ವಾಲುತ್ತಿದೆ ಜಗತ್ತಿನ ಅತೀ ಎತ್ತರದ ಶಿವನ ದೇವಾಲಯ –  ದೇಗುಲ ಹಾನಿಗೆ ಕಾರಣವೇನು ಗೊತ್ತಾ?

ವಾಲುತ್ತಿದೆ ಜಗತ್ತಿನ ಅತೀ ಎತ್ತರದ ಶಿವನ ದೇವಾಲಯ –  ದೇಗುಲ ಹಾನಿಗೆ ಕಾರಣವೇನು ಗೊತ್ತಾ?

ವಿಶ್ವದ ಅತೀ ಎತ್ತರದ ಶಿವನ ದೇವಾಲಯ ಎಂದೇ ಖ್ಯಾತಿ ಪಡೆದಿರುವ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಗರ್ವಾಲ್​ ಎಂಬ ಪ್ರದೇಶದಲ್ಲಿರುವ ತುಂಗನಾಥ ದೇವಾಲಯ ಅಪಾಯದ ಸ್ಥಿತಿಯಲ್ಲಿದೆ. ಶಿವನ ದೇವಾಲಯ ದಿನದಿಂದ ದಿನಕ್ಕೆ ವಾಲುತ್ತಿರುವ ಆತಂಕಾರಿ ವಿಚಾರ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ಇದನ್ನೂ ಓದಿ: ಭರದಿಂದ ಸಾಗುತ್ತಿದೆ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯ – ಮಂದಿರದ ಗರ್ಭಗುಡಿ ಫಸ್ಟ್‌ ಲುಕ್‌ ಇಲ್ಲಿದೆ..

8ನೇ ಶತಮಾನದಲ್ಲಿ ತುಂಗನಾಥ ದೇವಾಲಯವನ್ನು ಕಟ್ಯೂರಿ ಅರಸರು ನಿರ್ಮಿಸಿದ್ದರು. ಈ ದೇವಾಲಯ ಉತ್ತರಾಭಿಮುಖವಾಗಿ ಮತ್ತು ಸಮುದ್ರಮಟ್ಟದಿಂದ ಬರೋಬ್ಬರಿ 12,800 ಅಡಿ ಎತ್ತರದಲ್ಲಿದೆ. ಹೀಗಾಗಿ ವಿಶ್ವ ಅತಿ ಎತ್ತರದ ಶಿವನ ದೇವಾಲಯ ಎಂದು ಕರೆಯಲಾಗುತ್ತದೆ. ಗವ್ಹಾಲ್‌ ಹಿಮಾಲಯದ ರುದ್ರಪ್ರಯಾಗ್‌ ಜಿಲ್ಲೆಯಲ್ಲಿರುವ ಈ ಶಿವ ದೇವಸ್ಥಾನವು 5ರಿಂದ 6 ಡಿಗ್ರಿಯಷ್ಟು ವಾಲಿದರೆ, ದೇಗುಲದ ಸಂಕೀರ್ಣದಲ್ಲಿರುವ ಇತರೆ ಸಣ್ಣಪುಟ್ಟ ಕಟ್ಟಡಗಳು 10 ಡಿಗ್ರಿಗಳಷ್ಟು ವಾಲಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಅಧ್ಯಯನ ವರದಿ ಬಹಿರಂಗ ಪಡಿಸಿದೆ.

ಈ ವರದಿ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ಪುರಾತತ್ವ ಅಧಿಕಾರಿಗಳು, ಆದಷ್ಟು ಬೇಗ ತುಂಗನಾಥ ದೇಗುಲವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಇದನ್ನು ರಾಷ್ಟ್ರೀಯ ಮಹತ್ವ ಹೊಂದಿರುವ ಸಂರಕ್ಷಿತ ಸ್ಮಾರಕ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಿದೆ. ಜತೆಗೆ, ಈ ಕುರಿತು ಸಾರ್ವಜನಿಕರ ಅಭಿಪ್ರಾಯಗಳನ್ನೂ ಆಹ್ವಾನಿಸಿದೆ ಎಂದು ವರದಿಯಾಗಿದೆ.

ಶಿವನ ದೇವಸ್ಥಾನ ಏಕಾಏಕಿ ವಾಲಲು ಕಾರಣವೇನು ಎಂಬುದರ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಳ್ಳುತ್ತೇವೆ. ಸಂರಕ್ಷಣೆ ಅಗತ್ಯವಿದೆಯೇ, ಸ್ಮಾರಕದ ಪುನಸ್ಥಾಪನೆ ಮಾಡಬೇಕೇ, ಮಾಡುವುದಿದ್ದರೆ ಎಷ್ಟನ್ನು ಮಾಡಬೇಕು, ದೇಗುಲ ಮತ್ತಷ್ಟು ವಾಲುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಪುರಾತತ್ವ ಸರ್ವೇ ಅಧಿಕಾರಿಗಳು ಹೇಳಿದ್ದಾರೆ.

suddiyaana