ಮಹಿಳಾ ಪ್ರೀಮಿಯರ್ ಲೀಗ್‌ಗೆ ಮುಹೂರ್ತ ಫಿಕ್ಸ್ – ಮಾರ್ಚ್ 4ರಿಂದ ಶುರುವಾಗಲಿದೆ ಮ್ಯಾಚ್

ಮಹಿಳಾ ಪ್ರೀಮಿಯರ್ ಲೀಗ್‌ಗೆ ಮುಹೂರ್ತ ಫಿಕ್ಸ್ – ಮಾರ್ಚ್ 4ರಿಂದ ಶುರುವಾಗಲಿದೆ ಮ್ಯಾಚ್

ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್ ಇದೇ ಮಾರ್ಚ್​ 4ರಿಂದ ಆರಂಭಗೊಳ್ಳಲಿದೆ. ಮಹಿಳಾ ಐಪಿಎಲ್​ಗಾಗಿ ಈಗಾಗಲೇ ಐದು ತಂಡಗಳು ಫ್ರಾಂಚೈಸಿ ಹಕ್ಕು ಪಡೆದುಕೊಂಡಿವೆ. ನೂರಾರು ಮಹಿಳಾ ಕ್ರಿಕೆಟಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹರಾಜು ದಿನಾಂಕ ಕೂಡ ಪ್ರಕಟವಾಗಿದೆ.

ಇದನ್ನೂ ಓದಿ:  ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ – ಫುಟ್‌ಬಾಲ್ ತಾರೆ ‘ಮೆಸ್ಸಿ’ ಜೆರ್ಸಿ ಗಿಫ್ಟ್

ಮಹಿಳಾ ಪ್ರೀಮಿಯರ್ ಲೀಗ್ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಅರುಣ್ ಧುಮಾಲ್, ಈ ಟೂರ್ನಿ ಮಾರ್ಚ್​ 4 ರಂದು ಆರಂಭಗೊಂಡು ಮಾರ್ಚ್​ 24ರಂದು ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ. ಚೊಚ್ಚಲ ಆವೃತ್ತಿ ಸಂಪೂರ್ಣ ಮುಂಬೈನ ಎರಡು ಕ್ರೀಡಾಂಗಣ ಬ್ರಬೊರ್ನ್​ ಹಾಗೂ ಡಿವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಈಗಾಗಲೇ ಸುಮಾರು 1500 ಆಟಗಾರ್ತಿಯರು ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ ಗರಿಷ್ಠ 90 ಆಟಗಾರರು ಮಾತ್ರ ಆಡುವ ಅವಕಾಶ ಪಡೆಯಲಿದ್ದಾರೆ. ಪ್ರತಿ ತಂಡಕ್ಕೂ 12 ಕೋಟಿ ರೂಪಾಯಿ  ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಫ್ರಾಂಚೈಸಿಗಳು ಕನಿಷ್ಠ 15 ಪ್ಲೇಯರ್​ಗಳನ್ನು ಗರಿಷ್ಠ 18 ಆಟಗಾರ್ತಿಯರನ್ನು ಖರೀಸಲು ಅವಕಾಶವಿದೆ. ಪ್ರತಿ ತಂಡಗಳು ಐದು ವಿದೇಶಿ ಆಟಗಾರರನ್ನು ಹೊಂದಬಹುದು. ಈ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದೆ.

suddiyaana