ವೈಟ್ಬಾಲ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಅತ್ಯಂತ ಕೆಟ್ಟ ಬ್ಯಾಟ್ಸ್ಮನ್ – ಲಕ್ನೋ ನಾಯಕ ಪಂತ್ ಹಿಗ್ಗಾಮುಗ್ಗಾ ಟ್ರೋಲ್

ಗುಜರಾತ್ ಟೈಟನ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಬಹುಬೇಗ ವಿಕೆಟ್ ಒಪ್ಪಿಸಿದ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್ , ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ. ಭಾನುವಾರ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಪಂತ್, 11 ಎಸೆತಗಳಲ್ಲಿ 18 ರನ್ ಗಳಿಸಿದ ಬಳಿಕ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಸುಲಭವಾಗಿ ವಿಕೆಟ್ ಒಪ್ಪಿಸಿದರು.
ಕ್ರೀಸ್ಗೆ ಬಂದ ಆರಂಭದಲ್ಲಿ ರಿಷಭ್ ಪಂತ್ ಉತ್ತಮ ಹೊಡೆತಗಳನ್ನು ಹೊಡೆಯುವ ಮೂಲಕ ಭರವಸೆ ಮೂಡಿಸಿದ್ದರು. ವಿಶ್ವ ದರ್ಜೆಯ ವೇಗಿ ಕಗಿಸೊ ರಬಾಡ ಅವರಿಗೆ ಎರಡು ಅದ್ಭುತ ಬೌಂಡರಿಗಳನ್ನು ಬಾರಿಸಿದ್ದರು. ಮೊಹಮ್ಮದ್ ಸಿರಾಜ್ ವಿರುದ್ಧವೂ ಅವರು ಸಮಯೋಜಿತ ಆಟವನ್ನು ಆಡುತ್ತಿದ್ದರು ಹಾಗೂ ಸ್ಟ್ರೈಕ್ ರೊಟೇಟ್ ಮಾಡುತ್ತಿದ್ದರು. ರಬಾಡಗೆ ಫ್ಲ್ಯಾಟ್ ಸಿಕ್ಸರ್ ಕೂಡ ಬಾರಿಸಿದ್ದರು. ಆದರೆ, ತಮ್ಮ ಆಕ್ರಮಣಕಾರಿ ಹೊಡೆತಗಳಿಗಾಗಿ ಅಪಾಯವನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದರು.
ಗೋಯೆಂಕಾ ಪಂತ್ ಖರೀದಿ ಹಣದಲ್ಲಿ ಕಾರು ಖರೀಸಬಹುದಿತ್ತು
ಸಂಜೀವ್ ಗೋಯೆಂಕಾ ಅವರು ರಿಷಬ್ ಪಂತ್ ಅವರಿಗಾಗಿ ಹೂಡಿದ ಬಂಡವಾಳದಲ್ಲಿ ಕಾರುಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟಿದ್ರೂ ಬಹಳಷ್ಟು ಹಣಗಳನ್ನು ಸಂಪಾದಿಸಿರುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ವೈಟ್ಬಾಲ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಅತ್ಯಂತ ಕೆಟ್ಟ ಬ್ಯಾಟ್ಸ್ಮನ್
ಸುಲಭವಾಗಿ ವಿಕೆಟ್ ಒಪ್ಪಿಸಿದ ರಿಷಭ್ ಪಂತ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಕೆಲವರು, ವೈಟ್ಬಾಲ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಅತ್ಯಂತ ಕೆಟ್ಟ ಬ್ಯಾಟ್ಸ್ಮನ್ ಎಂದು ದೂರಿದ್ದಾರೆ. 27 ಕೋಟಿ ರು ಪಡೆದು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ಪಂತ್, ತಮ್ಮ ಬೆಲೆಗೆ ಮೌಲ್ಯವನ್ನು ತಂದುಕೊಡಬೇಕೆಂದು ಆಗ್ರಹಿಸಿದ್ದಾರೆ.

ನೋಡಿರಿ

