ಚಲಿಸುತ್ತಿದೆ ವಿಶ್ವದ ದೈತ್ಯ ಮಂಜುಗಡ್ಡೆ- ಬ್ರಿಟಿಷ್ ದ್ವೀಪಕ್ಕೆ ಡಿಕ್ಕಿಯಾಗುತ್ತಾ?
ಲಕ್ಷಾಂತರ ಪ್ರಾಣಿ, ಪಕ್ಷಿಗಳಿಗೆ ಕಂಟಕ!

ಚಲಿಸುತ್ತಿದೆ ವಿಶ್ವದ ದೈತ್ಯ ಮಂಜುಗಡ್ಡೆ- ಬ್ರಿಟಿಷ್ ದ್ವೀಪಕ್ಕೆ ಡಿಕ್ಕಿಯಾಗುತ್ತಾ?ಲಕ್ಷಾಂತರ ಪ್ರಾಣಿ, ಪಕ್ಷಿಗಳಿಗೆ ಕಂಟಕ!

ಚಲಿಸುತ್ತಿದೆ ವಿಶ್ವದ ದೊಡ್ಡ ಮಂಜುಗಡ್ಡೆ

ವಿಶ್ವದ ಅತ್ಯಂತ ದೊಡ್ಡ ಮಂಜುಗಡ್ಡೆ, ಚಲಿಸುವ ಮಂಜುಗಡ್ಡೆ ಎಂದೇ ಹೆಸರುವಾಸಿಯಾಗಿರುವ, A23a ಬಗ್ಗೆ ಆತಂಕ ಹೆಚ್ಚಾಗಿದೆ. 4,000 ಚದರ ಕಿಲೋಮೀಟರ್  ಅಳತೆಯ A23a ಮೂವ್‌ನಲ್ಲಿರುವ ಐಸ್‌ಬರ್ಗ್ ನ್ಯೂಯಾರ್ಕ್ ನಗರದ ಗಾತ್ರಕ್ಕಿಂತ ಸರಿಸುಮಾರು ಮೂರು ಪಟ್ಟು ಮತ್ತು ಗ್ರೇಟರ್ ಲಂಡನ್‌ನ ಎರಡು ಪಟ್ಟು ಹೆಚ್ಚು ಗಾತ್ರವನ್ನು ಹೊಂದಿದೆ.  1 ಟ್ರಿಲಿಯನ್ ಟನ್ ತೂಕವನ್ನು ಹೊಂದಿದೆ. ಈಗ ಇದು ತನ್ನ 9 % ಭಾಗವನ್ನ ಕಳೆದುಕೊಂಡಿದೆ. ದಕ್ಷಿಣ ಜಾರ್ಜಿಯಾ ದ್ವೀಪದಿಂದ ಸರಿಸುಮಾರು 300 ಕಿಲೋಮೀಟರ್ ದೂರದಲ್ಲಿ ಚಲಿಸುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ, ಐಸ್ ಕರಗುವಿಕೆಯಿಂದಾಗಿ ಅದರ ಗಾತ್ರವು ಗಮನಾರ್ಹವಾಗಿ ಕಡಿಮೆಯಾಗಿದೆ. ನವೆಂಬರ್ 2023 ರಿಂದ, ಇದು ತನ್ನ ಪ್ರದೇಶದ ಸುಮಾರು 9% ನಷ್ಟು ಭಾಗವನ್ನು ಕಳೆದುಕೊಂಡಿದೆ. 2025 ರ ಮೊದಲ ಎರಡು ವಾರಗಳಲ್ಲಿ, ಮಂಜುಗಡ್ಡೆಯು ದಕ್ಷಿಣ ಜಾರ್ಜಿಯಾ ಕಡೆಗೆ ಚಲಿಸಿತು. ಆದ್ರೆ ಕಳೆದ ವಾರ, A23a ತನ್ನ ಕೋರ್ಸ್ ಅನ್ನು ಪಶ್ಚಿಮಕ್ಕೆ ಬದಲಾಯಿಸಿದೆ. ಅದರ ಮುಂದೆ ಯಾವ ಕಡೆ ಹೋಗುತ್ತೆ ಅನ್ನೋದು  ಗಾಳಿ ಮತ್ತು ಸಮುದ್ರದ ಪ್ರವಾಹಗಳ ಮೇಲೆ ಡಿಪೆಂಡ್ ಆಗಿರುತ್ತೆ. ಮೂರು ದಶಕಗಳಿಂದ ಸಾಗರದಲ್ಲಿದ್ದ ಈ ದೈತ್ಯ ಮಂಜುಗಡ್ಡೆ ಅಂಟಾರ್ಕ್ಟಿಕಾದ ಹಿಮನದಿಗಳಿಂದ ಮುರಿದುಬಿದ್ದು ಚಲಿಸೋಕೆ ಶುರು ಮಾಡ್ತು.  A23a ಮಂಜುಗಡ್ಡೆಯು 1986 ರಲ್ಲಿ ಅಂಟಾರ್ಕ್ಟಿಕ್ ಕರಾವಳಿಯಿಂದ ಮುರಿದುಹೋಯಿತು ಆದರೆ ಶೀಘ್ರದಲ್ಲೇ ವೆಡ್ಡೆಲ್ ಸಮುದ್ರದಲ್ಲಿ “ಅಂಟಿಕೊಂಡಿತು”. 30 ವರ್ಷಗಳವರೆಗೆ, ಇದು ಸ್ಥಿರವಾದ “ಐಸ್ ದ್ವೀಪ” ವಾಗಿ ಉಳಿಯಿತು. 2020 ರ ಹೊತ್ತಿಗೆ, ಅದು ಮತ್ತೆ ಚಲಿಸಲು ಪ್ರಾರಂಭಿಸಿತು.

ದಕ್ಷಿಣ ಜಾರ್ಜಿಯಾ ದ್ವೀಪಕ್ಕೆ ಡಿಕ್ಕಿ ಹೊಡೆಯುತ್ತಾ?

A23a  ವೇಗವನ್ನು ಪಡೆಯುತ್ತಿದ್ದಂತೆ, ದಕ್ಷಿಣ ಜಾರ್ಜಿಯಾ ದ್ವೀಪದಲ್ಲಿ A23a ಮತ್ತೆ ನೆಲಸಮವಾಗುವ ಸಾಧ್ಯತೆಯಿದೆ. ಹೀಗೇನಾದರೂ ಸಂಭವಿಸಿದಲ್ಲಿ ಇದು ಇಲ್ಲಿನ ಪ್ರದೇಶದ ಜೀವಿಗಳಿಗೆ ಸವಾಲಾಗಿದೆ. ಈ ಪರಿಣಾಮ ಲಕ್ಷಾಂತರ ಸೀಲ್, ಸಮುದ್ರ ಪಕ್ಷಿಗಳು ಮತ್ತು ಪೆಂಗ್ವಿನ್‌ಗಳ ಪ್ರವೇಶಕ್ಕೆ ಅಡ್ಡಿಯುಂಟುಮಾಡುತ್ತದೆ. ಮಂಜುಗಡ್ಡೆಗಳನ್ನು ಸಾಮಾನ್ಯವಾಗಿ ಸಾಗರದಲ್ಲಿ ಒಂಟಿಯಾಗಿರುವ ದೈತ್ಯರು ಎಂದೇ ಹೇಳಲಾಗುತ್ತದೆ, ಅವು ಸಮುದ್ರ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಐಸ್‌ಬರ್ಗ್‌ಗಳು ತೆರೆದ ಸಮುದ್ರಗಳಲ್ಲಿ ಸಂಚರಿಸುವಾಗ, ಅವು ಪೋಷಕಾಂಶ-ಸಮೃದ್ಧವಾದ ಕರಗಿದ ನೀರನ್ನು ಬಿಡುತ್ತಾ ಹೋಗುತ್ತವೆ. ಇದರಿಂದಾಗಿ ಇಂಗಾಲಕ್ಕೆ ಹೆಚ್ಚು ಕೊಡುಗೆ ನೀಡುವ ಫೈಟೊಪ್ಲಾಂಕ್ಟನ್, ಕ್ರಿಲ್ ಮತ್ತು ಸೀಬರ್ಡ್‌ಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಪರಿಸರಕ್ಕೆ ಮಾರಕವಾಗುತ್ತವೆ.

A23a ನ ಚಲನೆಯು ವೈಜ್ಞಾನಿಕ ಸಮುದಾಯಕ್ಕೆ ಮಾತ್ರವಲ್ಲದೆ ಜಾಗತಿಕ ಸಮುದಾಯಕ್ಕೂ ಮಹತ್ವವನ್ನು ಹೊಂದಿದೆ, ಇದು ಧ್ರುವ ಪ್ರದೇಶಗಳ ಮೇಲೆ ಹವಾಮಾನ ಬದಲಾವಣೆಯ ಪ್ರಭಾವ ಬೀರುತ್ತದೆ. ಹೀಗಾಗಿ ಪ್ರಪಂಚದಾದ್ಯಂತದ ವಿಜ್ಞಾನಿಗಳು A23a ನ ಪಥವನ್ನು  ತಿಳಿದುಕೊಳ್ಳುತ್ತಾ ಇರುತ್ತಾರೆ.  ಈ ಮಂಜುಗಡ್ಡೆ ಬಗ್ಗೆ ಸಾಕಷ್ಟು ಭಯ ಶುರುವಾಗಿದ್ದು, ಎಲ್ಲರ ಚಿತ್ತ ಈ ಮಂಜುಗಡ್ಡೆಯತ್ತ ನೆಟ್ಟಿದೆ.

Kishor KV