ಟೈಟಾನಿಕ್ ಗಿಂತ 5 ಪಟ್ಟು ದೊಡ್ಡ ಹಡಗು ರೆಡಿ – ಜಲಪಾತ, 7 ಸ್ವಿಮ್ಮಿಂಗ್ ಪೂಲ್.. ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

ಟೈಟಾನಿಕ್ ಗಿಂತ 5 ಪಟ್ಟು ದೊಡ್ಡ ಹಡಗು ರೆಡಿ – ಜಲಪಾತ, 7 ಸ್ವಿಮ್ಮಿಂಗ್ ಪೂಲ್.. ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

ಟೈಟಾನಿಕ್ ಕ್ರೂಸರ್ ದುರಂತ ಸಂಭವಿಸಿ ಶತಮಾನವೇ ಕಳೆದಿದೆ. ಆದರೆ ಕಳೆದ ತಿಂಗಳು ಟೈಟಾನಿಕ್ ವಿಚಾರ ವಿಶ್ವದಾದ್ಯಂತ ಭಾರೀ ಸುದ್ದಿಯಾಗಿತ್ತು. ಯಾಕಂದ್ರೆ ಟೈಟಾನಿಕ್ ಅವಶೇಷವನ್ನ ನೋಡಲು ತೆರಳಿದ್ದ ಪ್ರವಾಸಿಗರು ಟೈಟಾನಿಕ್ ಸಬ್​ಮರಿನ್ ಸ್ಫೋಟವಾಗಿ ಸಾವನ್ನಪ್ಪಿದ್ದರು. ಹೀಗೆ ದುರಂತಗಳು ನಡೆದರೂ ಕೂಡ ಹೊಸ ಹೊಸ ಅನ್ವೇಷಣೆ, ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇದೀಗ ಈ ನೌಕಾ ಕ್ಷೇತ್ರದಲ್ಲಿ ಮತ್ತೊಂದು ಅತಿದೊಡ್ಡ ಹಡಗು (Ship) ಕಾಲಿಟ್ಟಿದೆ. ಇದನ್ನು ‘ವಿಶ್ವದ ಅತಿದೊಡ್ಡ ಕ್ರೂಸ್ ಹಡಗು’ ಎಂದು ಬಣ್ಣಿಸಲಾಗಿದೆ.

ಇದನ್ನೂ ಓದಿ : ಶ್ರೀಲಂಕಾಗೆ ಮುತ್ತುರಾಜನ ಉಡುಗೊರೆ – ಮರಳಿ ಪಡೆಯಲು ಥಾಯ್ಲೆಂಡ್ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ 75.75 ಕೋಟಿ ರೂಪಾಯಿ..!

ವಿಶ್ವದ ಅತಿದೊಡ್ಡ ವಿಲಾಸಿ ಹಡಗು ಅಂತಾನೇ ಹೇಳಲಾಗುತ್ತಿರುವ ‘ಐಕಾನ್ ಆಫ್ ದಿ ಸೀಸ್’ ಸಿದ್ಧವಾಗಿದ್ದು, ಜನವರಿ 2024ರಲ್ಲಿ ಐಕಾನ್ ಆಫ್ ದಿ ಸೀಸ್ ಕಾರ್ಯನಿರ್ವಹಿಸಲಿದೆ. ಈಗಾಗ್ಲೇ ಪರೀಕ್ಷಾರ್ಥ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿರುವ ಹಡಗು, ಪೂರ್ವ ಮತ್ತು ಪಶ್ಚಿಮ ಕೆರಬಿಯನ್ ಸಮುದ್ರದ ಮೂಲಕ ಫ್ಲೋರಿಡಾದ ಮಿಯಾಮಿ ಕರಾವಳಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ.

RMS ಟೈಟಾನಿಕ್ ವಿಶ್ವದ ಅತಿದೊಡ್ಡ ಹಡಗಾಗಿತ್ತು. ಈ ನೌಕೆಯ ನಂತರ ಐಕಾನ್ ಆಫ್ ದಿ ಸೀಸ್ ಹಡಗನ್ನು ದೊಡ್ಡ ಹಡಗು ಎನ್ನಲಾಗಿದೆ. ಈ ಒಂದು ದೊಡ್ಡ ಮಾದರಿ ಹಡಗನ್ನು ರಾಯಲ್ ಕೆರಿಬಿಯನ್ ಇಂಟರ್‌ನ್ಯಾಷನಲ್ ಸಿದ್ಧ ಮಾಡಿದೆ. ಕಂಪನಿಯು ಇದನ್ನು ಟೈಟಾನಿಕ್‌ಗಿಂತ ಐದು ಪಟ್ಟು ದೊಡ್ಡದಾಗಿದೆ ಎಂದು ಹೇಳಿಕೊಂಡಿದೆ.

ಹೇಗಿದೆ ಐಕಾನ್ ಆಫ್ ದಿ ಸೀಸ್ ?

  • ಐಕಾನ್ ಆಫ್ ದಿ ಸೀಸ್ ಸುಮಾರು 1,198 ಅಡಿ ಉದ್ದವಿದ್ದು, 250,800 ಒಟ್ಟು ಟನ್‌ಗಳಷ್ಟು ಭಾರವಾಗಿದೆ.
  • ಹಡಗಿನಲ್ಲಿ 20 ಡೆಕ್‌ಗಳು, ಏಳು ಈಜುಕೊಳಗಳು ಮತ್ತು ನೀರಿನ ಜಾರುಬಂಡೆಗಳನ್ನು ಇದು ಹೊಂದಿದೆ.
  • ಈ ಒಂದು ದೊಡ್ಡ ಹಡಗು 7,600 ಅತಿಥಿಗಳು ಮತ್ತು 2,350 ಸಿಬ್ಬಂದಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
  • ಹಡಗಿನ ಮುಂಭಾಗದಲ್ಲಿ 55 ಅಡಿ ಜಲಪಾತ ಮತ್ತು 220-ಡಿಗ್ರಿ ವೀಕ್ಷಣೆಗಳೊಂದಿಗೆ ಅಕ್ವಾಡೋಮ್ ಇದೆ.
  • ಹಡಗಿನ ಸೂಟ್ ನೈಬರ್‌ಹುಡ್ ನಲ್ಲಿ ಮೆಡಿಟರೇನಿಯನ್ ರೆಸ್ಟೋರೆಂಟ್ ಮತ್ತು ಎರಡು ಅಂತಸ್ತಿನ ಸಂಡೆಕ್ ಇದೆ.
  • ಸೆಂಟ್ರಲ್ ಪಾರ್ಕ್, ಚಿಲ್ ಐಲ್ಯಾಂಡ್‌ನಲ್ಲಿ ನಾಲ್ಕು ಈಜುಕೊಳಗಳು, ಸ್ವಿಮ್‌ ಆಪ್‌ ಬಾರ್‌, ಸರ್ಫ್‌ಸೈಡ್ ಎಂಬ ಫ್ಯಾಮಿಲಿ ಏರಿಯಾ, ಸಿಟ್ಟಿಂಗ್‌ ಏರಿಯಾ, ಇನ್ಫಿನಿಟಿ ಪೂಲ್ ಅಂತಾ ಹಲವು ವಿಶೇಷತೆಗಳನ್ನು ಹೊಂದಿದೆ.

ಇನ್ನೂ ಈ ಬೋಟ್ ನ ವಿಶೇಷತೆ ಎಂದರೆ ಥ್ರಿಲ್ ಐಲ್ಯಾಂಡ್ ಸಮುದ್ರದಲ್ಲಿ ಅತಿದೊಡ್ಡ ವಾಟರ್ ಪಾರ್ಕ್ ಅನ್ನು ಹೊಂದಿದೆ. 1912 ರ ಕಾಲಘಟ್ಟದಲ್ಲಿದ್ದ ಅತ್ಯಂತ ದೊಡ್ಡ ಹಡಗು ಟೈಟಾನಿಕ್ 852 ಅಡಿಗಳಿಗಿಂತ ಹೆಚ್ಚು ಉದ್ದವಿತ್ತು, 46,329 ಒಟ್ಟು ಟನ್‌ಗಳನ್ನು ಹೊಂದಿತ್ತು. ಆದರೆ ಪ್ರಸ್ತುತವಿರುವ ಹಡಗು ಮೇಲೆ ಹೇಳಿದಂತೆ 1,198 ಅಡಿ ಉದ್ದ, 250,800 ಒಟ್ಟು ಟನ್‌ಗಳನ್ನು ಹೊಂದಿರುವ ಮೂಲಕ ಟೈಟಾನಿಕ್‌ಗಿಂತ ಐದು ಪಟ್ಟು ಹೆಚ್ಚಾಗಿದೆ. ಹಾಗಾದ್ರೆ ಈ ಹಡಗಿನಲ್ಲಿ ಪ್ರಯಾಣ ಮಾಡಲು ಎಷ್ಟು ಹಣ ವೆಚ್ಚವಾಗಲಿದೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಅಕ್ಟೋಬರ್ 2022ರಲ್ಲಿಯೇ ಐಕಾನ್ ಆಫ್ ದಿ ಸೀಸ್ ಟಿಕೆಟ್ ಕಾಯ್ದಿರಿಸುವಿಕೆ ಪ್ರಾರಂಭವಾಗಿದೆ. ಪ್ರಸ್ತುತ ಟಿಕೆಟ್ ದರವು ಪ್ರತಿ ವ್ಯಕ್ತಿಗೆ $1,537 ರೂಪಾಯಿಂದ ಪ್ರಾರಂಭವಾಗಲಿದೆ. ಪ್ರಸ್ತುತ, ರಾಯಲ್ ಕೆರಿಬಿಯನ್ ಸೆಪ್ಟೆಂಬರ್ 2024 ರಲ್ಲಿ ಮಿಯಾಮಿಯಿಂದ ಪಶ್ಚಿಮ ಕೆರಿಬಿಯನ್‌ಗೆ ಕ್ರೂಸ್‌ನಲ್ಲಿ $1,851 ಕ್ಕೆ ಐಕಾನ್ ಆಫ್ ದಿ ಸೀಸ್‌ಗೆ ಅಗ್ಗದ ಟಿಕೆಟ್ ಅನ್ನು ಮಾರಾಟ ಮಾಡುತ್ತಿದೆ.

ಐಕಾನ್ ಆಫ್ ದಿ ಸೀಸ್‌ನಲ್ಲಿನ ಅತ್ಯಂತ ದುಬಾರಿ ಸೂಟ್‌ನಲ್ಲಿ ಪ್ರಯಾಣಿಸಲು ಪ್ರಯಾಣಿಕರು $10,864 ಪಾವತಿಸಬೇಕಿದೆ. ಈ ಹೊಸ ಹಡಗು ಪ್ಯಾಕೇಜ್‌ಗಳನ್ನು ಸಹ ಒದಗಿಸುತ್ತದೆ. ಪೂರ್ವ ಕೆರಿಬಿಯನ್ ಪ್ರವಾಸಕ್ಕಾಗಿ ಏಳು ದಿನಗಳ ಪ್ಯಾಕೇಜ್ ಅನ್ನು ಇದು ಹೊಂದಿದೆ.

suddiyaana