ಬ್ಯಾಗ್ ಬೆಲೆ ಬರೋಬ್ಬರಿ ₹53 ಕೋಟಿ! – ಚಿನ್ನ, ವಜ್ರದಲ್ಲೇ ತಯಾರಾದ ಬ್ಯಾಗ್ ಉದ್ದೇಶವೇನು?

ಬ್ಯಾಗ್ ಬೆಲೆ ಬರೋಬ್ಬರಿ ₹53 ಕೋಟಿ! – ಚಿನ್ನ, ವಜ್ರದಲ್ಲೇ ತಯಾರಾದ ಬ್ಯಾಗ್ ಉದ್ದೇಶವೇನು?

ಹೆಣ್ಮಕ್ಕಳು ಮೊದಲೇ ಫ್ಯಾಷನ್ ಪ್ರಿಯರು. ಸ್ಯಾಂಡಲ್ಸ್, ಮೇಕಪ್, ಡ್ರೆಸ್, ಬ್ಯಾಗ್ಸ್ ಅಂತಾ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡ್ತಾರೆ. ಇನ್ನು ಸೆಲೆಬ್ರಿಟಿಗಳು ಯೂಸ್ ಮಾಡುವ ಬ್ರಾಂಡ್​ಗಳಂತೂ ತುಂಬಾನೇ ಎಕ್ಸ್​ಪೆನ್ಸಿವ್ ಆಗಿರ್ತಾವೆ. ಅದ್ರಲ್ಲೂ ಈ ಹ್ಯಾಂಡ್ ಬ್ಯಾಗ್ ಬೆಲೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ..

ಇದನ್ನೂ ಓದಿ: ಮಂಡ್ಯದಲ್ಲಿ ಹನುಮ ಧ್ವಜ ಸಂಘರ್ಷದ ಕಿಚ್ಚು! – ಕೈ ಶಾಸಕರ ಬ್ಯಾನರ್‌ಗೆ ಕಲ್ಲೆಸೆದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು

ಸಾಮಾನ್ಯವಾಗಿ ಬ್ಯಾಗ್​ಗಳನ್ನ ಖರೀದಿ ಮಾಡುವಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ದುಡ್ಡು ಕೊಟ್ಟು ತಗೊಳ್ತಾರೆ. ಆದ್ರೆ ಇಟಲಿ ಮೂಲದ ಐಷಾರಾಮಿ ಉತ್ಪನ್ನಗಳ ತಯಾರಕ ಬೋರಿನಿ ಮಿಲನೇಸಿ ತಯಾರಿಸಿರುವ ಈ ಹ್ಯಾಂಡ್ ಬ್ಯಾಗ್ ಖರೀದಿಸಲು ಬಹುಶಃ ಕೋಟ್ಯಧಿಪತಿಗಳು ಸಹ ಹಿಂದೆ ಮುಂದೆ ನೋಡ್ತಾರೆ. ಯಾಕಂದ್ರೆ ಇದು ವಿಶ್ವದ ಅತ್ಯಂತ ದುಬಾರಿ ಬ್ಯಾಗ್. ಈ ಬ್ಯಾಗ್‌ನ ಬೆಲೆ ಬರೋಬ್ಬರಿ 6 ಮಿಲಿಯನ್ ಯುರೋ. ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಒಂದಲ್ಲ ಎರಡಲ್ಲ 53 ಕೋಟಿ ರೂಪಾಯಿ. ಅರೆ ಈ ಬ್ಯಾಗಿಗ್ಯಾಕೆ ಇಷ್ಟೊಂದು ರೇಟು ಅಂತಾ ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣವೂ ಇದೆ.

ಬ್ಯಾಗನ್ನು ಅರೆ-ಹೊಳೆಯುವ ಅಲಿಗೇಟರ್ ಚರ್ಮ, 10 ಚಿನ್ನದ ಚಿಟ್ಟೆ, ವಜ್ರಗಳು ಮತ್ತು ಅಪರೂಪದ ರತ್ನಗಳಿಂದ ಅಲಂಕರಿಸಲಾಗಿದೆ. ಒಟ್ಟಾರೆ 130 ಕ್ಯಾರೆಟ್ ವಜ್ರಗಳಿಂದ ಕೂಡಿರುವ ಈ ಬ್ಯಾಗ್ ಅನ್ನು, ಸಾಗರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ತಯಾರು ಮಾಡಲಾಗಿದೆ. ಪ್ಲಾಸ್ಟಿಕ್‌ಗಳಿಂದ ಹೆಚ್ಚು ಅಪಾಯಕ್ಕೆ ಒಳಗಾಗುವ ಜಲಚರಗಳನ್ನು ರಕ್ಷಿಸಲು ವಿಶ್ವದ ‘ಅತ್ಯಂತ ದುಬಾರಿ’ ಬ್ಯಾಗ್ ಸಿದ್ಧಪಡಿಸಲಾಗಿದೆ.

ಅರೆ ಇಷ್ಟು ದುಬಾರಿ ಬ್ಯಾಗ್​ನಿಂದ ಜಲಚರಗಳನ್ನ ಹೇಗೆ ರಕ್ಷಣೆ ಮಾಡ್ತಾರೆ ಅಂತಾ ನಿಮಗೆ ಅನ್ನಿಸಬಹುದು. ಆದ್ರೆ ಅಲ್ಲೇ ಇರೋದು ಲಾಜಿಕ್. ಈ ಬ್ಯಾಗ್ ಮಾರಾಟದಿಂದ ಬರುವ ಹಣದಲ್ಲಿ 7 ಕೋಟಿ ಹಣವನ್ನ ಸಮುದ್ರದ ಸ್ವಚ್ಛತೆಗೆ ದಾನ ಮಾಡಲಾಗುತ್ತದೆ. ಇದೇ ಉದ್ದೇಶದಿಂದಲೇ ಇಟಾಲಿಯನ್ ಮೂಲದ ಕಂಪನಿ ಈ ಬ್ಯಾಗ್ ಸಿದ್ಧಪಡಿಸಿದೆ.

Shwetha M