RCB ಜಿದ್ದಾಜಿದ್ದಿಗೆ ಡೇಟ್ ಫಿಕ್ಸ್ – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?
ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ಶ್ರೀಮಂತ ಲೀಗ್. ಮಾರ್ಚ್ 21 ರಿಂದ ಪುರುಷರ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಅದಕ್ಕೂ ಮುನ್ನವೇ ಮಹಿಳಾ ಟೀಂಗಳ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. 2023ರಿಂದ ಶುರುವಾಗಿರೋ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 2 ಸೀಸನ್ಗಳಷ್ಟೇ ನಡೆದಿವೆ. ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದು, ಮುಂದಿನ ತಿಂಗಳಲ್ಲಿ ಮಹಿಳಾ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. 3ನೇ ಸೀಸನ್ಗೆ ಡಬ್ಲ್ಯೂಪಿಎಲ್ಗೆ ಬಿಸಿಸಿಐ ಶೆಡ್ಯೂಲ್ ಫಿಕ್ಸ್ ಮಾಡಿ ಅನೌನ್ಸ್ ಮಾಡಿದೆ.
ಪುರುಷರ ಐಪಿಎಲ್ನಲ್ಲಿ ಒಟ್ಟು 10 ತಂಡಗಳು ಭಾಗಿಯಾಗುತ್ತವೆ. ಬಟ್ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳು ಪೈಪೋಟಿ ನಡೆಸಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೇಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್ ಹೀಗೆ 5 ತಂಡಗಳು ಡಬ್ಲ್ಯುಪಿಎಲ್ ಆಡಲಿವೆ. ಸದ್ಯ 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗಾಗಿ ಕಂಪ್ಲೀಟ್ ಶೆಡ್ಯೂಲ್ ಅನ್ನು ಬಿಸಿಸಿಐ ಪ್ರಕಟಿಸಿದೆ. ಫೆಬ್ರವರಿ 14ರಂದು ಮೊದಲ ಪಂದ್ಯ ಆರಂಭವಾಗಲಿದ್ದು, ಫೈನಲ್ ಪಂದ್ಯ ಮಾರ್ಚ್ 15ರಂದು ನಡೆಯಲಿದೆ. ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಬರೋಡಾದ ಕೊಟಂಬಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಮೂರನೇ ಆವೃತ್ತಿಯ ಟೂರ್ನಿಯಲ್ಲಿ ವಡೋದರಾ, ಬೆಂಗಳೂರು, ಲಕ್ನೋ ಮತ್ತು ಮುಂಬೈ ಒಟ್ಟು 22 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಇದನ್ನೂ ಓದಿ : 6 ಇನ್ನಿಂಗ್ಸ್.. 664 ರನ್ – ಕರುಣ್ ನಾಯರ್ ಇನ್ನೆಷ್ಟು ಹೊಡೆಯಬೇಕು?
ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 5 ತಂಡಗಳು ಇರೋದ್ರಿಂದ ಎಲ್ಲಾ ತಂಡಗಳು ತಮ್ಮ ನಾಲ್ವರು ಎದುರಾಳಿ ತಂಡಗಳೊಂದಿಗೆ ಎರಡೆರಡು ಪಂದ್ಯಗಳನ್ನ ಆಡಲಿವೆ. ಈ ಮೂಲಕ ಲೀಗ್‌ನಲ್ಲಿ ಒಂದು ತಂಡ ಒಟ್ಟು 8 ಪಂದ್ಯಗಳನ್ನಾಡಲಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ ಪ್ರವೇಸಿಸಿದರೆ 2 ಮತ್ತು 3ನೇ ಸ್ಥಾನ ಪಡೆಯುವ ತಂಡ ಎಲಿಮಿನೇಟರ್ ಮೂಲಕ ಫೈನಲ್ ಪ್ರವೇಶಿಸಲಿದೆ. ಐಕಾನಿಕ್ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಎಲಿಮಿನೇಟರ್ ಮತ್ತು ಫೈನಲ್ ಎರಡೂ ನಾಕೌಟ್ ಪಂದ್ಯಗಳಿಗೂ ಮುಂಬೈ ಆತಿಥ್ಯ ವಹಿಸಲಿದೆ.
ಆರ್ ಸಿಬಿ ಲೀಗ್ ಹಂತದಲ್ಲಿ ಒಟ್ಟು 8 ಪಂದ್ಯಗಳನ್ನ ಆಡಲಿದೆ. ಡಬ್ಲ್ಯೂಪಿಎಲ್ ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಐದು ತಂಡಗಳು ಪೈಪೋಟಿ ನಡೆಸಲಿವೆ. ಡಬ್ಲ್ಯೂಪಿಎಲ್ 2025ರಲ್ಲಿ ಯಾವುದೇ ಡಬಲ್-ಹೆಡರ್ ಪಂದ್ಯವಿಲ್ಲ. ಈ ಕಾರಣದಿಂದಾಗಿ ಲೀಗ್‌ನಲ್ಲಿ ಯಾವುದೇ ಪಂದ್ಯವು ಮಧ್ಯಾಹ್ನ ಪ್ರಾರಂಭವಾಗುವುದಿಲ್ಲ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಆರಂಭವಾಗಲಿವೆ.
ಇನ್ನು ಐಪಿಎಲ್ ಅಂಥಾ ಬಂದಾಗ ಫಸ್ಟ್ ಬರೋ ಸ್ಲೋಗನ್ನೇ ಈ ಸಲ ಕಪ್ ನಮ್ದು ಅನ್ನೋದು. ಕಳೆದ 17 ಸೀಸನ್ಗಳಿಂದ ಐಪಿಎಲ್ ಆಡ್ತಿದ್ರೂ ಬಾಯ್ಸ್ ಟೀಂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಬಟ್ ಡಬ್ಲ್ಯುಪಿಎಲ್ ಸ್ಟಾರ್ಟ್ ಆದ ಎರಡೇ ವರ್ಷಕ್ಕೆ ಹೆಣ್ಮಕ್ಕಳ ಟೀಂ ಚಾಂಪಿಯನ್ ಪಟ್ಟಕ್ಕೇರಿದೆ. ಸೋ ಈ ಬಾರಿಯೂ ಕಪ್ ಗೆಲ್ಲೋ ಫೇವರೆಟ್ ಟೀಂ ಎನಿಸಿಕೊಳ್ತಿದೆ. ಈ ಸಲ ಕಪ್ ನಮ್ದೆ ಎನ್ನುವ ಸ್ಲೋಗನ್ ಅನ್ನ ಈ ಸಲ ಕಪ್ ನಮ್ಮದು ಎಂದು ಮಾಡಿದ ಮಹಿಳಾ ತಂಡ 2025ರಲ್ಲೂ ಬಲಿಷ್ಠ ತಂಡವಾಗಿ ಮೈದಾನಕ್ಕಿಳಿಯುತ್ತಿದೆ. ಈ ಬಾರಿಯೂ ಸ್ಮೃತಿ ಮಂಧಾನ ಕ್ಯಾಪ್ಟನ್ ಆಗಿ ತಂಡವನ್ನ ಲೀಡ್ ಮಾಡಲಿದ್ದಾರೆ.
ಕಳೆದ ನವೆಂಬರ್ ನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ಗಾಗಿ ನಡೆದ ಮಿನಿ ಹರಾಜಿನಲ್ಲಿ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಮೇಲೆ ಆರ್ಸಿಬಿ ಅತಿ ಹೆಚ್ಚು ಬಿಡ್ ಮಾಡಿತು. ಅವರಿಗೆ 1.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇದೇ ವೇಳೆ ಮತ್ತೆ ಮೂವರು ಆಟಗಾರರನ್ನು ಮೂಲ ಬೆಲೆಯೊಂದಿಗೆ ತಂಡಕ್ಕೆ ಸೇರಿಸಿಸಿಕೊಂಡಿತ್ತು. ಆಲ್‌ರೌಂಡರ್ ಜೋಶಿತಾ ವಿಜೆ, ರಾಘ್ವಿ ಬಿಸ್ಟ್ ಮತ್ತು ಬೌಲರ್ ಜಾಗರ್ವಿ ಪವಾರ್‌ಗೆ ಫ್ರಾಂಚೈಸಿ ತಲಾ 10 ಲಕ್ಷ ರೂ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ. ಇದರೊಂದಿಗೆ ಮತ್ತೊಮ್ಮೆ ಚಾಂಪಿಯನ್ ಆಗಲು RCB 18 ಆಟಗಾರನ್ನೊಳಗೊಂಡ ಬಲಿಷ್ಠ ತಂಡವನ್ನು ಕಟ್ಟಿದೆ. ಈ ಮೂಲಕ ಸ್ಮೃತಿ ಮಂದಾನ, ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್ , ರಾಘ್ವಿ ಬಿಸ್ಟ್, ಜಾಗರವಿ ಪವಾರ್, ಪ್ರೇಮಾ ರಾವತ್, ಜೋಶಿತಾ ಇದ್ದಾರೆ. ಸೋ ಬಲಿಷ್ಠ ತಂಡವನ್ನೇ ಕಣಕ್ಕಿಳಿಸೋಕೆ ಈಗಾಗಲೇ ಪ್ಲೇಯಿಂಗ್ 11 ಲೆಕ್ಕಾಚಾರಗಳು ನಡೆಯುತ್ತಿವೆ.