ಡೆಲ್ಲಿಗೆ ಮಣ್ಣು ಮುಕ್ಕಿಸಿ 2ನೇ ಸಲ ಕಪ್‌ ಎತ್ತಿ ಹಿಡಿದ ಆರ್‌ಸಿಬಿ

ಡೆಲ್ಲಿಗೆ ಮಣ್ಣು ಮುಕ್ಕಿಸಿ 2ನೇ ಸಲ ಕಪ್‌ ಎತ್ತಿ ಹಿಡಿದ ಆರ್‌ಸಿಬಿ

ಕೊನೆಯ ಓವರ್‌ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2026ರ ಮಹಿಳಾ ಪ್ರೀಮಿಯರ್‌ ಲೀಗ್‌  ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 6 ವಿಕೆಟ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಸ್ಮೃತಿ ಮಂಧಾನಾ  ನಾಯಕತ್ವದ ಆರ್‌ಸಿಬಿ ವನಿತೆಯರು ಎರಡನೇ ಬಾರಿ ಡಬ್ಲ್ಯುಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಸ್ಪೋಟಕ ಅರ್ಧಶತಕಗಳನ್ನು ಸಿಡಿಸಿದ ಮಂಧಾನಾ ಹಾಗೂ ಜಾರ್ಜಿಯಾ ವಾಲ್‌ 165 ರನ್‌ಗಳ ದಾಖಲೆಯ ಜೊತೆಯಾಟವಾಡಿ ಬೆಂಗಳೂರು ತಂಡದ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇನ್ನು ನಾಲ್ಕನೇ ಬಾರಿ ಫೈನಲ್‌ನಲ್ಲಿ ಪರಾಭವಗೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಚೊಚ್ಚಲ ಕಪ್‌ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಯಿತು.

ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ವಾ? – ಶುಕ್ರವಾರ ಲಕ್ಷ್ಮೀ ದೇವಿಯ ಈ ನಿಮಯ ಪಾಲಿಸಿ

ಗುರುವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 204 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ಸ್ಮೃತಿ ಮಂಧಾನಾ (89 ರನ್‌) ಹಾಗೂ ಜಾರ್ಜಿಯಾ ವಾಲ್‌ (79 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ, 19.4 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ ಯಶಸ್ವಿಯಾಗಿ ಗುರಿಯನ್ನು ತಲುಪಿತು. ಆ ಮೂಲಕ ಡಬ್ಲ್ಯುಪಿಎಲ್‌ ಇತಿಹಾಸದಲ್ಲಿ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್‌ (ಎರಡು ಬಾರಿ ಚಾಂಪಿಯನ್‌) ದಾಖಲೆಯನ್ನು ಸರಿಗಟ್ಟಿತು

ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿಗೆ ಎರಡನೇ ಓವರ್‌ನಲ್ಲಿಯೇ ಚಿನೆಲ್ಲಿ ಹೆನ್ರಿ, ಗ್ರೇಸ್‌ ಹ್ಯಾರಿಸ್‌ ಅವರನ್ನು ಔಟ್‌ ಮಾಡಿ ಶಾಕ್‌ ನೀಡಿದ್ದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾಗಿದ್ದ ಸ್ಮೃತಿ ಮಂಧಾನಾ ಹಾಗೂ ಜಾರ್ಜಿಯಾ ವಾಲ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ದೀರ್ಘಾವಧಿ ಬ್ಯಾಟ್‌ ಮಾಡಿ ಎರಡನೇ ವಿಕೆಟ್‌ಗೆ 92 ಎಸೆತಗಳಲ್ಲಿ 165 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಆರಂಭಿಕ ಎಸೆತದಿಂದಲೂ ಸ್ಪೋಟಕ ಬ್ಯಾಟ್‌ ಮಾಡಿದ ಜಾರ್ಜಿಯಾ ವಾಲ್‌, 54 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 79 ರನ್‌ ಗಳಿಸಿ, ಆರ್‌ಸಿಬಿಯನ್ನು ಗೆಲುವಿನ ಸನಿಹ ತಂದು ಔಟ್‌ ಆದರು.

Kishor KV