ಕೋಳಿ ಹೇಳುತ್ತಾ ಅಪರಾಧದ ಸಾಕ್ಷಿ? – ದಿನದ 24 ಗಂಟೆ ಕೋಳಿಗೆ ಪೊಲೀಸ್ರಿಂದ ವಿಐಪಿ ಭದ್ರತೆ!

ಕೋಳಿ ಹೇಳುತ್ತಾ ಅಪರಾಧದ ಸಾಕ್ಷಿ? – ದಿನದ 24 ಗಂಟೆ ಕೋಳಿಗೆ ಪೊಲೀಸ್ರಿಂದ ವಿಐಪಿ ಭದ್ರತೆ!

ಭಾರತದಲ್ಲಿ ರಾಜಕಾರಣಿಗಳಿಗೆ, ಸೆಲೆಬ್ರಿಟಿಗಳಿಗೆ, ಶ್ರೀಮಂತರಿಗೆ ಮತ್ತು ಜೀವ ಬೆದರಿಕೆ ಇರುವ ವ್ಯಕ್ತಿಗಳಿಗೆ ಪೊಲೀಸರು Z+ ಭದ್ರತೆ ಒದಗಿಸುತ್ತಾರೆ. ಆದ್ರೆ ಇಲ್ಲಿ ಒಂದು ಕೋಳಿಗೆ ಪೊಲೀಸರು ವಿಐಪಿ ಭದ್ರತೆ ನೀಡಿದ್ದಾರೆ. ಅರೆ ಕೋಳಿಗ್ಯಾಕೆ ಸೆಕ್ಯೂಟಿರಿ ಅಂತಾ ನಿಮಗೆ ಅನ್ನಿಸಬಹುದು..? ಕೋಳಿಗೆ ಯಾಕೆ ಭದ್ರೆತೆ ನೀಡಲಾಗುತ್ತಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು – ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ!

ಕೋರ್ಟ್‌ಗೆ ಬರುವ ಕೆಲವೊಂದು ಪ್ರಕರಣಗಳು ಚಿತ್ರ ವಿಚಿತ್ರವಾಗಿರುತ್ತವೆ. ಅಂತದ್ದೇ ಅಚ್ಚರಿಯ ಘಟನೆಯೊಂದು ಪಂಜಾಬ್​​ನ ಬಟಿಂಡಾದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಕೋಳಿಯೇ ಮುಖ್ಯ ಸಾಕ್ಷಿಯಾಗಿದ್ದು, ಪೊಲೀಸರು ವಿಐಪಿ ಭದ್ರತೆ ನೀಡುತ್ತಿದ್ದಾರೆ. ಟೈಮಿಗೆ ಸರಿಯಾಗಿ ಆಹಾರ ನೀರು ನೀಡಿ ದಿನದ 24ಗಂಟೆಯೂ ಆರೈಕೆ ಮಾಡ್ತಿದ್ದಾರೆ. ಅಷ್ಟಕ್ಕೂ ಸಾಮಾನ್ಯ ಕೋಳಿವೊಂದಕ್ಕೆ ವಿಐಪಿ ಟ್ರೀಟ್​ಮೆಂಟ್ ನೀಡುತ್ತಿರುವುದರ ಹಿಂದೆ ರೋಚಕ ಕಥೆ ಇದೆ.

ಕರ್ನಾಟಕದ ಕೆಲ ಭಾಗಗಳಲ್ಲಿ ಕದ್ದು ಮುಚ್ಚಿ ನಡೆಸುವ ಕೋಳಿ ಕಾಳಗ ಪಂಜಾಬ್​​​ನಲ್ಲೂ ಫೇಮಸ್ ಆಗಿದೆ. ಕಾಕ್​​ಫೈಟ್​​ ಎಂದೇ ಜನಪ್ರಿಯವಾಗಿರುವ ಈ ಕೋಳಿ ಕಾಳಗವನ್ನು ಬಟಿಂಡಾ ಜಿಲ್ಲೆಯ ಬಳ್ಳುವಾನ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದ್ರೆ ಕೋಳಿಗಳ ಕಾಳಗವನ್ನು ನಡೆಸುವುದು ಕಾನೂನು ಬಾಹಿರವಾಗಿದ್ದು, ಅಕ್ರಮವಾಗಿ ನಡೆಸಿದ್ದ ಈ ಕಾಳಗದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಸುದ್ದಿ ತಿಳಿದ ಪೊಲೀಸರು ಕಾಳಗದ ಅಡ್ಡೆ ಮೇಲೆ ದಾಳಿ ಮಾಡಿ ಓರ್ವ ವ್ಯಕ್ತಿ, ಒಂದು ಕೋಳಿ ಹಾಗೂ 12 ಟ್ರೋಫಿಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಬಂಧಿತ ಓರ್ವ ಆರೋಪಿ, ಕೋಳಿ ಹಾಗೂ 12 ಟ್ರೋಫಿಗಳನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೋಳಿಯನ್ನೇ ಸಾಕ್ಷಿಯನ್ನಾಗಿ ಬಳಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಆರೋಪಿಗಳು ಸಾಕ್ಷ್ಯವನ್ನ ನಾಶಪಡಿಸುವ ಸಾಧ್ಯತೆ ಇದು ಎಂದು ಪೊಲೀಸ್​​​ ಠಾಣೆ ಆವರಣದಲ್ಲಿ ಕೋಳಿಗೆ ಸೂಕ್ತ ಭದ್ರತೆಯನ್ನು ಪಂಜಾಬ್​​ ಪೊಲೀಸರು ಒದಗಿಸುತ್ತಿದ್ದಾರೆ. ಬಹುಶಃ ಆ ಕೋಳಿ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ. ಹೀಗಾಗಿ ಪೊಲೀಸ್ರ ಕೈಗೆ ಸಿಕ್ಕಿ ವಿಐಪಿ ಭದ್ರತೆ ಪಡೀತಿದೆ. ಇಲ್ದಿದ್ರೆ ಯಾರದ್ದಾದ್ರೂ ಮನೆಯಲ್ಲಿ ಇಷ್ಟೊತ್ತಿಗೆ ಸಾಂಬಾರೋ, ಫ್ರೈಯೋ ಆಗಿ ಜನರ ಹೊಟ್ಟೆ ಸೇರಿರುತ್ತಿತ್ತು.

Shwetha M