ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯವೇ ವಿರಾಟ್ ಕೊಹ್ಲಿಗೆ ಕೊನೆಯ ವಿಶ್ವಕಪ್? – ಕಾರಣ ಇಲ್ಲಿದೆ
ರನ್ ಮಷಿನ್ ಅಂತಾನೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಕಿಂಗ್ ಆಗಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕಗಳ ಅರ್ಧಶತಕ ಬಾರಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಪುಡಿಗಟ್ಟಿದ್ದಾರೆ. ಇದೀಗ ಭಾರತ-ಆಸ್ಟ್ರೇಲಿಯಾ ಫೈನಲ್ ಮ್ಯಾಚ್ ಗೆ ಕೌಂಟ್ ಡೌನ್ ಶುರುವಾಗಿದ್ದು ಟೀಂ ಇಂಡಿಯಾ ಗೆಲುವಿನ ಹಾಟ್ ಫೇವರೆಟ್ ಟೀಂ ಆಗಿದೆ. ಈ ಪಂದ್ಯ ಕೊಹ್ಲಿ ಪಾಲಿಗೂ ತುಂಬಾನೇ ಮಹತ್ವದ್ದಾಗಲಿದೆ. ಯಾಕೆ ಅನ್ನೋದನ್ನ ಹೇಳ್ತೇನೆ. ನಾನು ಶಾಂತಾ. ನೀವು ಸುದ್ದಿಯಾನದ ಸಬ್ ಸ್ಕ್ರೈಬರ್ ಆಗೋದಿಕ್ಕೆ ಮರೀಬೇಡಿ.
ಇದನ್ನೂ ಓದಿ : ಈ ಸಲ ಕಪ್ ನಮ್ದೆ ಎಂದ ಸೂಪರ್ ಸ್ಟಾರ್ – ಫೈನಲ್ ನೋಡಲು ಬರ್ತಾರಂತೆ ಮೋದಿ – ಚಮತ್ಕಾರ ತೋರಿಸಲು ಸೂರ್ಯಕಿರಣ್ ಟೀಮ್ ರೆಡಿ
ಕ್ರಿಕೆಟ್ ಜಗತ್ತಿನ ಚಿತ್ತ ವಿಶ್ವಕಪ್ ಫೈನಲ್ ಪಂದ್ಯದ ಮೇಲೆ ನೆಟ್ಟಿದೆ. ಭಾರತದ ಎಲ್ಲಾ ಆಟಗಾರರು ಕೂಡ ಉತ್ತಮ ಫಾರ್ಮ್ ನಲ್ಲಿರೋದು ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದಂತಿದೆ. ರನ್ ಮಷಿನ್ ಕಿಂಗ್ ಕೊಹ್ಲಿಯಂತೂ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಕ್ರಿಕೆಟ್ ಜಗತ್ತಿನ ಹೀರೋ ಆಗಿ ಮೆರೆಯುತ್ತಿದ್ದಾರೆ. 2023ರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ವಿರಾಟ್ ಹಲವು ದಾಖಲೆಗಳನ್ನ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್ ನಲ್ಲಿ ಶತಕ ಬಾರಿಸುವ ಮೂಲಕ ಸಚಿನ್ ಹೆಸ್ರಲ್ಲಿದ್ದ ರೆಕಾರ್ಡ್ ಬ್ರೇಕ್ ಮಾಡಿದ್ರು. ಅಷ್ಟೇ ಅಲ್ಲದೇ ಏಕದಿನ ವಿಶ್ವಕಪ್ ನ ಆವೃತ್ತಿವೊಂದದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ಅವ್ರ ದಾಖಲೆಯನ್ನ ಮುರಿದಿದ್ದಾರೆ. 2023ರ ವಿಶ್ವಕಪ್ ಆವೃತ್ತಿಯಲ್ಲೇ ಈವರೆಗೂ 711 ರನ್ ಗಳಿಸಿದ್ದು, ಫೈನಲ್ ಮ್ಯಾಚ್ ನಲ್ಲಿ ಈ ನಂಬರ್ ಮತ್ತಷ್ಟು ಹೆಚ್ಚಾಗಲಿದೆ. ಹಾಗೇ ಏಕದಿನ ವಿಶ್ವಕಪ್ ಆವೃತ್ತಿವೊಂದರಲ್ಲೇ 8ನೇ ಸಲ 50ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೇ ಅಂದ್ರೆ ಟೆಸ್ಟ್, ಏಕದಿನ, ಟಿ-ಟ್ವೆಂಟಿ ಸೇರಿದಂತೆ ಕೊಹ್ಲಿ 80 ಸೆಂಚುರಿ ಬಾರಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೆಚ್ಚಾಗಿದೆ.
ಕಿಂಗ್ ವಿರಾಟ್ ಪಾಲಿಗೂ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಮ್ಯಾಚ್ ಅತ್ಯಂತ ಪ್ರಮುಖವಾಗಲಿದೆ. ಯಾಕಂದ್ರೆ ಇದೇ ವಿಶ್ವಕಪ್ ಹಲವು ಆಟಗಾರರಿಗೆ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ. ಮುಂದಿನ ಐಸಿಸಿ ಏಕದಿನ ವಿಶ್ವಕಪ್ ನಡೆಯೋದು 2027ಕ್ಕೆ. ದಕ್ಷಿಣ ಆಫ್ರಿಕಾ ಟೂರ್ನಿಯ ಆತಿಥ್ಯ ವಹಿಸಲಿದೆ. ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ 2027ರ ವಿಶ್ವಕಪ್ ಆರಂಭಕ್ಕೂ ಮುನ್ನವೇ ನಿವೃತ್ತಿಯಾಗುವ ಬಹಳಷ್ಟು ಸಾಧ್ಯತೆ ಇದೆ. ಟೀಂ ಇಂಡಿಯಾದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಈಗ 35 ವರ್ಷ ತುಂಬಿದೆ. ಅಂದರೆ 2027ರ ವಿಶ್ವಕಪ್ ವೇಳೆಗೆ ವಿರಾಟ್ ಕೊಹ್ಲಿ ವಯಸ್ಸು 39 ಆಗಲಿದೆ. ಅಷ್ಟರೊಳಗೆ ಕೊಹ್ಲಿ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ಫೈನಲ್ ಮ್ಯಾಚ್ ನಲ್ಲಿ ಕೊಹ್ಲಿ ಅವರ ಪ್ರದರ್ಶನ ನೋಡಲು ಇಡೀ ಜಗತ್ತೇ ಕಾತರದಿಂದ ಕಾಯ್ತಿದೆ.
ರೋಹಿತ್ ನಾಯಕತ್ವದಲ್ಲಿ ಮಾತ್ರವಲ್ಲದೆ ಕಿಂಗ್ ಕೊಹ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಿಯೂ ಭಾರತಕ್ಕೆ ಅತ್ಯಮೋಘ ಕಾಣಿಕೆ ನೀಡಿದ್ದಾರೆ. ಕೊಹ್ಲಿ ವಿಶ್ವಕಪ್ ಅಥವಾ ಚಾಂಪಿಯನ್ಸ್ ಟ್ರೋಫಿಯಂಥ ಕಪ್‌ಗಳನ್ನು ಗೆದ್ದಿಲ್ಲ. ಆದ್ರೆ ದ್ವಿಪಕ್ಷೀಯ ಸರಣಿಗಳು, ಇತರೆ ಸರಣಿಗಳಲ್ಲಿ ಅತ್ಯುತ್ತಮ ಸಾಧನೆಯನ್ನೇ ಮಾಡಿದ್ದಾರೆ. 68 ಪಂದ್ಯಗಳಲ್ಲಿ 40ರಲ್ಲಿ ಗೆದ್ದಿರುವ ಕೊಹ್ಲಿ ಭಾರತದ ಅತ್ಯಂತ ಯಶಸ್ವೀ ಟೆಸ್ಟ್ ನಾಯಕ ಎನಿಸಿಕೊಂಡಿದ್ದಾರೆ. ನಾಯಕನಾಗಿಯೇ 20 ಟೆಸ್ಟ್ ಸೆಂಚುರಿ, 7 ದ್ವಿಶತಕಗಳನ್ನೂ ಬಾರಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕೊಹ್ಲಿ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ದೇವರ ಮಗನಾಗಿದ್ದಾರೆ. ಫೈನಲ್ ಮ್ಯಾಚ್ ನಲ್ಲೂ ಮತ್ತೊಂದು ಶತಕ ಬಾರಿಸಲಿ ಅಂತಾ ಇಡೀ ಭಾರತವೇ ಪ್ರಾರ್ಥಿಸುತ್ತಿದೆ.