ಗುರುವಾರದಂದು ಗುರು ರಾಘವೇಂದ್ರರ ಜೊತೆ ಯಾವ ದೇವರನ್ನು ಪೂಜಿಸಬೇಕು ಗೊತ್ತಾ?
ಗುರುವಾರ ಯಾವ ಕೆಲಸ ಮಾಡಬೇಕು ಗೊತ್ತಾ..?

ಗುರುವಾರದಂದು ಗುರು ರಾಘವೇಂದ್ರರ ಜೊತೆ ಯಾವ ದೇವರನ್ನು ಪೂಜಿಸಬೇಕು ಗೊತ್ತಾ?ಗುರುವಾರ ಯಾವ ಕೆಲಸ ಮಾಡಬೇಕು ಗೊತ್ತಾ..?

ಇಂದು ಗುರುವಾರದ ಶುಭದಿನ. ನೀವಿಂದು ಯಾವ ದೇವರನ್ನು ಪೂಜಿಸಬೇಕು ಗೊತ್ತಾ..? ಹೆಚ್ಚಿನವರು ಹೇಳುವ ಪ್ರಕಾರ ಗುರುವಾರ ಗುರು ರಾಘವೇಂದ್ರನನ್ನು ಪೂಜಿಸಬೇಕೆಂದು ಹೇಳುತ್ತಾರೆ. ಹೌದು ಇಂದು ಅಂದರೆ ಗುರುವಾರ ಕೇವಲ ರಾಯರನ್ನು ಮಾತ್ರವಲ್ಲ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಆದರೆ ಗುರುವಾರವು ಭಗವಾನ್‌ ವಿಷ್ಣು ದೇವರಿಗೆ ಅರ್ಪಿತವಾದ ದಿನವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಭಗವಾನ್‌ ವಿಷ್ಣುವನ್ನು ತ್ರಿದೇವ ಎಂದು ಕರೆಯುತ್ತಾರೆ. ಗುರುವಾರವನ್ನು ಬೃಹಸ್ಪತಿವಾರವೆಂದು ಕರೆಯಲಲಾಗಿದ್ದು, ಇದನ್ನು ಭಗವಾನ್‌ ವಿಷ್ಣು ಇಲ್ಲವೇ ಭಗವಾನ್‌ ಬೃಹಸ್ಪತಿಗೆ ಮೀಸಲಾಗಿದೆ.

ಇದನ್ನೂ ಓದಿ: ಬಾದಾಮಿ ಸಿಪ್ಪೆ ಸುಲಿದು ತಿನ್ನುತ್ತೀರಾ? – ಆಲ್‌ಮಂಡ್‌ ತಿನ್ನೋ ಮುನ್ನ ಈ ವಿಚಾರ ತಿಳ್ಕೊಳ್ಳಿ!

ವಿಷ್ಣುವಿನ ಪತ್ನಿ ದೇವಿ ಲಕ್ಷ್ಮಿಯಾಗಿದ್ದು, ಈಕೆಯನ್ನು ಧನಸಂಪತ್ತಿನ ಅಧಿಪತಿಯೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಗುರುವಾರ ಮತ್ತು ಶುಕ್ರವಾರದಂದು ಭಗವಾನ್‌ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿ ದೇವಿಯನ್ನು ಜೊತೆಯಾಗಿ ಪೂಜಿಸಿದರೆ ಧನ, ಸಂಪತ್ತು, ಸಂತೋಷ, ಶಾಂತಿ ಹಾಗೂ ಜ್ಞಾನ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಗುರುವಾರದಂದು ವಿಷ್ಣು ಭಕ್ತರು ಅಥವಾ ವಿಷ್ಣುವನ್ನು ಆರಾದಿಸುವವರು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ವಿಷ್ಣುವಿಗೆ ಪ್ರಿಯವಾದ ಹಳದಿ ಬಟ್ಟೆಯನ್ನು ಧರಿಸಬೇಕು. ವಿಷ್ಣುವಿನ ಪೂಜೆಯಲ್ಲಿ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಅರಶಿಣಕ್ಕೆ ಅದರದ್ದೇ ಮಹತ್ವವಿದೆ.

ವಿಷ್ಣುವಿನ ವಿಗ್ರಹವನ್ನು ಹಾಗೂ ಲಕ್ಷ್ಮಿ ವಿಗ್ರಹವನ್ನು ಶುಚಿಗೊಳಿಸಿ. ಪೂಜೆಯಲ್ಲಿ ವಿಷ್ಣುವಿಗೆ ಹೆಚ್ಚು ಅರಶಿಣ ಬಣ್ಣದ ಹೂವುಗಳನ್ನು, ಅರಶಿಣ ಬಣ್ಣದ ವಸ್ತುಗಳನ್ನು ಅರ್ಪಿಸಿ. ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯನ್ನು ಆರಾಧಿಸಿ. ಈ ದಿನ ವ್ರತವನ್ನು ಕೈಗೊಳ್ಳುವವರು ತುಪ್ಪದಿಂದ ತಯಾರಿಸಿದ ಆಹಾರವನ್ನು ಸೇವಿಸಿ. ಗುರುವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದರೆ ಉತ್ತಮ ಅಥವಾ ಗುರುವಾರದಂದು ವಿಷ್ಣುವಿನ ಪೂಜೆಯಲ್ಲಿ ಸತ್ಯನಾರಾಯಣ ಕಥೆಯನ್ನು ಪಾರಾಯಣ ಮಾಡಬಹುದು.

ಧರ್ಮಗ್ರಂಥಗಳಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಬೃಹಸ್ಪತಿ ಗ್ರಹದ ಅನುಕೂಲವನ್ನು ಪಡೆಯಲು ಗುರುವಾರದಂದು ಕೆಲವೊಂದು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಈ ಕೆಳಗಿನ ಕೆಲಸಗಳನ್ನು ಗುರುವಾರ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಮತ್ತು ಧರ್ಮಗ್ರಂಥ ಹೇಳುತ್ತದೆ.  ಗುರು ಹಿರಿಯರು, ಪೋಷಕರು ಹಾಗೂ ಸಂತರು ಬೃಹಸ್ಪತಿಯನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಗುರುವಾರ ಮಾತ್ರವಲ್ಲ, ಯಾವ ದಿನವೂ ಕೂಡ ಇವರನ್ನು ಅವಮಾನಿಸಬಾರದು.

Kishor KV