2026ರ ವಿಶ್ವ ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌  ಟೂರ್ನಿ ಗೆದ್ದ ದುಬೈ ರಾಯಲ್ಸ್‌

2026ರ ವಿಶ್ವ ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌  ಟೂರ್ನಿ ಗೆದ್ದ ದುಬೈ ರಾಯಲ್ಸ್‌

ಖರ್‌ ಧವನ್‌  ಹಾಗೂ ಮನ್ವಿಂದರ್‌ ಬಿಸ್ಲಾ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ದುಬೈ ರಾಯಲ್ಸ್‌ ತಂಡ, 2026ರ ವಿಶ್ವ ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌   ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಪುಣೆ ಪ್ಯಾಂಥರ್ಸ್‌ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ದುಬೈ ರಾಯಲ್ಸ್‌ ತಂಡ ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್‌ ಆಯಿತು. ಇದರೊಂದಿಗೆಗೋವಾದಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯ ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್ ಅದ್ಧೂರಿ ಫೈನಲ್‌ನೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಟೂರ್ನಿಯ ನಿರ್ಣಾಯಕ ಹಂತದಲ್ಲಿ ಅದ್ಭುತ ಫಾರ್ಮ್ ತೋರಿದ ರಾಯಲ್ಸ್ ತಂಡ, ಅದ್ಭುತ ಚೇಸಿಂಗ್ ಪ್ರದರ್ಶನದ ಮೂಲಕ ಈ ಗೆಲುವನ್ನು ತನ್ನದಾಗಿಸಿಕೊಂಡಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ಪ್ಯಾಂಥರ್ಸ್ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿತು. ಒಂದು ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ ಅರ್ಧಶತಕ ಬಾರಿಸಿ ಆಡುತ್ತಿದ್ದ ಮಾರ್ಟಿನ್ ಗಪ್ಟಿಲ್ (62 ರನ್) ಹಾಗೂ ಪುಣೆ ಪ್ಯಾಂಥರ್ಸ್ ನಾಯಕ ಕೈರೊನ್ ಪೊಲಾರ್ಡ್ ಅವರನ್ನು ಪಿಯೂಷ್ ಚಾವ್ಲಾ ಬೇಗನೇ ಔಟ್ ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಆದರೆ ಶೇನ್ ವ್ಯಾಟ್ಸನ್ ಕೇವಲ 24 ಎಸೆತಗಳಲ್ಲಿ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದರು. ಇದರ ಫಲವಾಗಿ ಪುಣೆ ಪ್ಯಾಂಥರ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್‌ಗಳನ್ನು ಕಲೆಹಾಕಿತು.

ಇದನ್ನೂ ಓದಿ: ಪ್ರೀತಿ ಮಾಡುವಂತೆ ಶಿಕ್ಷಕಿ ಹಿಂದೆ ಬಿದ್ದ ವಿದ್ಯಾರ್ಥಿ!  – ಒಪ್ಪದಿದ್ದಕ್ಕೆ ತುಟಿಯನ್ನೇ ಕಚ್ಚಿದ ಬಾಲಕ!  

195 ರನ್‌ಗಳ ಗುರಿಯನ್ನು ಬೆನ್ನತ್ತಿದ ದುಬೈ ರಾಯಲ್ಸ್ ಉತ್ತಮ ಆರಂಭ ಪಡೆಯಿತು. ಮನ್ವಿಂದರ್ ಬಿಸ್ಲಾ ಆಕರ್ಷಕ ಅರ್ಧಶತಕದೊಂದಿಗೆ ಇನಿಂಗ್ಸ್‌ಗೆ ಮುನ್ನಡೆ ನೀಡಿದರು. ಇನ್ನೊಂದು ತುದಿಯಲ್ಲಿ, ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದ ನಾಯಕ ಶಿಖರ್ ಧವನ್ ಮತ್ತೊಂದು ಅರ್ಧಶತಕ (64 ರನ್) ಬಾರಿಸಿ ಚೇಸಿಂಗ್ ಅನ್ನು ಜೀವಂತವಾಗಿರಿಸಿದರು. ಧವನ್ ವಿಕೆಟ್ ಅನ್ನು ಡ್ವೇನ್ ಬ್ರಾವೋ ಪಡೆದರು.

ನಂತರ ಸಮಿತ್ ಪಟೇಲ್ ಮತ್ತು ಅಂಬಟಿ ರಾಯುಡು 50 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ನಿರ್ಮಿಸಿ, ದುಬೈ ರಾಯಲ್ಸ್ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ದುಬೈ ರಾಯಲ್ಸ್ ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನ ಪ್ರಪ್ರಥಮ ಚಾಂಪಿಯನ್ ಆಗಿ ಹೊರಹೊಮ್ಮಿತು.ಗೋವಾದ 1919 ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಕಳೆದ 10 ದಿನಗಳಿಂದ ನಡೆದ ಈ ಕ್ರೀಡಾ ಹಬ್ಬದಲ್ಲಿ ವಿಶ್ವದಾದ್ಯಂತದ 90 ದಿಗ್ಗಜ ಆಟಗಾರರು ಭಾಗವಹಿಸಿದ್ದರು. ಫೈನಲ್ ಪಂದ್ಯಕ್ಕೆ ಗೌರವಾನ್ವಿತ ಪ್ರವಾಸೋದ್ಯಮ ಸಚಿವ ರೋಹನ್ ಎ. ಖೌಂಟೆ ಹಾಗೂ ಪ್ರಿಯೋಲ್ ಕ್ಷೇತ್ರದ ಶಾಸಕ ಗೋವಿಂದ ಗೌಡೆ ಅವರು ಉಪಸ್ಥಿತರಿದ್ದು, ಟೂರ್ನಿಗೆ ರಾಜ್ಯದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

Kishor KV