ಈ ನಗರದಲ್ಲಿ ನಾನ್ ವೆಜ್ ಬ್ಯಾನ್! – ಜಗತ್ತಿನ ಏಕೈಕ ಸಸ್ಯಾಹಾರಿ ನಗರ ಯಾವುದು ಗೊತ್ತಾ?

ಈ ನಗರದಲ್ಲಿ ನಾನ್ ವೆಜ್ ಬ್ಯಾನ್! – ಜಗತ್ತಿನ ಏಕೈಕ ಸಸ್ಯಾಹಾರಿ ನಗರ ಯಾವುದು ಗೊತ್ತಾ?

ಭಾರತದ ಪ್ರತೀ ರಾಜ್ಯಗಳಲ್ಲಿ, ಪತ್ರೀ ಜಿಲ್ಲೆಗಳಲ್ಲಿ, ಒಂದೊಂದು ವಿಭಿನ್ನವಾದ ಆಹಾರ ಪದ್ಧತಿಗಳಿವೆ. ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಎನ್ನುವಂತೆ ವಿಧ ವಿಧವಾದ ರುಚಿಕರ ಖಾದ್ಯ ಭಾರತದ ಮೂಲೆ ಮೂಲೆಗಳಲ್ಲಿ ಲಭ್ಯವಾಗುತ್ತದೆ. ದೇಶದದಲ್ಲಿ ಬಹುಪಾಲು ಮಂದಿ ಮಾಂಸಾಹಾರ, ಸಸ್ಯಾಹಾರ ಇವೆರಡನ್ನು ಸೇವಿಸಿದ್ರೆ, ಕೆಲವೊಂದಷ್ಟು ಮಂದಿ ಮಾತ್ರ ಸಸ್ಯಾಹಾರಿಗಳಾಗಿದ್ದಾರೆ. ಆದರೆ ನಮ್ಮ ದೇಶದಲ್ಲೇ  ಸಂಪೂರ್ಣ ಸಸ್ಯಾಹಾರಿ ನಗರವೂ ​​ಇದೆ ಅಂತಾ ಎಂದಾದರೂ ಕೇಳಿದ್ದೀರಾ?

ಇದನ್ನೂ ಓದಿ: ಈ ಮೊಟ್ಟೆ ತಿಂದ್ರೆ ಆಯಸ್ಸು ಹೆಚ್ಚಾಗುತ್ತೆ? – ಬ್ಲಾಕ್ ಎಗ್ ಬಗ್ಗೆ ನಿಮ್ಗೆ ಗೊತ್ತಾ?

ಹೌದು, ಗುಜರಾತ್ ನ ಭಾವನಗರ ಜಿಲ್ಲೆಯ ಪಾಲಿಟಾನಾ ನಗರ ಸಂಪೂರ್ಣ ಸಸ್ಯಾಹಾರಿ ನಗರ. ಇದು ಜಗತ್ತಿನ ಮೊದಲ ಸಸ್ಯಾಹಾರಿಗಳನ್ನು ಹೊಂದಿರುವ ನಗರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಪಾಲಿಟಾನಾ ಜೈನ ಧರ್ಮದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಜೈನರ ರಕ್ಷಕನಾದ ಆದಿನಾಥ ಒಮ್ಮೆ ಅಲ್ಲಿನ ಬೆಟ್ಟಗಳ ಮೇಲೆ ನಡೆದಾಡಿದ್ದಾರಂತೆ. ಅಂದಿನಿಂದ ಈ ಸ್ಥಳ ಅನುಯಾಯಿಗಳಿಗೆ ಮಹತ್ವದ್ದಾಗಿದೆ. ಅಷ್ಟೇ ಅಲ್ಲದೇ ಇಲ್ಲಿನ ದೇವಾಲಯಗಳು ಜೈನ ಸಮುದಾಯದ ಯಾತ್ರಾ ಸ್ಥಳಗಳಾಗಿವೆ. ಚೌಮುಖ ದೇವಾಲಯವು ಇಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.

ಈ ನಗರದಲ್ಲಿ ಮೊಟ್ಟೆ ಅಥವಾ ಮಾಂಸ ಮಾರಾಟಕ್ಕೆ ನಿಷೇಧವಿದೆ. ಇಲ್ಲಿ  ಪ್ರಾಣಿ, ಪಕ್ಷಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ. ಒಂದು ವೇಳೆ ಪ್ರಾಣಿ, ಪಕ್ಷಿಗಳನ್ನು ಕೊಂದರೆ ಕಠಿಣ ಶಿಕ್ಷೆ ನೀಡಲಾಗುತ್ತದಂತೆ!

ಈ ನಗರದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿರುವ ಶತ್ರುಂಜಯ ಬೆಟ್ಟದ ಮೇಲೆ  900ಕ್ಕೂ ಹೆಚ್ಚು ದೇವಾಲಯಗಳಿವೆ. ಇದು ಜೈನ ಧರ್ಮದ ಮೊದಲ ತೀರ್ಥಂಕರ ರಿಷಭದೇವನ ದೇವಾಲಯವನ್ನು ಸಹ ಹೊಂದಿದೆ. ಭಕ್ತರು ಇಲ್ಲಿಗೆ ತಲುಪಲು 3,950 ಮೆಟ್ಟಿಲುಗಳನ್ನು ಹತ್ತಬೇಕು. ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟ ಈ ದೇವಾಲಯಗಳು 3.5 ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿವೆ. ಇಲ್ಲಿರುವ ಅತ್ಯಂತ ಹಳೆಯ ದೇವಾಲಯವನ್ನು 11 ಅಥವಾ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಗಳನ್ನು 16 ಬಾರಿ ಪುನರ್ನಿರ್ಮಿಸಲಾಗಿದೆ. ಇದಲ್ಲದೆ ಕುಮಾರಪಾಲ, ವಿಮಲಶ, ಸಂಪ್ರತಿರಾಜ ಮೊದಲಾದವರ ದೇವಾಲಯಗಳಿವೆ. ಅದರ ಕೆತ್ತನೆಗಳು ಮತ್ತು ಶಿಲ್ಪಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ.

ಈ ನಗರದಲ್ಲಿ 200 ಜೈನ ಸನ್ಯಾಸಿಗಳು 250 ಕಸಾಯಿ ಖಾನೆಗಳನ್ನು ವಿರೋಧಿಸಿ ಹಿಂದಿನಿಂದ ಮುಷ್ಕರ ನಡೆಸುತ್ತಾ ಬಂದಿದ್ದರು. ಇದಾದ ನಂತರ 2014 ರಲ್ಲಿ ಜೈನ ಸನ್ಯಾಸಿಗಳ ಹೋರಾಟಕ್ಕೆ ಸರ್ಕಾರ ತಲೆ ಬಾಗಬೇಕಾಯಿತು. ಅಷ್ಟೇ ಅಲ್ಲದೇ ಈ ನಗರವನ್ನು ಮಾಂಸ ಮುಕ್ತ ವಲಯ ಅಂತಾ ಘೋಷಿಸಲಾಯಿತು. ಈ ನಗರದಲ್ಲಿ ಮಾಂಸಹಾರ ನಿಷೇಧಿಸಲು  2014ರಲ್ಲಿ ಕಾನೂನು ರೂಪಿಸಲಾಗಿದೆ.

suddiyaana