ಭಾರತ Vs ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಮ್ಯಾಚ್ – ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೇಗಿದೆ?

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯಕ್ಕೆ ಸ್ಟೇಜ್ ಫಿಕ್ಸ್ ಆಗಿದೆ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಮ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆ ಭಾರತದಲ್ಲಿ ಕೋಳಿ ಕೂಗೋ ಹೊತ್ತಿಗೆಲ್ಲಾ ಉಭಯ ತಂಡಗಳು ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಭಾರತದ ಕಾಲಮಾನದ ಪ್ರಕಾರ ಮುಂಜಾನೆ 4.30ಕ್ಕೆ ಟಾಸ್ ಪ್ರೊಸೀಜರ್ಸ್ ನಡೆದ್ರೆ 5 ಗಂಟೆಯಿಂದ ಪಂದ್ಯ ಸ್ಟಾರ್ಟ್ ಆಗುತ್ತೆ. ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ಗಾಗಿ ಕಾಯ್ತಿರೋ ಎರಡೂ ತಂಡಗಳ ಭವಿಷ್ಯವನ್ನ ಗುರುವಾರದಿಂದ ಶುರುವಾಗಲಿರುವ ಪಂದ್ಯ ಡಿಸೈಡ್ ಮಾಡುತ್ತೆ.
2023ರಿಂದ 2025ರ ಡಬ್ಲ್ಯೂಟಿಸಿ ಸೈಕಲ್ನಲ್ಲಿ ಹಲವು ತಂಡಗಳು ಈಗಾಗ್ಲೇ ರೇಸ್ನಿಂದ ಹೊರಬಿದ್ದಿವೆ. ಟಾಪ್ ತ್ರಿನಲ್ಲಿರೋ ರಾಷ್ಟ್ರಗಳಿಗೆ ಫೈನಲ್ ಪಂದ್ಯವನ್ನಾಡೋ ಚಾನ್ಸಸ್ ಇದೆ. ಸದ್ಯ ಪಾಯಿಂಟ್ಸ್ ಟೇಬಲ್ ನಲ್ಲಿ ಸೌತ್ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಸೌತ್ ಆಫ್ರಿಕಾ ತಂಡವು ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್ನ 10 ಪಂದ್ಯಗಳನ್ನ ಆಡಿದೆ. ಅದ್ರಲ್ಲಿ 6 ಮ್ಯಾಚ್ಗಳನ್ನ ವಿನ್ ಆಗಿದ್ರೆ 3 ಪಂದ್ಯಗಳನ್ನ ಸೋಲನ್ನ ಕಂಡಿದೆ. ಇನ್ನು 1 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿದೆ. ಹೀಗಾಗಿ ಸೌತ್ ಆಫ್ರಿಕಾ ಪಡೆ 63.330 ಪರ್ಸೆಂಟೇಜ್ನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ : ICU ಸೇರಿದ ವಿನೋದ್ ಕಾಂಬ್ಳಿ – ಅಹಂ.. ಹೆಂಡ.. ಹೆಣ್ಣು.. ನೆತ್ತಿಗೇರಿ ಬದುಕೇ ಹಾಳಾಗಿತಾ?
ಇನ್ನು ಪಾಯಿಂಟ್ಸ್ ಟೇಬಲ್ನಲ್ಲಿ ಕಾಂಗರೂ ಪಡೆ ಎರಡನೇ ಸ್ಥಾನದಲ್ಲಿದೆ. ಡಬ್ಲ್ಯೂಟಿಸಿ ರೇಸ್ ನಲ್ಲಿ 15 ಪಂದ್ಯಗಳಲ್ಲಿ ಕಣಕ್ಕಿಳಿದಿರುವಂಥ ಆಸ್ಟ್ರೇಲಿಯಾ 9 ಪಂದ್ಯಗಳನ್ನ ಗೆದ್ದಿದೆ. ಹಾಗೇ ನಾಲ್ಕು ಪಂದ್ಯಗಳನ್ನ ಕೈಚೆಲ್ಲಿಕೊಂಡಿದೆ. ಇನ್ನು 2 ಪಂದ್ಯಗಳಲ್ಲಿ ಡ್ರಾ ಕಂಡಿದೆ. ಈ ಪ್ರಕಾರ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ 58.890 ಶೇಕಡಾವಾರುವಿನೊಂದಿಗೆ ದ್ವಿತೀಯ ಸ್ಥಾನವನ್ನ ಪಡ್ಕೊಂಡಿದೆ. ಇನ್ನು ಆಸ್ಟ್ರೇಲಿಯಾಗೆ ಮತ್ತೊಂದು ಪ್ಲಸ್ ಪಾಯಿಂಗ್ ಕೂಡ ಇದೆ. ಭಾರತದ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳು ಮುಗಿದ ಬಳಿಕ ಡಬ್ಲ್ಯೂಟಿಸಿ ಸೈಕಲ್ನಲ್ಲಿ ಲಂಕಾ ವಿರುದ್ಧ ಇನ್ನೂ ಎರಡು ಪಂದ್ಯಗಳನ್ನ ಆಡಲಿದೆ. ಸೋ ಅಲ್ಲಿಗೆ ಆಸ್ಟ್ರೇಲಿಯಾಗೆ ರೇಸ್ನಲ್ಲಿ ಉಳಿಯೋಕೆ ಮತ್ತಷ್ಟು ಅವಕಾಶ ಸಿಗುತ್ತೆ.
ಕಳೆದ ಎರಡು ಬಾರಿಯೂ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿದ್ದ ಭಾರತ ಈ ಸಲ ಇನ್ನೂ ಕೂಡ ಫೈನಲ್ನಲ್ಲಿ ಭಾಗಿಯಾಗೋದು ಅಧಿಕೃತವಾಗಿಲ್ಲ. ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಪ್ಲೇಸ್ನಲ್ಲಿರೋ ಭಾರತ ಡಬ್ಲ್ಯೂಟಿಸಿ ಸೈಕಲ್ನಲ್ಲಿ 17 ಪಂದ್ಯಗಳನ್ನ ಆಡಿದೆ. ಅದ್ರಲ್ಲಿ 9 ಪಂದ್ಯಗಳನ್ನ ಗೆದ್ದಿದ್ದು 6ರಲ್ಲಿ ಸೋಲು ಕಂಡಿದೆ. 2 ಮ್ಯಾಚ್ ಡ್ರಾ ಆಗಿವೆ. ಈ ಮೂಲಕ 55.880 ಪರ್ಸೆಂಟೇಜ್ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಸೋ ಟಾಪ್ 2 ರೇಸ್ಗೆ ಬರಬೇಕು ಅಂದ್ರೆ ಮುಂದಿನ ಎರಡು ಪಂದ್ಯಗಳ ರಿಸಲ್ಟ್ ಮೇಲೆ ಡಿಪೆಂಡ್ ಆಗುತ್ತೆ.
ಭಾರತ ಕಳೆದ ಎರಡೂ ಆವೃತ್ತಿಗಳಲ್ಲೂ ಫೈನಲ್ ತಲುಪಿದ್ರೂ ಕಪ್ ಗೆಲ್ಲೋಕೆ ಆಗಿಲ್ಲ. 2019-21ರ ಸೈಕಲ್ನಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನ ಮಣಿಸಿ ಚಾಂಪಿಯನ್ ಆಗಿತ್ತು. ಇನ್ನು 2021-23ರ ಸೈಕಲ್ನಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನ ಸೋಲಿಸಿ ಚಾಂಪಿಯನ್ ಆಗಿ ಮೆರೆದಿತ್ತು. ಬಟ್ ಈ ಸಲ ಟೀಂ ಇಂಡಿಯಾ ಫೈನಲ್ ತಲುಪೋದೇ ಇನ್ನೂ ಕನ್ಫರ್ಮ್ ಆಗಿಲ್ಲ. ಬಟ್ ಹಂಗಂತ ಫೈನಲ್ ಆಡೋಕೆ ಸಾಧ್ಯನೇ ಇಲ್ಲ ಅಂತಾ ಏನಿಲ್ಲ. ಮುಂದಿನ ಎರಡು ಪಂದ್ಯಗಳ ಮೇಲೆ ಡಿಪೆಂಡ್ ಆಗ್ಬೇಕು ಅಷ್ಟೇ.