ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕ ಭೀತಿ!  – ಡಬ್ಲ್ಯುಹೆಚ್‌ಒ ಹೇಳಿದ್ದೇನು?

ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕ ಭೀತಿ!  – ಡಬ್ಲ್ಯುಹೆಚ್‌ಒ ಹೇಳಿದ್ದೇನು?

ಜಿನೀವಾ: ಬರೋಬ್ಬರಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕೊರೋನಾ ವೈರಸ್ ಜಗತ್ತನ್ನೇ ಕಂಗೆಡಿಸಿತ್ತು. ಅಷ್ಟೇ ಅಲ್ಲದೇ ದಿನ ಕಳೆದಂತೆ ರೂಪಾಂತರಗೊಳ್ಳುತ್ತಾ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತ್ತು. ಕೋವಿಡ್‌ನಿಂದಾಗಿ ಬಳಲಿ ಬೆಂಡಾಗಿದ್ದ ಜಗತ್ತಿಗೆ ಇದೀಗ ಮತ್ತೊಂದು ಸಾಂಕ್ರಾಮಿಕದ ಭೀತಿ ಎದುರಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದ್ದು, ಮುಂಬರುವ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು ಎಂದು ಹೇಳಿದೆ.

ಇದನ್ನೂ ಓದಿ: ಕೊರೊನಾ ಹೋಯ್ತು.. ಮತ್ತೊಂದು ಮಹಾಮಾರಿ ಬಂತಾ?

76ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಈ ಬಗ್ಗೆ ಡಬ್ಲ್ಯುಹೆಚ್‌ಒನ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು. ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಣಾಂತಿಕವಾಗಿರಬಹುದು. ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಗಳು ಸ್ವಲ್ಪಮಟ್ಟಿಗೆ ಸ್ಥಿರಗೊಳ್ಳುತ್ತಿದ್ದರೂ ಕೋವಿಡ್‌ನ ಅಂತ್ಯ ಜಾಗತಿಕ ಆರೋಗ್ಯ ಬೆದರಿಕೆಯ ಅಂತ್ಯವಲ್ಲ ಎಂದು ಎಚ್ಚರಿಗೆ ನೀಡಿದ್ದಾರೆ.

ಜಗತ್ತಿನಲ್ಲಿ ರೋಗ ಹಾಗೂ ಸಾವಿನ ಸಂಖ್ಯೆಯನ್ನು ಉಲ್ಬಣಗೊಳಿಸುವ ಮತ್ತೊಂದು ರೂಪಾಂತರದ ಬೆದರಿಕೆ ಇನ್ನೂ ಕೂಡಾ ಉಳಿದಿದೆ. ಮುಂದಿನ ಸಾಂಕ್ರಾಮಿಕ ಜಗತ್ತಿಗೆ ಕರೆಗಂಟೆಯಾಗಿದ್ದು, ಮತ್ತೆ ಭೀತಿಯನ್ನು ಹುಟ್ಟಿಸಲಿದೆ. ಇದಕ್ಕಾಗಿ ನಾವು ನಿರ್ಣಾಯಕವಾಗಿ, ಸಾಮೂಹಿಕವಾಗಿ ಹಾಗೂ ಸಮಾನವಾಗಿ ಉತ್ತರ ನೀಡಲು ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

suddiyaana