ಸಾಫ್ಟ್​ ವೇರ್ ಸಿಬ್ಬಂದಿಗೆ ‘ವರ್ಕ್ ಫ್ರಂ ಆಫೀಸ್’ ಎಫೆಕ್ಟ್ – 30 ಪರ್ಸೆಂಟ್ ಹೆಚ್ಚಾಯ್ತು ಬಾಡಿಗೆ ಮನೆಗಳ ರೆಂಟ್..!

ಸಾಫ್ಟ್​ ವೇರ್ ಸಿಬ್ಬಂದಿಗೆ ‘ವರ್ಕ್ ಫ್ರಂ ಆಫೀಸ್’ ಎಫೆಕ್ಟ್ – 30 ಪರ್ಸೆಂಟ್ ಹೆಚ್ಚಾಯ್ತು ಬಾಡಿಗೆ ಮನೆಗಳ ರೆಂಟ್..!

ಕೊರೊನಾ, ಲಾಕ್​ಡೌನ್ ವೇಳೆ ಹಲವು ಕಂಪನಿಗಳು ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಆಫರ್ ನೀಡಿದ್ದವು. ಲಾಕ್​ಡೌನ್ ತೆರವು ಬಳಿಕ ಕೆಲ ಕಂಪನಿಗಳಲ್ಲಿ ತಮ್ಮ ಸಿಬ್ಬಂದಿಯನ್ನ ಆಫೀಸ್​ಗೆ ಕರೆಸಿಕೊಂಡಿದ್ದವು. ಐಟಿ ಸೆಕ್ಟರ್​ಗಳಲ್ಲಿ ಮಾತ್ರ ಇದು ಕಂಟಿನ್ಯೂ ಆಗಿತ್ತು. ಆದ್ರೆ ಈಗ ಸಾಫ್ಟ್​ವೇರ್ ಕಂಪನಿಗಳು ಕೂಡ ತಮ್ಮ ಸಿಬ್ಬಂದಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚನೆ ನೀಡಿವೆ. ಈಗ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಕ್ಯಾನ್ಸಲ್ ಆಯ್ತಲ್ಲ ಅನ್ನೋ ಬೇಸರ ಒಂದ್ಕಡೆಯಾದ್ರೆ ಮನೆ ಬಾಡಿಗೆ ದರ ಕೇಳಿ ತಲೆ ತಿರುಗುವಂತಾಗಿದೆ.

ಇದನ್ನೂ ಓದಿ : ಮಹಾಮಾರಿ H3N2 ವೈರಸ್ ಗೆ ಕರ್ನಾಟಕದಲ್ಲಿ ಮೊದಲ ಬಲಿ

ಹೋಂ ಟೌನ್ ಸೇರಿಕೊಂಡಿದ್ದ ಸಿಬ್ಬಂದಿ ಈಗ ಬೆಂಗಳೂರಿನತ್ತ ಮುಖಮಾಡಿದ್ದು ಬಾಡಿಗೆ ಮನೆಗಳ ಹುಡುಕಾಟದಲ್ಲಿದ್ದಾರೆ. ಆದ್ರೆ ಇದನ್ನೇ ಅಡ್ವಾಂಟೇಜ್ ಮಾಡಿಕೊಂಡಿರೋ ಮಾಲೀಕರು ಬಾಡಿಗೆ ದರವನ್ನ ಎದ್ವಾತದ್ವಾ ಹೆಚ್ಚಳ ಮಾಡಿದ್ದಾರೆ. ಟೆಕ್ ಕಾರಿಡಾರ್‌ಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆ ಬಾಡಿಗೆ ದರ 15 ರಿಂದ 30 ಪರ್ಸೆಂಟ್ ಹೆಚ್ಚಾಗಿದೆ. ಜೊತೆಗೆ ಮನೆ ಮಾಲೀಕರು ಬಾಡಿಗೆ ಒಪ್ಪಂದದ ಅವಧಿಯನ್ನ ಹೆಚ್ಚಿಸಿದ್ದಾರೆ. ಬನ್ನೇರುಘಟ್ಟ ರಸ್ತೆ, ಐಟಿಪಿಎಲ್, ಸರ್ಜಾಪುರ, ಸಿ.ವಿ ರಾಮನ್​ನಗರ, ಮಾರತ್ತಳ್ಳಿ ಹಾಗೂ ಹೆಚ್​ಎಸ್​ಆರ್ ಲೇಔಟ್​ನಲ್ಲಿ ಬಾಡಿಗೆ ಪ್ರಮಾಣ ಹೆಚ್ಚಾಗಿದೆ. ಈ ಭಾಗದಲ್ಲಿ ಶೇಕಡಾ 80 ರಷ್ಟು ಜನ ಸಾಫ್ಟ್​​ವೇರ್ ಸಿಬ್ಬಂದಿಯೇ ಇದ್ದಾರೆ.

ಬೆಂಗಳೂರಿನ ದೊಮ್ಮಲೂರು, ಮುರುಗೇಶಪಾಳ್ಯ ಸುತ್ತಮುತ್ತ 600-900 ಸ್ಕೇರ್ ಫೀಟ್​ನ 2 ಬಿಹೆಚ್​ಕೆ ಅಪಾರ್ಟ್​ಮೆಂಟ್​ಗಳಿಗೆ 2020ರಲ್ಲಿ 15ರಿಂದ 20 ಸಾವಿರ ಬಾಡಿಗೆ ಇತ್ತು. ಆದ್ರೆ ಈಗ 30 ಸಾವಿರ ರೂಪಾಯಿಗೆ ಏರಿಕೆ ಆಗಿದೆ. ಇನ್ನು ಹೂಡಿ ಭಾಗದಲ್ಲಿ 2020 ರಲ್ಲಿ 25 ಸಾವಿರ ರೂಪಾಯಿ ಇದ್ದ ಅಪಾರ್ಟ್​ಮೆಂಟ್​ಗಳು ಈಗ 50 ಸಾವಿರ ರೂಪಾಯಿಗೆ ಬಾಡಿಗೆ ದರ ಏರಿಸಿವೆ. ಬಾಡಿಗೆ ದರ ಹೆಚ್ಚಳವಾಗಿರೋದು ಟೆಕ್ಕಿಗಳ ತಲೆಬಿಸಿ ಹೆಚ್ಚಿಸಿದೆ.

suddiyaana