ವಿಶ್ವದ ಮೊಟ್ಟ ಮೊದಲ ನೀರು, ಚಹಾ, ಕಾಫಿ, ಬಿಸ್ಕೆಟ್ ಎಟಿಎಂ – ಗ್ರಾಹಕ ಸ್ನೇಹಿ ಮಶೀನ್ ಹೈದರಾಬಾದ್‌ನಲ್ಲಿ ಆರಂಭ

ವಿಶ್ವದ ಮೊಟ್ಟ ಮೊದಲ ನೀರು, ಚಹಾ, ಕಾಫಿ, ಬಿಸ್ಕೆಟ್ ಎಟಿಎಂ – ಗ್ರಾಹಕ ಸ್ನೇಹಿ ಮಶೀನ್ ಹೈದರಾಬಾದ್‌ನಲ್ಲಿ ಆರಂಭ

ಹಣ ಬೇಕು ಅನಿಸಿದಾಗ ಸೀದಾ ಹೋಗುವುದು ಎಟಿಎಂನಲ್ಲಿ ಕಾರ್ಡ್ ಹಾಕುವುದು ದುಡ್ಡು ಡ್ರಾ ಮಾಡುವುದು ಕಾಮನ್ ಬಿಡಿ. ಬರೀ ದುಡ್ಡು ಮಾತ್ರವಲ್ಲ. ಈಗ ಎಟಿಎಂಗಳಲ್ಲಿ ಇಡ್ಲಿ ಕೂಡಾ ಬರುತ್ತದೆ. ಬೆಂಗಳೂರಲ್ಲಿ ಇಡ್ಲಿ ಎಟಿಎಂಗಳಿದ್ದರೆ, ಹೈದರಾಬಾದ್‌ನಲ್ಲಿ ಗೋಲ್ಡ್ ಎಟಿಎಂ ಕೂಡಾ ಶುರುವಾಗಿತ್ತು. ಈಗ ವಿಶ್ವದಲ್ಲೇ ಮೊಟ್ಟ ಮೊದಲಬಾರಿಗೆ ನೀರು, ಚಹಾ, ಕಾಫಿ, ಬಿಸ್ಕೆಟ್ ಇರುವ ಎಟಿಎಂ ಹೈದರಾಬಾದ್‌ನಲ್ಲಿ ಆರಂಭವಾಗಿದೆ.

ಇದನ್ನೂ ಓದಿ: ಎಟಿಎಂನಲ್ಲಿ ಕಾರ್ಡ್ ಹಾಕಿದ್ರೆ ಬರುತ್ತೆ ಚಿನ್ನ – ದೇಶದಲ್ಲೇ ಮೊದಲ ಚಿನ್ನದ ಎಟಿಎಂ!

ಮನುಷ್ಯರ ಹಸ್ತಕ್ಷೇಪವಿಲ್ಲದೆ ಈ ಸ್ವಯಂಚಾಲಿತ ಯಂತ್ರವು ಪಾನೀಯಗಳನ್ನು ತಯಾರಿಸುತ್ತದೆ. ಜೊತೆಗೆ ಬಿಸ್ಕೆಟ್ ಕೂಡ ನೀಡುತ್ತದೆ. QR ಕೋಡ್ ಬಳಸಿ ಗ್ರಾಹಕರು ತಮಗೆ ಬೇಕಾದ್ದನ್ನು ಪಡೆಯಬಹುದಾಗಿದೆ. ವಿಶ್ವದ ಮೊಟ್ಟ ಮೊದಲ ನೀರು, ಚಹಾ, ಕಾಫೀ, ಬಿಸ್ಕೆಟ್ ಎಟಿಎಂ ಮಶೀನ್ ಇದಾಗಿದೆ. ಇದು ಗ್ರಾಹಕ ಸ್ನೇಹಿಯಾಗಿದ್ದು, ಧ್ವನಿ-ಸಹಾಯಕವನ್ನೂ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಸಾಲ ಮತ್ತು ವಿಮಾ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಈ ಯಂತ್ರದ ಸಂಶೋಧಕ ಪಿ. ವಿನೋದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ಇಂಥ ಮಾರಾಟ ಯಂತ್ರಗಳು ಸಾಮಾನ್ಯ ಜನರಿಗೆ ತಲುಪಲು ಸಾಧ್ಯವಿಲ್ಲ, ನೂರರಲ್ಲಿ ಕೇವಲ ಒಂದು ಮಾಲ್ ಮತ್ತು ಮೆಟ್ರೋಗಳಲ್ಲಿ ಇಂಥ ಯಂತ್ರಗಳನ್ನು ಸ್ಥಾಪಿಸಬಹುದಾಗಿದ ಎಂದು ಈ ಯಂತ್ರದ ಸಂಶೋಧಕ ಪಿ. ವಿನೋದ ತಿಳಿಸಿದ್ದಾರೆ.

suddiyaana