ಗಂಡಸರೇ ಈ ಗೊಂಬೆ ನೋಡಬೇಡಿ!! – ಗಾಜಿನಲ್ಲಿದ್ದರೂ ಪುರುಷರನ್ನ ಬಿಡಲ್ಲ
ವಿಶ್ವದ ಭಯಾನಕ ಪಿಶಾಚಿ Doll
ಡಾಲ್.. ಯಾರಿಗಿಷ್ಟವಿಲ್ಲ ಹೇಳಿ. ಗೊಂಬೆ ಇದ್ದರಂತೂ ನಮ್ಮ ಪುಟಾಣಿ ಹೆಣ್ಣುಮಕ್ಕಳಿಗೆ ಅದೇನೋ ಖುಷಿ. ಇನ್ನು ಕೆಲ ಐತಿಹಾಸಿಕ ವಿಶೇಷತೆಗಳ ಪುರಾತನ ಗೊಂಬೆಗಳು ಕೆಲ ಮ್ಯೂಸಿಯಂನಲ್ಲೂ ಇರುತ್ವೆ. ಇದೇ ರೀತಿ ವಸ್ತು ಸಂಗ್ರಹಾಲಯದಲ್ಲಿ ಒಂದು ಗೊಂಬೆಯಿದೆ. ಆದ್ರೆ, ಅಲ್ಲೊಂದು ಮ್ಯಾಟರ್ ಇದೆ. ಆ ಗೊಂಬೆಗೆ ಗಂಡಸರನ್ನ ಕಂಡರೆ ಆಗೋದೇ ಇಲ್ಲ. ಗಾಜಿನಲ್ಲಿದ್ದರೂ ಪುರುಷರ ಮೇಲೆ ಸೇಡು ತೀರಿಸಿಕೊಳ್ಳದೇ ಬಿಡಲ್ಲ ಈ ಗೊಂಬೆ. ಅಂತಾ ಭಯಾನಕ ಗೊಂಬೆ ಎಲ್ಲಿದೆ?, ಜೀವ ಇಲ್ಲದ ಗೊಂಬೆ ದಾಳಿ ಮಾಡೋದು ಹೇಗೆ? ಇಂಥಾ ವಿಚಿತ್ರ ಅನುಭವದಿಂದ ನೊಂದವರು ಯಾರು? ಈ ಎಲ್ಲಾ ವಿಚಾರದ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಬಾಕಿಯಾದ ಸುನಿತಾ! – ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ
ಈ ಡಾಲ್ ನೀವು ಅಂದುಕೊಂಡಂಗಲ್ಲ. ಗೊಂಬೆ ಎಂದು ಅಪ್ಪಿಕೊಳ್ಳಲು ಸಾಧ್ಯವಿಲ್ಲ, ಹಾಗಂತಾ ದೂರ ಮಾಡಲೂ ಸಾಧ್ಯವಾಗಿಲ್ಲ. ಆದ್ರೆ, ಈ ಗೊಂಬೆಯನ್ನ ತಂದು ಮ್ಯೂಸಿಯಂನಲ್ಲಿ ಇಟ್ಟವರನ್ನ ಆ ದೇವರಿಗೂ ಕಾಪಾಡಲು ಸಾಧ್ಯವಾಗ್ತಿಲ್ಲ. ಈ ಗೊಂಬೆ ಇಂಗ್ಲೆಂಡ್‌ನ ದಕ್ಷಿಣ ಯಾರ್ಕ್‌ಶೈರ್ ಮ್ಯೂಸಿಯಂನಲ್ಲಿದೆ. ಐತಿಹಾಸಿಕ, ಪುರಾತನ ವಸ್ತುಗಳನ್ನೊಳಗೊಂಡ ವಸ್ತುಸಂಗ್ರಹಾಲಯವನ್ನು 37 ವರ್ಷದ ಲೀ ಸ್ಟೀರ್ ನಡೆಸುತ್ತಿದ್ದಾರೆ. ಈ ಮ್ಯೂಸಿಯಂ ಹುಟ್ಟುಹಾಕಿದ ಲೀ ಸ್ಟೀರ್ ಈ ಗೊಂಬೆಯನ್ನು ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 9,415 ರೂಪಾಯಿಗೆ ಖರೀದಿಸಿದ್ದಾರೆ. ಖಾಸಗಿ ಆನ್‌ಲೈನ್ ಶಾಪಿಂಗ್ ಮೂಲಕ ಈ ಗೊಂಬೆ ಖರೀದಿಸಿ ಮ್ಯೂಸಿಯಂನಲ್ಲಿಟ್ಟಿದ್ದಾರೆ. ಲೀ ಸ್ಟೀರ್ ಯಾವಾಗ ಈ ಗೊಂಬೆ ಖರೀದಿಸಿ ಮ್ಯೂಸಿಯಂನಲ್ಲಿಟ್ಟರೋ ಅಲ್ಲಿಂದ ಇವರ ಪಾಡು ಕೇಳೋದೇ ಬೇಡ.
ಯಾವಾಗ ಈ ಗೊಂಬೆ ಸಂಗ್ರಹಾಲಯ ಸೇರಿತೋ, ಅಲ್ಲಿಂದಲೇ ಭೂತ ಪ್ರೇತಗಳ ಕಾಟ ಶುರುವಾಗಿದೆ. ಇದುವರೆಗೆ ಬರೋಬ್ಬರಿ 17 ಮಂದಿ ಗಂಡಸರ ಮೇಲೆ ಈ ಗೊಂಬೆ ದಾಳಿ ಮಾಡಿದೆ. ಇದೀಗ ಈ ಗೊಂಬೆಯನ್ನು ವಿಶ್ವದ ಭಯಾನಕ ಪಿಶಾಚಿ ಗೊಂಬೆ ಎಂದೇ ಕರೆಯುತ್ತಿದ್ದಾರೆ. ಗೊಂಬೆ ಇರೋದು ಗಾಜಿನೊಳಗಿನ ಬಾಕ್ಸ್‌ನಲ್ಲಿ. ಈ ಗೊಂಬೆ ನೋಡಲು ಸಂಗಾತಿಯಿಂದ ತಿರಸ್ಕರಿಸಲ್ಪಟ್ಟ ಹೆಣ್ಣಿನಂತಿದೆ. ಗೊಂಬೆ ಹೆಸರು ಎಲಿಝಬೆತ್. ಗೊಂಬೆಯನ್ನು ಸಂಗ್ರಹಾಲಯದಲ್ಲಿಟ್ಟ ಬಳಿಕ ಲೀ ಸ್ಟೀರ್ ಒಮ್ಮೆ ಗಾಜಿನ ಮೇಲೆ ಧೂಳು ಒರೆಸಿ ಶುಚಿಗೊಳಿಸುತ್ತಿದ್ದರು. ಆಗ ಲೀ ಸ್ಟೀರ್ ಕುತ್ತಿಗೆ ಭಾಗದಲ್ಲಿ ಯಾರೋ ಪರಚಿದಂತೆ ಅನುಭವವಾಗಿದೆ. ಕೆಲವೇ ಕ್ಷಣದಲ್ಲಿ ಕುತ್ತಿಗೆಯಲ್ಲಿ ಉಗುರಿನ ಮಾರ್ಕ್ ಪತ್ತೆಯಾಗಿದೆ. ನಂತರ 16 ಪುರುಷರಿಗೆ ಇದೇ ಅನುಭವವಾಗಿದೆ. ಇನ್ನು ಈ ಗೊಂಬೆಯ ಫೋಟೋ, ವಿಡಿಯೋ ತೆಗೆಯಲು ಮುಂದಾಗುವ ಸಂದರ್ಶಕರಿಗೂ ಸಮಸ್ಯೆಗಳಾಗಿದೆ. ಕ್ಯಾಮೆರಾ ಕೆಟ್ಟು ಹೋಗುವುದು, ರೆಕಾರ್ಡ್ ಮಾಡಿದ ವಿಡಿಯೋ ನಾಪತ್ತೆ, ಲೈಟ್ ತನ್ನಷ್ಟಕ್ಕೆ ಆಫ್ ಆಗುವುದು ಹೀಗೆ ಭಯಾನಕ ಅನುಭವಗಳಾಗಿದೆ. ಈ ಗೊಂಬೆಯ ಕೊಠಡಿಗೆ ತೆರಳಿದ ಗಂಡಸರಿಗೆಲ್ಲಾ ಈ ರೀತಿಯ ಅನುಭವವಾಗಿದೆ. ಇದೀಗ ಈ ಗೊಂಬೆಯನ್ನು ಅಲ್ಲಿಂದೆ ತೆಗಯಲು ಭಯವಾಗುತ್ತಿದೆ. ಹಾಗಂತ ಇಟ್ಟುಕೊಳ್ಳಲು ಆಗದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವಿಶ್ವದ ಭಯಾನಕ ಪಿಶಾಚಿ ಗೊಂಬೆ ಈಗ ಇದೇ ವಿಚಾರಕ್ಕೆ ಟ್ರೆಂಡಿಂಗ್‌ನಲ್ಲಿದೆ.