ಬಣ್ಣಗಳಲ್ಲಿ ಮಿಂದೆದ್ದ ಆರ್​ ಸಿಬಿ ಬೆಡಗಿಯರು – ಸೋಲಿನ ಕಹಿ ಮರೆಸಿ ಗೆಲುವಿನ ನಗು ತರುತ್ತಾ ರಂಗು!?

ಬಣ್ಣಗಳಲ್ಲಿ ಮಿಂದೆದ್ದ ಆರ್​ ಸಿಬಿ ಬೆಡಗಿಯರು – ಸೋಲಿನ ಕಹಿ ಮರೆಸಿ ಗೆಲುವಿನ ನಗು ತರುತ್ತಾ ರಂಗು!?

ಹೋಳಿ ಅಂದ್ರೆ ಕೇಳ್ಬೇಕಾ. ಪರಸ್ಪರ ಬಣ್ಣಗಳನ್ನ ಎರಚಿಕೊಂಡು ಸಂಭ್ರಮಿಸೋ ಗಳಿಗೆ. ಹೀಗಾಗೇ ಇವತ್ತು ಎಲ್ಲರೂ ರಂಗಿನಾಟದಲ್ಲಿ ಮಿಂದೆದ್ದಿದ್ದಾರೆ. ನಮ್ಮ ಮಹಿಳಾ ಆರ್ ಸಿಬಿ ಬೆಡಗಿಯರ ಸೆಲೆಬ್ರೇಷನ್ ಕೂಡ ಜೋರಾಗಿತ್ತು.

ಇದನ್ನೂ ಓದಿ : ಬಣ್ಣ ಬಣ್ಣದ ರಂಗು ಎಲ್ಲೆಡೆಯೂ ಸಂಭ್ರಮದ ಗುಂಗು – ಹೋಳಿ ಹಬ್ಬಕ್ಕೂ ಇದೆ ವಿವಿಧ ಹಿನ್ನೆಲೆ..!

WPL ಆರ್ ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್ ಸೇರಿದಂತೆ ಎಲ್ಲಾ ಸದಸ್ಯರು ಖುಷಿಯಿಂದ ಬಣ್ಣವನ್ನು ಹಚ್ಚುತ್ತಾ ಕುಣಿದಾಡಿದ್ದಾರೆ.

ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ ನಿರಾಸೆಯಲ್ಲಿತ್ತು. ಆದರೆ ಮಂಗಳವಾರ ಹೋಳಿ ಹಬ್ಬದ ಸಂಭ್ರಮದೊಂದಿಗೆ ಆರ್​ಸಿಬಿ ಮತ್ತೆ ಹೊಸ ಉತ್ಸಾಹದಲ್ಲಿ ಕಾಣಿಸಿಕೊಂಡಿದೆ.

ಅದ್ರಲ್ಲೂ ತಂಡದಲ್ಲಿರುವ ವಿದೇಶಿ ಆಟಗಾರ್ತಿಯರಾದ ಹೀದರ್ ನೈಟ್, ಮೇಗನ್ ಶಟ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ ಮೊದಲ ಬಾರಿಗೆ ಹೋಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

ಆರ್​ಸಿಬಿ ತಂಡದ ಆಟಗಾರ್ತಿಯರ ಹೋಳಿ ಹಬ್ಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ಆರ್​ಸಿಬಿ 2 ಮ್ಯಾಚ್​ನಲ್ಲೂ ಸೋತಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 143 ರನ್​ಗಳಿಂದ ಹೀನಾಯವಾಗಿ ಸೋತಿದ್ದ ಸ್ಮೃತಿ ಮಂಧಾನ ಪಡೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳಿಂದ ಸೋಲನುಭವಿಸಿತ್ತು.

ಗುಜರಾತ್ ಜೈಂಟ್ಸ್ ವಿರುದ್ಧ ಮಾರ್ಚ್ 8 ರಂದು ಆರ್​ಸಿಬಿ ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯದ ಖಾತೆ ತೆರೆಯಲಿದೆಯಾ ಕಾದು ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್(ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಮೇಗನ್ ಸ್ಚುಟ್, ಪ್ರೀತಿ ಬೋಸ್, ರೇಣುಕಾ ಠಾಕೂರ್ ಸಿಂಗ್, ಡೇನ್ ವ್ಯಾನ್ ನೀಕರ್ಕ್, ಇಂದ್ರಾಣಿ ರಾಯ್, ಎರಿನ್ ಬರ್ನ್ಸ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕ ಪಾಟೀಲ್, ಕೋಮಲ್ ಝಂಝಾದ್.

suddiyaana