ಅಬ್ಬಬ್ಬಾ.. ಈ ವಾಚ್ ಬೆಲೆ ₹478 ಕೋಟಿ ರೂ! – ಈ ಕೈಗಡಿಯಾರದ ವಿಶೇಷತೆ ಏನು?

ಮೊದಲೆಲ್ಲಾ ಸ್ಕೂಲ್, ಕಾಲೇಜು, ಆಫೀಸ್ ಅಥವಾ ಮನೆಯಿಂದ ಹೊರಗೆ ಎಲ್ಲೇ ಹೊರಟ್ರೂ ಕೈಯಲ್ಲೊಂದು ವಾಚ್ ಕಟ್ಟುತ್ತಿದ್ದರು. ಯಾರಾದ್ರೂ ಟೈಂ ಎಷ್ಟಾಯ್ತು ಅಂತಾ ಕೇಳಿದ್ರೆ ವಾಚ್ ನೋಡ್ಕೊಂಡು ಎಷ್ಟು ಗಂಟೆ ಹೇಳ್ತಿದ್ರು. ಈಗೆಲ್ಲಾ ಮೊಬೈಲ್ ಫೋನ್ ಗಳು ಇರೋದ್ರಿಂದ ವಾಚ್ ಕಟ್ಟುವವರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಹೀಗಿದ್ರೂ ಕೆಲವ್ರು ವಾಚ್ ಗಳನ್ನ ಕಟ್ಟುತ್ತಾರೆ. ಆದ್ರೆ ಜಗತ್ತಿನ ಅತ್ಯಂತ ದುಬಾರಿ ವಾಚ್ ಬೆಲೆ ಎಷ್ಟು ಅನ್ನೋದನ್ನ ಕೇಳಿದ್ರೆ ನಿಮ್ಮ ತಲೆಯೇ ಗಿರ್ ಅನ್ನುತ್ತೆ.
ಇದನ್ನೂ ಓದಿ : ಜೇನುತುಪ್ಪ ತೆಗೆಯಲು ಹೋದ ಬಾಲಕ ಬಂಡೆಗಳ ಮಧ್ಯೆ 12 ಗಂಟೆ ಲಾಕ್! – ಡೇಂಜರಸ್ ಜಾಗದಿಂದ ಬಚಾವ್ ಆಗಿದ್ದು ಹೇಗೆ?
ಜಗತ್ತಿನಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುವ ಜನರಿದ್ದಾರೆ. ಅದೇ ರೀತಿ ಒಂದೇ ದಿನಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ವರ್ಗವೂ ಇದೆ. ಕೆಲವರು ಕಾಲಿಗೆ ಚಪ್ಪಲಿ ಇಲ್ಲದೆ ನಡೆದ್ರೆ ಇನ್ನೂ ಕೆಲವರು ಲಕ್ಷ ಲಕ್ಷ ಬೆಲೆಯ ಚಪ್ಪಲಿ ಧರಿಸಿ ಓಡಾಡುತ್ತಾರೆ. ಇನ್ನು ಕೆಲವರು ಲಕ್ಸುರಿ ಜೀವನ ಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಹೀಗೆ ಐಷಾರಾಮಿ ಜೀವನ ಸಾಗಿಸೋರ ಕಣ್ಣು ಕುಕ್ಕುವಂತಿದೆ ಈ ವಾಚ್. ಈ ವಾಚನ್ನು ವಿಶ್ವದ ಅತ್ಯಂತ ದುಬಾರಿ ಗಡಿಯಾರ ಅಂತಾನೇ ಕರೆಯುತ್ತಾರೆ. ಇದರ ಹೆಸರು ದಿ ಹ್ಯಾಲ್ಯೂಸಿನೇಷನ್. ಇದರ ಬೆಲೆ ಬರೋಬ್ಬರಿ 478 ಕೋಟಿ ರೂಪಾಯಿ. ಅಷ್ಟಕ್ಕೂ ಈ ವಾಚಿಗೆ ಇಷ್ಟೊಂದು ಬೆಲೆ ಬರೋಕೆ ಕಾರಣ ಅದರ ವಿನ್ಯಾಸ. ಗ್ರಾಫ್ ಡೈಮಂಡ್ಸ್ ನಲ್ಲಿ ಇದನ್ನು ವಿನ್ಯಾಸಗೊಳಿಸಿದ್ದು, 110 ಕ್ಯಾರೆಟ್‌ನ ಅಪರೂಪದ ವಜ್ರಗಳನ್ನು ಬಳಸಲಾಗಿದೆ. 30 ವಿನ್ಯಾಸಕರು ನಾಲ್ಕೂವರೆ ವರ್ಷ ಈ ವಾಚ್ ತಯಾರಿಕೆಗೆ ಶ್ರಮಿಸಿದ್ದಾರೆ.
ದುಬಾರಿ ವಾಚ್ ನಲ್ಲಿ ಅತ್ಯುನ್ನತ ಮಟ್ಟದ ಬೆಲೆ ಬಾಳುವ ವಜ್ರಗಳಿಗೆ ವಿವಿಧ ಆಕಾರಗಳನ್ನು ಕೊಟ್ಟು ಮಾರುಕಟ್ಟೆಯಲ್ಲಿ ತನ್ನದೇ ರೀತಿಯಲ್ಲಿ ಹೆಸರುವಾಸಿಯಾದ ಪ್ರಸಿದ್ಧ ಬ್ರಿಟಿಷ್ ಆಭರಣ ಬ್ರಾಂಡ್ ಗ್ರಾಫ್ ಡೈಮಂಡ್ಸ್ ವಿನ್ಯಾಸಗೊಳಿಸಿದೆ. ಈ ಗಡಿಯಾರವು ಬ್ರ್ಯಾಂಡ್‌ನಿಂದಾಗಿ ಮಾತ್ರ ದುಬಾರಿಯಲ್ಲ, ಬದಲಾಗಿ ಇದನ್ನು ಅಪರೂಪದ ಮತ್ತು ವರ್ಣರಂಜಿತ ವಜ್ರಗಳನ್ನು ಬಳಸಿ ತಯಾರಿಸಲಾಗಿದೆ. ವಿವಿಧ ವರ್ಣದ ವಜ್ರಗಳನ್ನು ಗಡಿಯಾರದ ಚೈನ್ ನಲ್ಲಿ ಅಳವಡಿಸಲಾಗಿದೆ. ಈ ವಜ್ರಗಳು ನೀಲಿ, ಗುಲಾಬಿ, ಹಳದಿ, ಕಿತ್ತಳೆ ಮತ್ತು ಹಸಿರು ಬಣ್ಣಗಳಲ್ಲಿ ಬರುತ್ತವೆ ಮತ್ತು ಪ್ರತಿಯೊಂದನ್ನು ಹೃದಯ, ಪಿಯರ್, ಪಚ್ಚೆ, ವಿಕಿರಣ ಮತ್ತು ದುಂಡಗಿನ ಕಟ್‌ಗಳಂತಹ ವಿಭಿನ್ನ ಆಕಾರಗಳಲ್ಲಿ ಕತ್ತರಿಸಲಾಗಿದೆ. ಈ ವಜ್ರಗಳನ್ನು ಪ್ಲಾಟಿನಂ ನಿಂದ ಮಾಡಿದ ಕೈಗಡಿಯಾರದ ಚೈನ್‌ನಲ್ಲಿ ಜೋಡಿಸಲಾಗಿದೆ ಮತ್ತು ಪ್ರತಿಯೊಂದು ಬೆಲೆಬಾಳುವ ಕಲ್ಲನ್ನು ಕೈಯಿಂದಲೇ ಆರಿಸಿ ತಯಾರಿಸಲಾಗಿದೆ ಮತ್ತು ಇದರ ಪರಿಪೂರ್ಣತೆಗೆ ಹೊಳಪು ಹೆಚ್ಚಿದೆ. 30 ವಿನ್ಯಾಸಕರು, ರತ್ನಶಾಸ್ತ್ರಜ್ಞರು ಮತ್ತು ಪರಿಣಿತ ಕುಶಲಕರ್ಮಿಗಳ ತಂಡವು ನಾಲ್ಕೂವರೆ ವರ್ಷಗಳ ಕಾಲ ತಯಾರಿಕೆ ಮಾಡಿದೆ ಅಂದ್ರೆ ವಾಚ್ ಹೇಗಿದೆ ಅನ್ನೋದನ್ನ ನೀವೇ ಊಹಿಸಬಹುದು. ವಾಚ್ ನಲ್ಲಿ ಬಳಸಿದ ವಜ್ರಗಳು ಕೇವಲ ಮಿಂಚುವುದು ಮಾತ್ರವಲ್ಲ. ಅವು ಅತ್ಯಂತ ಅಪರೂಪ ಮತ್ತು ಉತ್ತಮ ಗುಣಮಟ್ಟದ್ದಾಗಿವೆ. ಮಳೆಬಿಲ್ಲಿನಂತೆ ಕಾಣುವ ಗಡಿಯಾರ ದಿ ಹ್ಯಾಲ್ಯೂಸಿನೇಶನ್ ಅನ್ನು ನೋಡಿದಾಗ ವಜ್ರಗಳಿಂದ ಮಾಡಿದ ಮಳೆಬಿಲ್ಲಿನಂತೆ ಕಾಣುತ್ತದೆ. ಲಂಡನ್ ಮೂಲದ ಆಭರಣ ಸಂಸ್ಥೆಯಾದ ಗ್ರಾಫ್ ಡೈಮಂಡ್ಸ್, ಬಾಸೆಲ್‌ವರ್ಲ್ಡ್‌ನಲ್ಲಿ ನಡೆದ ಪ್ರತಿಷ್ಠಿತ ಗಡಿಯಾರ ಮತ್ತು ಆಭರಣ ಪ್ರದರ್ಶನದಲ್ಲಿ ಈ ರೀತಿಯ ವಾಚ್ ತಯಾರಿಸಬಹುದು ಎಂಬ ಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿತು. ಅತೀ ಶ್ರೀಮಂತರು ಮತ್ತು ಸಂಗ್ರಾಹಕರ ಜಗತ್ತಿನಲ್ಲಿ, ದಿ ಹ್ಯಾಲ್ಯೂಸಿನೇಶನ್‌ನಂತಹ ವಾಚ್ ಹೊಂದುವುದು ಪ್ರತಿಷ್ಠೆ ಎನಿಸಿದೆ.
ಭಾರತದ ಶ್ರೀಮಂತ ಉದ್ಯಮಿ ಅನಂತ್ ಅಂಬಾನಿ ಕೂಡ ದುಬಾರಿ ವಾಚ್ ಪ್ರಿಯ. ಅನಂತ್ ಅಂಬಾನಿ ಬಳಿ ₹18 ಕೋಟಿ ಮೌಲ್ಯದ ಪಾಟೆಕ್ ಫಿಲಿಪ್ ಗ್ರ್ಯಾಂಡ್‌ಮಾಸ್ಟರ್ ಚೈಮ್ ಮತ್ತು ₹22 ಕೋಟಿ ಮೌಲ್ಯದ ರಿಚರ್ಡ್ ಮಿಲ್ಲೆ ಗಡಿಯಾರವಿದೆ. ಹಾಗೇ ಕ್ರಿಕೆಟರ್ ಗಳ ಬಳಿಯೂ ಕೋಟಿ ಕೋಟಿ ಮೌಲ್ಯದ ದುಬಾರಿ ವಾಚ್ ಗಳಿದ್ದು ಎಲ್ಲರ ಗಮನ ಸೆಳೆಯುತ್ತವೆ.

ನೋಡಿರಿ

