ ಜೋಶಿ ಅವರು ಭಾರತ ತಂಡದ ಕ್ಯಾಪ್‌ ನೀಡುವ ಮೂಲಕ ರಾಜಸ್ಥಾನ್‌ ಮೂಲದ ವೇಗಿ ಅಶೋಕ್ ಶರ್ಮಾರನ್ನ ಟೀಮ್‌ ಇಂಡಿಯಾಗೆ ಅಧಿಕೃತವಾಗಿ ಬರ ಮಾಡಿಕೊಂಡರು. ಟೀಂ ಇಂಡಿಯಾ ಪರ ಆಡಿದ ಮೊದಲ ಪಂದ್ಯದಲ್ಲಿ ಅಶೋಕ್ 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ತೆಗೆಯದೇ 29 ರನ್‌ ನೀಡಿದ್ರು.

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಸೆಪ್ಟೆಂಬರ್‌ನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಭಾರತದಲ್ಲೇ ನಡೆಯಲಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಈ ಸರಣಿಯನ್ನು ಆಯೋಜಿಸುತ್ತಿದ್ದು, ಟೀಂ ಇಂಡಿಯಾ ಪ್ರವಾಸಿ ತಂಡವಾಗಿ ಆಡಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಆತಿಥ್ಯ ವಹಿಸಲಿದ್ದು, ಸೆಪ್ಟೆಂಬರ್ 13, 15, 17 ರಂದು ಪಂದ್ಯಗಳು ನಡೆಯಲಿವೆ.

ಭಾರತ ಅಂಡರ್-19 ತಂಡ ಶ್ರೀಲಂಕಾ ಅಂಡರ್-19 ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಎರಡನೇ ಪಂದ್ಯದಲ್ಲಿ 211 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದ ರೋಹಿತ್ ಯಾದವ್ ಒಟ್ಟು 4 ವಿಕೆಟ್‌ಗಳನ್ನು ಪಡೆದರು. ಇವರ ಜೊತೆಗೆ ಚಿಗುರುಪತಿ ವೆಂಕಟ್ ಕೂಡ 3 ವಿಕೆಟ್‌ಗಳನ್ನು ಪಡದು ಗೆಲುವಿಗೆ ಕಾರಣವಾದ್ರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್  ನಾಲ್ಕನೇ ಸುತ್ತಿನ ಪಂದ್ಯಗಳು ಈಗ ನಡೆಯುತ್ತಿದ್ದು, ಇದರ ನಡುವೆ ಮುಂದಿನ ವರ್ಷ ಫೈನಲ್ ನಡೆಯಲಿದೆ ಎಂದು ಐಸಿಸಿ ಘೋಷಿಸಿದೆ. ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಎರಡು ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸುತ್ತವೆ. ಜೂನ್ 9 ರಿಂದ 13 ರವರೆಗೆ ಇಂಗ್ಲೆಂಡ್‌ನ ದಿ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂದು ಐಸಿಸಿ ಘೋಷಣೆ ಮಾಡಿದೆ.

ಡಬ್ಲ್ಯೂಟಿಸಿ ಫೈನಲ್ ಜೊತೆಗೆ ಪ್ರತಿಷ್ಠಿತ ಆಶಸ್ ಸರಣಿಯ ವೇಳಾಪಟ್ಟಿಯೂ ಹೊರಬಿದ್ದಿದೆ. ಅದರಂತೆ ಆಶಸ್ ಸರಣಿಯು ಜೂನ್ 18, 2027 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಜೂನ್ 30 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 8 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 21 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಐದನೇ ಟೆಸ್ಟ್ ಪಂದ್ಯ ಜುಲೈ 29 ರಂದು ಓವಲ್‌ನಲ್ಲಿ ನಡೆಯಲಿದೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಕುರಿತು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಶುಭ್‌ಮನ್‌ ಗಿಲ್‌, ಯುವರಾಜ್‌ ಸಿಂಗ್‌ರಂತಹ ಹಲವು ಕ್ರೀಡಾಪಟುಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಮತ್ತು ಅವರ ಭವಿಷ್ಯವನ್ನು ಸುಭದ್ರಗೊಳಿಸಬೇಕು ಎಂದು ಗಣ್ಯರು ಆಗ್ರಹಿಸಿದ್ದಾರೆ.

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ದೆಹಲಿಯಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಭಾರತದಲ್ಲಿ ನಡೆಯುವ ಪ್ರತಿಭಟನೆಗಳು ಆಡಳಿತಾತ್ಮಕ ವಿಚಾರಗಳ ಬದಲು ಶ್ರೀರಾಮ, ಭಾರತಾಂಬೆ, ಪ್ರಧಾನಿ ಮೋದಿ ಹಾಗೂ ಹಿಂದುತ್ವವನ್ನು ನಿಂದಿಸುವ ಒಂದೇ ಸ್ಕ್ರಿಪ್ಟ್ ಅನುಸರಿಸುತ್ತಿವೆ ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷಗಳು ದೇಶದಲ್ಲಿ ನೇಪಾಳದಂತಹ ಅಶಾಂತಿ ಹಾಗೂ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

Kishor KV

Leave a Reply

Your email address will not be published. Required fields are marked *