RCB & DC ಗೆ ಬಿಗ್ ಶಾಕ್ – ಸ್ಟಾರ್ ಆಟಗಾರರೇ ಟೀಂನಿಂದ ಔಟ್

RCB & DC ಗೆ ಬಿಗ್ ಶಾಕ್ – ಸ್ಟಾರ್ ಆಟಗಾರರೇ ಟೀಂನಿಂದ ಔಟ್

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಗೆಲುವಿನ ನಂತ್ರ ಆರ್‌​ಸಿಬಿ ತಂಡಕ್ಕೆ ಆಘಾತ ಎದುರಾಗಿದೆ. ಪೂಜಾ ವಸ್ತ್ರಾಕರ್ ಆರ್​ಸಿಬಿ ತಂಡದಲ್ಲಿರುವ ಪ್ರಮುಖ ವೇಗಿ. ಇದೀಗ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಕನಿಷ್ಠ ಎರಡು ವಾರಗಳ ಕಾಲ ಅವರು ಮೈದಾನದಿಂದ ಹೊರಗುಳಿಯಲಿದ್ದಾರೆ.

ಇತ್ತ ಮೊದಲ ಪಂದ್ಯದಲ್ಲಿ ಪೂಜಾ ವಸ್ತ್ರಾಕರ್ ಅವರು ಹೊರಗುಳಿದಿದ್ದ ಕಾರಣ ಆರ್​ಸಿಬಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಇಂಗ್ಲೆಂಡ್ ಬೌಲರ್ ಲಿನ್ಸೆ ಸ್ಮಿತ್ ಅವರನ್ನು ಕಣಕ್ಕಿಳಿಸಿತ್ತು. ಇದಾಗ್ಯೂ ಸ್ಮಿತ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಈ ಪಂದ್ಯದಲ್ಲಿ 2 ಓವರ್​ಗಳನ್ನು ಎಸೆದಿದ್ದ ಲೆನ್ಸಿ 23 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಇದೀಗ ಪೂಜಾ ವಸ್ತ್ರಾಕರ್ ಅವರ ಅನುಪಸ್ಥಿತಿಯಲ್ಲಿ ಮುಂದಿನ ಪಂದ್ಯಗಳಲ್ಲೂ ಲಿನ್ಸೆ ಸ್ಮಿತ್ ಅವರನ್ನೇ ಆರ್​ಸಿಬಿ ಕಣಕ್ಕಿಳಿಸಲಿದೆ.
ಗುಜರಾತ್ ಜೈಂಟ್ಸ್‌ಗೂ ಶಾಕ್ 

 ಟೂರ್ನಿ ಆರಂಭದ ದಿನವೇ ಗುಜರಾತ್ ಜೈಂಟ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ ಗಾಯದಿಂದಾಗಿ ಇಡೀ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ಸಂಕಷ್ಟ ತಂದೊಡ್ಡಿದೆ.

ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಗಾಯದ ಕಾರಣದಿಂದಾಗಿ ಮಹಿಳಾ ಪ್ರೀಮಿಯರ್ ಲೀಗ್ 2026 ರಿಂದ ಹೊರಬಿದ್ದಿದ್ದಾರೆ. ಈ ಹಿಂದೆ ನಡೆದಿದ್ದ ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ತಂಡವು ಭಾಟಿಯಾ ಅವರನ್ನು 50 ಲಕ್ಷ ರೂ. ನೀಡಿ ಖರೀದಿಸಿತ್ತು. ಆದಾಗ್ಯೂ, ಅವರು ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲದ ಕಾರಣ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಗುಜರಾತ್ ಜೈಂಟ್ಸ್ ತಂಡಕ್ಕೆ ಇನ್ನೊಂದು ಆಘಾತಕ್ಕಾರಿ ಸುದ್ದಿಯಿಂದರೇ ಗಾಯದಿಂದ ಚೇತರಿಸಿಕೊಳ್ಳದ ಯಾಸ್ತಿಕಾ ಭಾಟಿಯಾ ಬದಲಿಯಾಗಿ ಬೇರೆ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳುವಂತಿಲ್ಲ. ಏಕೆಂದರೆ ಯಸ್ತಿಕಾ ಭಾಟಿಯಾ ಹರಾಜಿಗೂ ಮುನ್ನವೇ ಗಾಯಗೊಂಡಿದ್ದರು. ಬಿಸಿಸಿಐ ನಿಯಮಗಳ ಪ್ರಕಾರ, ಹರಾಜಿಗೂ ಮುನ್ನ ಗಾಯಗೊಂಡ ಆಟಗಾರರ್ತಿಯರ ಬದಲಿಗೆ ಬೇರೆ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳುವಂತಿಲ್ಲ.

Kishor KV