ಈ ಸಲನೂ RCBಯದ್ದೇ ಕಪ್.. ಸ್ಮೃತಿ ತಂಡಕ್ಕೆ ಮತ್ತೆ ನಾಲ್ವರ ಶಕ್ತಿ! – ಸ್ಲಂ ಗರ್ಲ್ ಸಿಮ್ರಾನ್ ಸಿಕ್ಕಾಪಟ್ಟೆ ಕಾಸ್ಟ್ಲಿ 

ಈ ಸಲನೂ RCBಯದ್ದೇ ಕಪ್.. ಸ್ಮೃತಿ ತಂಡಕ್ಕೆ ಮತ್ತೆ ನಾಲ್ವರ ಶಕ್ತಿ! – ಸ್ಲಂ ಗರ್ಲ್ ಸಿಮ್ರಾನ್ ಸಿಕ್ಕಾಪಟ್ಟೆ ಕಾಸ್ಟ್ಲಿ 

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಟೂರ್ನಿಗಾಗಿ ಆರ್​ಸಿಬಿ ಮೆನ್ಸ್ ಟೀಂ ಬಲಿಷ್ಠ ತಂಡವನ್ನೇ ಕಟ್ಟಿದೆ. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್​ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಚಾಣಾಕ್ಷತನದಿಂದ ಟೀಂ ಫಾರ್ಮ್ ಮಾಡಿದೆ. ಭಾನುವಾರ ಬೆಂಗಳೂರಿನಲ್ಲೇ ನಡೆದ ಹರಾಜಿನಲ್ಲಿ ಪವರ್​ಫುಲ್ ಆಟಗಾರ್ತಿಯರನ್ನೇ ಖರೀದಿ ಮಾಡಿದೆ. ಹಾಗಾದ್ರೆ ಡಬ್ಲ್ಯುಪಿಎಲ್ ಹರಾಜು ಪ್ರಕ್ರಿಯೆ ಹೇಗಿತ್ತು? ದುಬಾರಿ ಎನಿಸಿಕೊಂಡ ಆಟಗಾರ್ತಿ ಯಾರು? ಬೆಂಗಳೂರು ತೆಕ್ಕೆಗೆ ಬಂದಿರೋ ಪ್ಲೇಯರ್ಸ್ ಯಾರು? ಈ ಸಲನೂ ಕಪ್ ನಮ್ದೇನಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 6 ವಿಕೆಟ್ ಕಿತ್ತು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ! – ಹೆಡ್ ಶತಕ ಸಿಡಿಸಿದ ಪಂದ್ಯಗಳಲ್ಲೆಲ್ಲಾ ಭಾರತದ ಸೋಲು ಫಿಕ್ಸ್!

ಬೆಂಗಳೂರಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿನ ಬಳಿಕ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಕೊನೆಯ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸಿದ ತಂಡ ಮೊದಲ ಬಾರಿಗೆ ಕಪ್‌ ಗೆದ್ದು ಸಂಭ್ರಮಿಸಿತು. 2025ರ ಆವೃತ್ತಿಗೆ ಹಾಲಿ ಚಾಂಪಿಯನ್‌ಗಳಾಗಿ ಪ್ರವೇಶಿಸುತ್ತಿರುವ ಬೆಂಗಳೂರು ಮತ್ತಷ್ಟು ಬಲಶಾಲಿಯಾಗಿದೆ. ಹರಾಜಿನಲ್ಲಿ ನಾಲ್ವರು ಹೊಸ ಆಟಗಾರ್ತಿಯರನ್ನು ಖರೀದಿ ಮಾಡಿದ್ದು, ಉತ್ತರಾಖಂಡದ ಲೆಗ್ ಸ್ಪಿನ್ನರ್ ಗೆ ಕೋಟಿ ಹಣ ಸುರಿದಿದೆ..

19 ಆಟಗಾರ್ತಿಯರನ್ನು ಖರೀದಿ ಮಾಡಿದ 5 ಫ್ರಾಂಚೈಸಿಗಳು!

ಮಿನಿ ಹರಾಜಿಗೆ ಒಟ್ಟು 400 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ 120 ಆಟಗಾರರ ಹೆಸರನ್ನು ಶಾರ್ಟ್​ಲಿಸ್ಟ್​ ಮಾಡಿದ್ದು, ಹರಾಜಿನಲ್ಲಿ 91 ಭಾರತೀಯರು ಮತ್ತು 29 ವಿದೇಶಿ ಆಟಗಾರರು ಅದೃಷ್ಟದ ಪರೀಕ್ಷೆಗಿಳಿದಿದ್ರು. ಈ ಪೈಕಿ ಗುಜರಾತ್ ಟೈಟಾನ್ಸ್‌ 4.40 ಕೋಟಿ ರೂಪಾಯಿ ಬ್ಯಾಲೆನ್ಸ್​ನೊಂದಿಗೆ ಹರಾಜಿಗೆ ಇಳ್ದಿತ್ತು. ಯುಪಿ ವಾರಿಯರ್ಸ್‌ ಪರ್ಸ್‌ನಲ್ಲೂ 3.90 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 3.25 ಕೋಟಿ, ಮುಂಬೈ ಇಂಡಿಯನ್ಸ್ ಬಳಿ 2.65 ಕೋಟಿ ರೂಪಾಯಿ ಹಾಗೇ ದೆಹಲಿ ಕ್ಯಾಪಿಟಲ್ಸ್ ಬಳಿ 2.50 ಕೋಟಿ ರೂ. ಉಳಿದಿತ್ತು. ಅಂತಿಮವಾಗಿ ಐದೂ ಫ್ರಾಂಚೈಸಿಗಳೂ ಸೇರಿ ಒಟ್ಟಾರೆ 19 ಆಟಗಾರ್ತಿಯರನ್ನ ಖರೀದಿ ಮಾಡಿವೆ.

ಪ್ರೇಮಾ ರಾವತ್ ಗೆ 1.2 ಕೋಟಿ ರೂ ನೀಡಿದ ಆರ್ ಸಿಬಿ!

ಬೆಂಗಳೂರು ಫ್ರಾಂಚೈಸಿ ಹರಾಜಿಗೂ ಮುನ್ನ ತಂಡದಲ್ಲಿ ಸ್ಮೃತಿ ಮಂಧಾನ, ರಿಚಾ ಘೋಷ್, ಎಲಿಸ್ ಪೆರ್ರಿ ಮತ್ತು ಸೋಫಿ ಡಿವೈನ್ ಅವರಂಥ ಬಲಿಷ್ಠ ಆಟಗಾರ್ತಿಯರನ್ನೇ ಉಳಿಸಿಕೊಂಡಿತ್ತು. ಹರಾಜಿಗೂ ಮುನ್ನ ಒಂದು ತಂಡಕ್ಕೆ ಬೇಕಾದ ಎಲ್ಲಾ ಆಟಗಾರ್ತಿಯರನ್ನೂ ಉಳಿಸಿಕೊಂಡಿತ್ತು. ಒಟ್ಟು 14 ಆಟಗಾರರನ್ನು ಆರ್‌ಸಿಬಿ ಉಳಿಸಿಕೊಂಡಿದ್ದು, 6 ಆಟಗಾರ್ತಿಯರನ್ನು ಬಿಡುಗಡೆ ಮಾಡಿತ್ತು. ಮಿನಿ ಹರಾಜಿನಲ್ಲಿ ನಾಲ್ವರೂ ಭಾರತೀಯ ಆಟಗಾರ್ತಿಯರನ್ನೇ ಖರೀದಿ ಮಾಡಿದೆ. 3.5 ಕೋಟಿ ಪರ್ಸ್ ಹಣದೊಂದಿಗೆ ಬಿಡ್ಡಿಂಗ್​ಗೆ ಬಂದ ಫ್ರಾಂಚೈಸಿ ಪ್ರೇಮಾ ರಾವತ್​ಗೆ ಬರೋಬ್ಬರಿ 1.20 ಕೋಟಿ ನೀಡಿದೆ. ಹಾಗೇ ಜೋಶಿತಾ ವಿಜೆ, ರಾಘ್ವಿ ಬಿಸ್ಟ್ ಮತ್ತು ಜಾಗರವಿ ಪವಾರ್ ರನ್ನ ಮೂಲಬೆಲೆ 10 ಲಕ್ಷಕ್ಕೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ದುಬಾರಿ ಮೊತ್ತಕ್ಕೆ ಗುಜರಾತ್ ಪಾಲಾದ ಸಿಮ್ರಾನ್!

ಐಪಿಎಲ್ ಹರಾಜು ಬಳಿಕ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಹೆಸ್ರು ಸಿಮ್ರಾನ್ ಶೇಖ್. ಭಾರತದ ಅನ್‌ಕ್ಯಾಪ್ಡ್ ಆಟಗಾರ್ತಿ ಸಿಮ್ರಾನ್ ಶೇಖ್ ಅವರನ್ನು ಗುಜರಾತ್ ಜೈಂಟ್ಸ್ ತಂಡವು 1.90 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. ಇದರೊಂದಿಗೆ ಸಿಮ್ರಾನ್ ಶೇಖ್ ಡಬ್ಲ್ಯೂಪಿಎಲ್ 2024ರ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ತಮಿಳುನಾಡಿನ 16 ವರ್ಷದ ಜಿ ಕಮಲಿನಿ ಅವರನ್ನು ಮುಂಬೈ ಇಂಡಿಯನ್ಸ್ ರೂ 1.6 ಕೋಟಿ ರೂ.ಗಳಿಗೆ ಬಿಡ್ ಮಾಡಿದೆ. ಕಮಿಲಿನ ಅವರು ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಹುಡುಗರ ಜೊತೆ ಬೆಳೆದಿದ್ದ ಸ್ಲಂ ಹುಡುಗಿ ಸಿಮ್ರಾನ್!

ಸಿಮ್ರಾನ್ ಅತೀ ದುಬಾರಿ ಮೊತ್ತ ಪಡೆದ್ರೂ ಕೂಡ ಆಕೆ ಬೆಳೆದು ಬಂದ ಜೀವನವೇ ಅಚ್ಚರಿಯಾಗಿದೆ. ವಿಶ್ವದ ಅತಿದೊಡ್ಡ ಸ್ಲಂಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿಯಲ್ಲಿ ಹುಟ್ಟಿ, ಬೆಳೆದ ಸಿಮ್ರಾನ್ ಬಾಲ್ಯದಲ್ಲಿ ಹುಡುಗರ ಜೊತೆಗೆ ಕ್ರಿಕೆಟ್‌ ಆಡುತ್ತಿದ್ದರು. ತಂದೆ ಎಲೆಕ್ಟ್ರಿಷಿಯನ್‌ ಆಗಿದ್ದು, ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿತ್ತು. ಆರಂಭದಲ್ಲಿ ಸಿಮ್ರನ್‌ ಆಟಕ್ಕೆ ಮನೆಯಲ್ಲಿ ಬೆಂಬಲವಿರಲಿಲ್ಲ. ಆದರೆ ಸ್ಥಳೀಯ ಯುನೈಟೆಡ್‌ ಕ್ರಿಕೆಟರ್ಸ್‌ ಕ್ಲಬ್‌ ಸೇರ್ಪಡೆಗೊಂಡ ಬಳಿಕ ಸಿಮ್ರನ್‌ನ ಕೌಶಲ್ಯ ಗಮನಿಸಿದ ಕೋಚ್‌ಗಳು, ಅವರನ್ನು ಕ್ರಿಕೆಟ್‌ನಲ್ಲಿ ಬೆಳೆಯುವಂತೆ ಮಾಡಿದರು. 2023ರ ಡಬ್ಲ್ಯುಪಿಎಲ್‌ನಲ್ಲಿ ಯುಪಿ ವಾರಿಯರ್ಸ್‌ಗೆ ₹10 ಲಕ್ಷಕ್ಕೆ ಸೇರ್ಪಡೆಗೊಂಡಿದ್ದ ಸಿಮ್ರನ್‌, ವೈಫಲ್ಯ ಅನುಭವಿಸಿದ್ದರು. ಕಳೆದ ವರ್ಷ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ. ಬಟ್ ಈ ಸಲ ಅದೇ ಸಿಮ್ರಾನ್ ದುಬಾರಿ ಮೊತ್ತಕ್ಕೆ ಗುಜರಾತ್ ಪಾಲಾಗಿದ್ದಾರೆ.

ಕೋಟಿಗೂ ಹೆಚ್ಚು ಮೊತ್ತಕ್ಕೆ ಸೇಲಾದ ನಾಲ್ವರು ಪ್ಲೇಯರ್ಸ್!

ವುಮೆನ್ಸ್ ಪ್ರೀಮಿಯರ್ ಲೀಗ್  ಮಿನಿ ಹರಾಜಿನಲ್ಲಿ ನಾಲ್ವರು ಪ್ಲೇಯರ್ಸ್ ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಡ್ ಆದ್ರು. ಅದ್ರಲ್ಲಿ ಮುಂಬೈನ ಧಾರಾವಿಯ ಸ್ಲಂ ಹುಡುಗಿ, ಯುವ ಆಲ್ರೌಂಡರ್‌ ಸಿಮ್ರನ್‌ ಶೇಖ್‌ ಮಹಿಳಾ ಐಪಿಎಲ್‌ ಖ್ಯಾತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಮಿನಿ ಹರಾಜಿನ ಅತಿ ದುಬಾರಿ ಆಟಗಾರ್ತಿಯಾದ್ರು,   22 ವರ್ಷದ ಸಿಮ್ರನ್‌ ಶೇಖ್‌ರನ್ನು ಗುಜರಾತ್‌ ಜೈಂಟ್ಸ್‌ ತಂಡ ₹1.9 ಕೋಟಿ ನೀಡಿ ಖರೀದಿಸಿತು. ವೆಸ್ಟ್‌ಇಂಡೀಸ್‌ನ ತಾರಾ ಆಟಗಾರ್ತಿ ಡಿಯಾಂಡ್ರ ಡೊಟಿನ್‌ ಕೂಡಾ ₹1.7 ಕೋಟಿಗೆ ಗುಜರಾತ್‌ ಪಾಲಾದರು. ತಮಿಳುನಾಡಿ ಜಿ.ಕಮಲಿನಿ ₹1.6 ಕೋಟಿಗೆ ಮುಂಬೈ ಇಂಡಿಯನ್ಸ್‌ ಸೇರ್ಪಡೆಗೊಂಡರು. ಪ್ರೇಮ ರಾವತ್‌ರನ್ನು ಹಾಲಿ ಚಾಂಪಿಯನ್‌ ಆರ್‌ಸಿಬಿ ₹1.2 ಕೋಟಿ ನೀಡಿ ಖರೀದಿಸಿತು.

2025ರ ಡಬ್ಲ್ಯುಪಿಎಲ್ ಫೆಬ್ರವರಿ 21ರಿಂದ ಮಾರ್ಚ್ 16ರ ವರೆಗೆ ನಡೆಯಲಿದೆ. ಮಿನಿ ಹರಾಜಿನಲ್ಲಿ ಈ ಬಾರಿ ಕರ್ನಾಟಕದ ನಾಲ್ವರು ಪಾಲ್ಗೊಂಡರು. ಈ ಪೈಕಿ ನಿಕಿ ಪ್ರಸಾದ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ₹10 ಲಕ್ಷಕ್ಕೆ ಹರಾಜಾದರು. ಶುಭಾ ಸತೀಶ್‌, ಪ್ರತ್ಯುಷಾ ಸಿ., ಪ್ರತ್ಯೂಷಾ ಕುಮಾರ್‌ ಅನ್‌ಸೋಲ್ಡ್‌ ಆದರು. ಒಟ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನ 17 ಸೀಸನ್​ಗಳಲ್ಲಿ ಬಾಯ್ಸ್ ಟೀಂ ಇದುವರೆಗೂ ಕಪ್ ಗೆಲ್ಲೋಕೆ ಆಗಿಲ್ಲ. ಬಟ್ ವುಮೆನ್ಸ್ ಲೀಗ್ ಶುರುವಾದ ಎರಡೇ ವರ್ಷಕ್ಕೆ ಗರ್ಲ್ಸ್ ಟೀಂ ಚಾಂಪಿಯನ್ ಪಟ್ಟಕ್ಕೇರಿದೆ.

Shwetha M

Leave a Reply

Your email address will not be published. Required fields are marked *