ಭಾರತಕ್ಕೆ HAT-TRICK ಭಯ – ಸೋಲಿನ ಸರಣಿಗೆ ಲಕ್ಷ್ಮಣ ರೇಖೆ ಹಾಕ್ತಾರಾ
ಶ್ರೇಯಸ್ ಕ್ಯಾಪ್ಟನ್ಸಿಗೆ 3ನೇ ಚಾಲೆಂಜ್

ತಿಂಗಳ ಹಿಂದೆ ಭಾರತ ಮತ್ತು ಜಿಂಬಾಬ್ವೆ ಸಿರೀಸ್ ಅಂದ್ರೆ ಎಲ್ರೂ ಕಣ್ ಮುಚ್ಕೊಂಡು ಭಾರತವೇ ಗೆಲ್ಲೋದು ಅಂತಿದ್ರು. ಆದ್ರೆ ಈಗ ಸಿಚುಯೇಷನ್ ಬೇರೇನೇ ಇದೆ. ಭಾರತ ಸೋತ್ರೂ ದೊಡ್ಡ ಆಶ್ಚರ್ಯ ಏನಿಲ್ಲ ಅನ್ನೋ ಸ್ಥಿತಿಗೆ ಬಂದಿದ್ದಾರೆ. ಎರಡು ಸರಣಿಗಳ ಸೋಲು ಭಾರತಕ್ಕೆ ಹ್ಯಾಟ್ರಿಕ್ ಸೋಲಿನ ಭೀತಿ ಹುಟ್ಟಿಸಿದೆ.
ಇದನ್ನೂ ಓದಿ : ಸೊರಗಿದ ಭಾರತಕ್ಕೀಗ ZIM ಟಾಸ್ಕ್ – ಗೆಲುವಿನ ಟಾನಿಕ್ ಕೊಡ್ತಾರಾ ಲಕ್ಷ್ಮಣ್?
ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವ್ರ ಆಬ್ಸೆನ್ಸ್ನಲ್ಲಿ ಹಂಗಾಮಿ ಕೋಚ್ ಆಗಿ ಜಿಂಬಾಬ್ವೆಗೆ ಹಾರಿರೋ ವಿವಿಎಸ್ ಲಕ್ಷ್ಮಣ್ಗೆ ಈ ಸರಣಿ ಅಕ್ಷರಶಃ ಅಗ್ನಿಪರೀಕ್ಷೆ. ಸೋಲಿನ ಸುಳಿಯಲ್ಲಿ ಬಿದ್ದಿರೋ ಭಾರತವನ್ನ ಮತ್ತೆ ಗೆಲುವಿನ ದಾರಿಗೆ ತರಬೇಕಿದೆ. ಮ್ಯಾನೇಜ್ಮೆಂಟ್ ಸೆಲೆಕ್ಟ್ ಮಾಡಿರೋ ಪ್ಲೇಯರ್ಸ್ ಇಟ್ಕೊಂಡು ಗೆಲ್ಲೋದು ಸುಲಭದ ಮಾತೂ ಅಲ್ಲ. ಹಾಗಂತ ಲಕ್ಷ್ಮಣ್ಗೆ ಕೋಚಿಂಗ್ ಜವಾಬ್ದಾರಿ ಹೊಸದೇನು ಅಲ್ಲ. 2024ರ ಟಿ-20 ವಿಶ್ವಕಪ್ ಗೆದ್ದು ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ಕೆಳಗಿಳಿದಾಗ ಭಾರತ ನೆಕ್ಸ್ಟ್ ಜಿಂಬಾಬ್ವೆ ಪ್ರವಾಸವನ್ನೇ ಕೈಗೊಂಡಿತ್ತು. ಐದು ಪಂದ್ಯಗಳ ಸರಣಿ ಅದು. ಆಗಿನ್ನು ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಿರಲಿಲ್ಲ. ಆಗ ಇದೇ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾಗೆ ಹಂಗಾಮಿ ಕೋಚ್ ಆಗಿ ಆಯ್ಕೆಯಾಗಿದ್ರು. ಭಾರತ 4-1 ಅಂತರದಲ್ಲಿ ಸರಣಿಯನ್ನ ಗೆದ್ದಿತ್ತು. ಸೋ ಈಗ ಮತ್ತೆ ಅದೇ ಜಿಂಬಾಬ್ವೆ ವಿರುದ್ಧವೇ ಹಂಗಾಮಿ ಕೋಚ್ ಆಗಿ ಜಿಂಬಾಬ್ವೆ ಸರಣಿಯಲ್ಲಿದ್ದಾರೆ. ಆದ್ರೆ 2024ರಲ್ಲಿದ್ದ ಸಿಚುಯೇಷನ್ಗೂ ಈಗಿನ ಪರಿಸ್ಥಿತಿಗೂ ತುಂಬಾನೇ ವ್ಯತ್ಯಾಸ ಇದೆ.
ಲಕ್ಷ್ಮಣ್ ಗೆ ಸರಣಿ ಸವಾಲ್!
ಐರ್ಲೆಂಡ್ & ಇಂಗ್ಲೆಂಡ್ ನಲ್ಲಿ ಕ್ಲೀನ್ ಸ್ವೀಪ್ ಆಗಿರುವ ಭಾರತ
ಯಂಗ್ ಸ್ಟರ್ಸ್ ಮೇಲೆಯೇ ಡಿಪೆಂಡ್ ಆಗಿರುವ ಟೀಂ ಇಂಡಿಯಾ
ಹರಾರೆಯ ಪಿಚ್ ನಲ್ಲಿ ಬಹುತೇಕರು ಮೊದಲ ಮ್ಯಾಚ್ ಆಡ್ತಿದ್ದಾರೆ
ಟಾಪ್ ಆರ್ಡರ್ ಕೈಕೊಟ್ರೆ ಲೋವರ್ ಆರ್ಡರ್ ನಲ್ಲಿ ಬ್ಯಾಟಿಂಗ್ ವೀಕ್
ಶ್ರೇಯಸ್ ಕ್ಯಾಪ್ಟನ್ ಮಾಡಿ ಬೌಲರ್ಸ್ ವಿಭಾಗ ವೀಕ್ ಮಾಡಿದ ಬಿಸಿಸಿಐ
ಜಿಂಬಾಬ್ವೆಗೆ ನಡುಕ ಹುಟ್ಟಿಸಬಲ್ಲ ಒಬ್ಬೇ ಒಬ್ಬ ಕ್ವಾಲಿಟಿ ಬೌಲರ್ ತಂಡದಲ್ಲಿಲ್ಲ
ಹೀಗೆ ಟಾಪ್ ಟು ಬಾಟಮ್ ಭಾರತ ತಂಡದಲ್ಲಿ ಚಾಲೆಂಜ್ಗಳ ಸರಮಾಲೆಯೇ ಇದೆ. ಇದೆಲ್ಲವನ್ನೂ ಮೆಟ್ಟಿ ನಿಂತು ಭಾರತದ ಗೆಲುವಿಗೆ ರಣತಂತ್ರಗಳನ್ನ ಮಾಡ್ಬೇಕು. ಆದ್ರೆ ಜಾರಿ ಬಿದ್ದಿರೋ ಭಾರತದ ಎದುರು ಗೆದ್ದು ಬೀಗೋಕೆ ಜಿಂಬಾಬ್ವೆ ಕೂಡ ಭರ್ಜರಿ ಪ್ಲ್ಯಾನ್ಗಳನ್ನ ಮಾಡಿದೆ.
ಫೈಟ್ ಕೊಡೋಕೆ ರೆಡಿಯಾಗಿದೆ ಜಿಂಬಾಬ್ವೆ ಪಡೆ!
ಇನ್ನು ಜಿಂಬಾಬ್ವೆ ಆಟಗಾರರನ್ನ ಈಸಿಯಾಗಿ ಪರಿಗಣಿಸೋಕೂ ಆಗಲ್ಲ. ಭಾರತಕ್ಕೆ ಆಘಾತ ನೀಡಬಲ್ಲ ಪ್ಲೇಯರ್ಸ್ ಕೂಡ ಇದ್ದಾರೆ. ಅದ್ರಲ್ಲೂ ನಾಯಕ ಸಿಕಂದರ್ ರಾಝಾ ಅಂತೂ ಸಾಕಷ್ಟು ಅನುಭವ ಹೊಂದಿದ್ದು ಅವ್ರ ನಾಯಕತ್ವದಲ್ಲಿ ಜಿಂಬಾಬ್ವೆ ಬಲಿಷ್ಠ ತಂಡಗಳನ್ನೂ ಮಣ್ಣು ಮುಕ್ಕಿಸಿದೆ. ಟಿ-20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ, ಲಂಕಾ ತಂಡಗಳನ್ನ ಸೋಲಿಗೆ ಸೂಪರ್ 8ಗೂ ಕಾಲಿಟ್ಟಿದ್ರು. ರಾಝಾ ಅಂತೂ ಎಕ್ಸ್ಟ್ರಾರ್ಡಿನರಿ ಆಲ್ರೌಂಡ್ ಪ್ರದರ್ಶನ ನೀಡಿದ್ರು. 40ನೇ ವಯಸ್ಸಿನಲ್ಲೂ ಅವ್ರ ಫಿಟ್ನೆಸ್ ಮತ್ತು ಪಂದ್ಯವನ್ನು ಗೆಲ್ಲಿಸುವ ಜಾಣ್ಮೆ ಅದೆಷ್ಟೋ ಯಂಗ್ಕ್ರಿಕೆಟರ್ಗಳಿಗೆ ಸ್ಪೂರ್ತಿಯಾಗಿದೆ. ಇನ್ನು ಟಿ-20 ವಿಶ್ವಕಪ್ನಲ್ಲಿ 6 ಪಂದ್ಯಗಳನ್ನ ಆಡಿದ್ದ ರಾಝಾ ಬ್ಯಾಟಿಂಗ್ನಲ್ಲಿ 206 ರನ್ ಗಳಿಸಿದ್ರು. ಹಾಗೇ ಬೌಲಿಂಗ್ ನಲ್ಲಿ 4 ವಿಕೆಟ್ಸ್ ತೆಗೆದಿದ್ರು. ಇನ್ನು ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ 3,000 ರನ್ ಪೂರೈಸಿದ ಜಿಂಬಾಬ್ವೆಯ ಮೊದಲ ಆಟಗಾರ ಎಂಬ ದಾಖಲೆಯೂ ಮಾಡಿದ್ದಾರೆ. ಹಾಗೇ ಜಿಂಬಾಬ್ವೆಯ ಡೇಂಜರಸ್ ಓಪನರ್ ಬ್ರಿಯಾನ್ ಬೆನಟ್ ಕೂಡ ತಂಡದಲ್ಲಿದ್ದು ಭರ್ಜರಿ ಪ್ರದರ್ಶನದ ನಿರೀಕ್ಷೆ ಮೂಡಿಸಿದ್ದಾರೆ. ಬ್ರಿಯಾನ್ ಬೆನೆಟ್ 2026ರ ಟಿ-20 ವಿಶ್ವಕಪ್ನಲ್ಲಿ 6 ಪಂದ್ಯಗಳಿಂದ 292 ರನ್ಸ್ ಕಲೆ ಹಾಕಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಕೇವಲ 2 ಸಲ ಮಾತ್ರನೇ ಅವ್ರು ಔಟ್ ಆಗಿದ್ದು ಌಂಡ್ 4 ಪಂದ್ಯಗಳಲ್ಲಿ ನಾಟೌಟ್ ಆಗಿದ್ರು. ಅದ್ರಲ್ಲೂ ಭಾರತದ ವಿರುದ್ಧ ಸೂಪರ್ 8 ಮ್ಯಾಚಲ್ಲಿ 59 ಬಾಲಲ್ಲಿ 97 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಇನ್ನು ಟಿ-20 ವಿಶ್ವಕಪ್ ಆದ್ಮೇಲೆ ಜಿಂಬಾಬ್ವೆ ತಂಡ ಬಾಂಗ್ಲಾ ವಿರುದ್ಧ 3 ಪಂದ್ಯಗಳ ಟಿ-20ಐ ಸರಣಿ ಆಡಿದ್ದು 1 ಪಂದ್ಯವನ್ನ ಗೆದ್ದು 2 ಪಂದ್ಯಗಳನ್ನ ಸೋತಿದ್ರು. ಸೋ ಈಗ ಭಾರತದ ವಿರುದ್ಧದ ಸರಣಿಯಲ್ಲೂ ಕಾಟ ಕೊಡೋ ಚಾನ್ಸಸ್ ಇದೆ.

ನೋಡಿರಿ

