ಇದು ಕೊಲ್ಲುವ ಅಣಬೆ! – ಈ ಮಶ್ರೂಮ್‌ನ ಅಪ್ಪಿತಪ್ಪಿ ತಿಂದ್ರೆ ಕೆಲವೇ ಸೆಕೆಂಡುಗಳಲ್ಲಿ ಸಾವು?

ಇದು ಕೊಲ್ಲುವ ಅಣಬೆ! – ಈ ಮಶ್ರೂಮ್‌ನ ಅಪ್ಪಿತಪ್ಪಿ ತಿಂದ್ರೆ ಕೆಲವೇ ಸೆಕೆಂಡುಗಳಲ್ಲಿ ಸಾವು?

ಮಶ್ರೂಮ್‌ ಅಂದ್ರೆ ಅನೇಕರಿಗೆ ಇಷ್ಟ.. ಅಣಬೆಗಳಲ್ಲಿ ಪೋಷಕಾಂಶಗಳು ಸಮೃದ್ದವಾಗಿರುತ್ತದೆ. ಹೀಗಾಗಿ ಮಶ್ರೂಮ್‌ ತಿನ್ನುವಂತೆ ವೈದ್ಯರು ಕೂಡ ಸಜೆಸ್ಟ್‌ ಮಾಡ್ತಾರೆ. ಆದರೆ, ಮಶ್ರೂಮ್‌ ತಿನ್ನೋ ಮುನ್ನ ಎಚ್ಚರ.. ಸ್ವಲ್ಪ ಯಾಮಾರಿದ್ರೂ ಸಾವು ಕಟ್ಟಿಟ್ಟ ಬುತ್ತಿ.

ಇತ್ತೀಚಿನ ದಿನಗಳಲ್ಲಿ ಮಶ್ರೂಮ್‌ ಅನ್ನ ಎಲ್ಲರೂ ಇಷ್ಟಪಟ್ಟು ತಿಂತಾರೆ.  ಆದ್ರೆ ಅಣಬೆಗಳನ್ನ ತಿನ್ನೋ ಮುನ್ನ ಎಚ್ಚರ. ಕೆಲವೊಂದು ಅಣಬೆಗಳು ತುಂಬಾ ವಿಷಕಾರಿ, ಇದು ನಿಮ್ಮ ಪ್ರಾಣಕ್ಕೆ ಅಪಾಯಕಾರಿ. ಅದ್ರಲ್ಲಿ ಡೆತ್‌ ಕ್ಯಾಪ್‌ ಮಶ್ರೂಮ್‌ ಕೂಡ ಒಂದು.

ಇದನ್ನೂ ಓದಿ: ENG ಪಿಚ್ INDಗೆ ಕಬ್ಬಿಣದ ಕಡಲೆ – KL, ಜೈಸ್ವಾಲ್, ಕರುಣ್ ಕಾಪಾಡ್ತಾರಾ?

ಡೆತ್ ಕ್ಯಾಪ್ ಮಶ್ರೂಮ್ ನಿಮ್ಮನ್ನು ಕೊಲ್ಲುವ ಅಣಬೆ. ಈ ಅಣಬೆಯನ್ನು ತಿಂದರೆ, ಅದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಸಾವಿಗೆ ಕಾರಣವಾಗಬಹುದು.  ಮುಖ್ಯವಾದ ವಿಷಯವೆಂದರೆ ಈ ಅಣಬೆಗಳು ಸಾಮಾನ್ಯ ಅಣಬೆಗಳಂತೆಯೇ ಕಾಣುವುದರಿಂದ ಅವುಗಳನ್ನು ಗುರುತಿಸುವುದು ತುಂಬಾ ಕಷ್ಟ. ಇದರಿಂದಾಗಿ ಜನರು ತಪ್ಪಾಗಿ ಅವುಗಳನ್ನು ಸೇವಿಸುತ್ತಾರೆ.

ವಿಜ್ಞಾನಿಗಳ ಪ್ರಕಾರ, ಈ ಅಣಬೆಯಲ್ಲಿ ಅಮಾಟಾಕ್ಸಿನ್ ಎಂಬ ವಿಷವಿದ್ದು, ಇದು ಮಾನವನ ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಇದನ್ನು ಸೇವಿಸಿದ ನಂತರ, ವ್ಯಕ್ತಿಯು ಹೊಟ್ಟೆ ನೋವು, ವಾಂತಿ, ತಲೆತಿರುಗುವಿಕೆ ಮುಂತಾದ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಕೆಲವೇ ನಿಮಿಷಗಳಲ್ಲಿ ಸಾವು ಕೂಡ ಸಂಭವಿಸುತ್ತದೆ.

Shwetha M

Leave a Reply

Your email address will not be published. Required fields are marked *