RCB ಅಖಾಡಕ್ಕೆ ಕನ್ನಡತಿ – ಸ್ಮೃತಿ ಕ್ಯಾಂಪ್ ನಲ್ಲಿ ಯಾರೆಲ್ಲಾ?
WPLಗೆ ಕಾಲಿಟ್ಟ 15 ವರ್ಷದ ಕಾಶ್ವಿ

RCB ಅಖಾಡಕ್ಕೆ ಕನ್ನಡತಿ – ಸ್ಮೃತಿ ಕ್ಯಾಂಪ್ ನಲ್ಲಿ ಯಾರೆಲ್ಲಾ?WPLಗೆ ಕಾಲಿಟ್ಟ 15 ವರ್ಷದ ಕಾಶ್ವಿ

ವುಮೆನ್ಸ್ ಪ್ರೀಮಿಯರ್ ಲೀಗ್ ಅಖಾಡ ರಂಗೇರ್ತಿದೆ. ಮಿನಿ ಆಕ್ಷನ್ ಕೂಡ ಕಂಪ್ಲೀಟ್ ಆಗಿದ್ದು ಐದೂ ತಂಡಗಳೂ ಫೈನಲ್ ಆಗಿವೆ. ಌಂಡ್ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಟ್ರೋಫಿ ಡಿಫೆನ್ಸ್​ಗೆ ಭರ್ಜರಿ ಟೀಮ್​ನೇ ರೆಡಿ ಮಾಡಿದೆ. ಹಾಗೇ ಮತ್ತೊಬ್ಬ ಕನ್ನಡತಿ ಕೂಡ ರೆಡ್ ಆರ್ಮಿ ಸೇರಿದ್ದಾರೆ.. ಹಾಗಾದ್ರೆ ಸ್ಮೃತಿ ಕ್ಯಾಂಪ್​ನಲ್ಲಿ ಯಾರೆಲ್ಲಾ ಇದ್ದಾರೆ.

ಇದನ್ನೂ ಓದಿ : ಕೊಹ್ಲಿ ಟ್ರೋಲ್ ಮಾಡಿದ CSK – ಅಭಿಗೆ ಪವರ್ ಪ್ಲೇ TARGET

2027ರ ವುಮೆನ್ಸ್ ಪ್ರೀಮಿಯರ್ ಲೀಗ್‌ ಜನವರಿ 14ರಿಂದ ಫೆಬ್ರವರಿ 7ರವರೆಗೆ  ನಡೆಯಲಿದ್ದು ಟೂರ್ಗಿಗಾಘಿ ಗುರುವಾರ ಕೊಚ್ಚಿಯಲ್ಲಿ ಮಿನಿ ಹರಾಜು ನಡೆದಿದೆ. ಐದು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಫೈನಲ್ ಮಾಡಿವೆ. ಹರಾಜಿನಲ್ಲಿ ಒಟ್ಟು 25 ಆಟಗಾರ್ತಿಯರು ವಿವಿಧ ತಂಡಗಳ ಪಾಲಾಗಿದ್ದು, ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ಬರೋಬ್ಬರಿ 1.1 ಕೋಟಿಗೆ  UP ವಾರಿಯರ್ಸ್ ಪಾಲಾಗಿದ್ದು ಮಿನಿ ಆಕ್ಷನ್​ನ ಅತ್ಯಂತ ದುಬಾರಿ ಆಟಗಾರ್ತಿಯಾದ್ರು. ಆರ್​ಸಿಬಿಯಲ್ಲಿ ಮೇಜರ್ ಚೇಂಜಸ್ ಅಂತಾ ಇಲ್ಲದೇ ಇದ್ರೂ ಟೀಂ ಅಂತೂ ಬ್ಯಾಲೆನ್ಸಿಂಗ್ ಆಗಿದೆ.

ಕನ್ನಡತಿ ಸೇರಿ ನಾಲ್ವರನ್ನು ಖರೀದಿ ಮಾಡಿದ ಬೆಂಗಳೂರು ಫ್ರಾಂಚೈಸಿ!

ಡಬ್ಲ್ಯೂಪಿಎಲ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡು, ಹರಾಜಿನಲ್ಲಿ ಸ್ಪಿನ್ ಮತ್ತು ಆಲ್‌ರೌಂಡ್ ವಿಭಾಗವನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿದೆ. ಆಸ್ಟ್ರೇಲಿಯಾದ ಜೆಸ್ ಜೊನಾಸೆನ್ ಹಾಗೂ ದಕ್ಷಿಣ ಆಫ್ರಿಕಾದ ಕ್ಲೋಯ್ ಟ್ರಯಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹರಾಜಿನಲ್ಲಿ ಯಾರನ್ನೆಲ್ಲಾ ಖರೀದಿ ಮಾಡಿದ್ರು ಅಂದ್ರೆ ಜೆಸ್ ಜೊನಾಸೆನ್ (ರೂ. 40 ಲಕ್ಷ), ತೇಜಲ್ ಹಸಬ್ನಿಸ್ (ರೂ. 30 ಲಕ್ಷ), ಕ್ಲೋಯ್ ಟ್ರಯಾನ್ (ರೂ. 30 ಲಕ್ಷ), ವೃಂದಾ ದಿನೇಶ್ (ರೂ. 10 ಲಕ್ಷ)ಕ್ಕೆ ಆರ್​ಸಿಬಿ ಸೇರಿಕೊಂಡಿದ್ದಾರೆ. ಸೋ ಮೊದ್ಲು 13 ಆಟಗಾರ್ತಿಯರನ್ನ ರಿಟೇನ್ ಮಾಡಿಕೊಂಡಿದ್ದ ಬೆಂಗಳೂರು ತಂಡ ಈಗ ಮಿನಿ ಹರಾಜಿನಲ್ಲಿ ನಾಲ್ವರನ್ನ ಖರೀದಿ ಮಾಡೋ ಮೂಲಕ ಟೋಟಲ್ 17 ಆಟಗಾರ್ತಿಯರ ತಂಡವಾಗಿದೆ. ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಜಾರ್ಜಿಯಾ ವೋಲ್, ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ಸಯಾಲಿ ಸತ್ಗರೆ, ಕ್ಲೋಯ್ ಟ್ರಯಾನ್, ಪ್ರೇಮಾ ರಾವತ್, ವೃಂದಾ ದಿನೇಶ್, ಕುಮಾರಿ ಪ್ರತ್ಯೂಷಾ ಇರ್ತಾರೆ. ಲಾರೆನ್ ಬೆಲ್ ಬೌಲಿಂಗ್​ನಲ್ಲಿ ಈ ಸಲನೂ ಕಮಾನ್ ಮಾಡ್ಬೋದು. ಌಂಡ್ ಲಾಸ್ಟ್ ಸೀಸನ್ ಎಲ್ಲಿಸ್ ಪೆರ್ರಿ ಆಡಿರಲಿಲ್ಲ. ಬಟ್ ಈ ಸಲ ಆಡೋದಾಗಿ ಹೇಳಿರೋದ್ರಿಂದ ಫ್ರಾಂಚೈಸಿ ಅವ್ರನ್ನ ಹಾಗೇ ಉಳಿಸಿಕೊಂಡಿದೆ. ಹಾಗೇ ಮಿನಿ ಆಕ್ಷನ್​ನಲ್ಲಿ ಪಿಕ್ ಮಾಡಿರೋ ವೃಂದಾ ದಿನೇಶ್ ಬಾರಿ ಗಮನ ಸೆಳೆದಿದ್ದಾರೆ.

ಆರ್ ಸಿಬಿ ಕ್ಯಾಂಪ್ ಸೇರಿದ ಕನ್ನಡತಿ ವೃಂದಾ ದಿನೇಶ್!

ಅಷ್ಟಕ್ಕೂ 10 ಲಕ್ಷಕ್ಕೆ ಆರ್​ಸಿಬಿ ಸೇರಿರುವ ವೃಂದಾ ದಿನೇಶ್ ಕರ್ನಾಟಕದವ್ರೇ. ಕರ್ನಾಟಕ ದೇಶಿ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಿರುವ ವೃಂದಾ, ಇತ್ತೀಚಿಗೆ ಮಹಾರಾಣಿ ಟಿ20 ಟ್ರೋಫಿ (2026) ಟೂರ್ನಿಯಲ್ಲಿ ಹುಬ್ಳಿ ಟೈಗರ್ಸ್ ಪರ 7 ಇನ್ನಿಂಗ್ಸ್‌ಗಳಲ್ಲಿ 192.48ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 256 ರನ್ ಗಳಿಸಿ ಲೀಗ್‌ನಲ್ಲೇ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಬ್ಯಾಟರ್ ಎನಿಸಿಕೊಂಡಿದ್ದರು. ಭಾರತ ಎ ತಂಡದ ಪರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ‘ಎ’ ತಂಡಗಳ ವಿರುದ್ಧ ಚೆನ್ನಾಗಿ ಆಡಿದ್ರು. ಫೆಬ್ರವರಿಯಲ್ಲಿ ನಡೆದಿದ್ದ ವುಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ 5 ಇನ್ನಿಂಗ್ಸ್‌ಗಳಿಂದ 171 ರನ್ ಬಾರಿಸಿ ಗಮನ ಸೆಳೆದಿದ್ದರು. ಹಾಗೇ ಡಬ್ಲ್ಯೂಪಿಎಲ್​ನಲ್ಲಿ ಆಡಿರುವ ಅನುಭವ ಕೂಡ ಇದೆ. 2024ರ WPL ಹರಾಜಿನಲ್ಲಿ ಯುಪಿ ವಾರಿಯರ್ಸ್ 1.3 ಕೋಟಿಗೆ ಖರೀದಿಸಿತ್ತು. ಆ ಮೂಲಕ WPL ಇತಿಹಾಸದಲ್ಲೇ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಭಾರತೀಯ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದರು. ಯುಪಿ ತಂಡದ ಪರವಾಗಿ 2 ಸೀಸನ್‌ಗಳಲ್ಲಿ ಆಡಿದ್ದಾರೆ. ಇದೇ ಕಾರಣಕ್ಕೆ ಆರ್‌ಸಿಬಿ ತಂಡವು ಈ ಬಾರಿ ಬ್ಯಾಟಿಂಗ್ ಡೆಪ್ತ್ ಜಾಸ್ತಿ ಮಾಡಲು ವೃಂದಾರನ್ನ ಖರೀದಿ ಮಾಡಿದೆ. ಇನ್ನು ವೃಂದಾ ಫೈನಲ್ ಆಗ್ತಿದ್ದಂತೆ ಟಗರುಪುಟ್ಟಿ ಶ್ರೇಯಾಂಕಾ ಪಾಟೀಲ್ ಕುಣಿದು ಕುಪ್ಪಳಿಸೋ ವಿಡಿಯೋ ಕೂಡ ವೈರಲ್ ಆಗಿದೆ.

ಇನ್ನು ಆಕ್ಷನ್​ನಲ್ಲಿ ಗಮನ ಸೆಳೆದಿದ್ದು 15 ವರ್ಷದ ಯುವ ಆಟಗಾರ್ತಿ ಉಮಾ ಕಾಶ್ವಿ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 10 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿದೆ. ಈ ಮೂಲಕ WPL ಇತಿಹಾಸದಲ್ಲೇ ಹರಾಜಾದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇಲ್ಲಿ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಈ ಉಮಾ ಕಾಶ್ವಿ ಕೂಡ ಕನ್ನಡತಿಯೇ. ಌಂಡ್ ಬೆಂಗಳೂರಿನ ಹುಡುಗಿ. ಸೋ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಕಿರಿಯ ಆಟಗಾರನಾಗಿ ಗಮನ ಸೆಳೆದ್ರೆ ಕಾಶ್ಮಿ ಡಬ್ಲ್ಯೂಪಿಎಲ್​ನಲ್ಲಿ ಗಮನ ಸೆಳೆದಿದ್ದಾರೆ. ಉಳಿದಂತೆ ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್​ನಲ್ಲಿ 18 ಆಟಗಾರ್ತಿಯರಿದ್ರೆ ಜೆಮಿಮಾ ರೊಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ 17 ಪ್ಲೇಯರ್ಸ್ ಇದ್ದಾರೆ. ಮೆಗ್ ಲ್ಯಾನಿಂಗ್ ನಾಯಕತ್ವದ ಯುಪಿ ವಾರಿಯರ್ಸ್​ನಲ್ಲಿ 18, ಆಶ್ಲೀ ಗಾರ್ಡ್ನರ್ ನಾಯಕತ್ವದ ಗುಜರಾತ್ ಜೇಂಟ್ಸ್​​ನಲ್ಲಿ 18 ಆಟಗಾರ್ತಿಯರು ಫೈನಲ್ ಆಗಿದ್ದಾರೆ. ಒಟ್ನಲ್ಲಿ ಐದನೇ ಸೀಸನ್​ಗಾಗಿ ಐದೂ ಟೈಂ ಫೈನಲ್ ಆಗಿವೆ. ಸೋ 2027ರ ಚಾಂಪಿಯನ್ಸ್ ಯಾರಾಗ್ತಾರೆ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *