ವರ್ಕ್ ಫ್ರಮ್ ಹೋಮ್ ಫಜೀತಿ- ಲ್ಯಾಪ್ ಟಾಪ್ ಹಿಡಿದು ಮಂಟಪದಲ್ಲಿ ಕುಳಿತ ವರ
ಕೋಲ್ಕತ್ತಾ: 2020ರಲ್ಲಿ ಬಂದ ಮಾರಕ ಕೋವಿಡ್ ಸೋಂಕಿನಿಂದಾಗಿ ಹೆಚ್ಚಿನ ಕಂಪನಿಗಳು ವರ್ಕ್ ಫ್ರಮ್ ಹೋಮ್ ಆರಂಭಿಸಿತ್ತು. ಎಲ್ಲಾ ಉದ್ಯೋಗಿಗಳು ತಮ್ಮ ಕಚೇರಿ ಕೆಲಸಗಳನ್ನು ಮನೆಯಲ್ಲೇ ಕುಳಿತು ಮಾಡುವಂತೆ ಮಾಡಿತ್ತು. ಪಾಸಿಟಿವ್ ಕೇಸ್ ಇಳಿಮುಖವಾಗುತ್ತಿದ್ದಂತೆ ಕೆಲವೊಂದು ಕಂಪೆನಿಗಳು ಮಾತ್ರ ಕಚೇರಿಗೆ ತೆರಳಿ ಕೆಲಸ ಮಾಡುವ ಅವಕಾಶ ಕೊಟ್ಟಿತು. ಇನ್ನು ಕೆಲವೊಂದು ಕಂಪನಿಗಳು ಮನೆಯಲ್ಲೇ ಕೆಲಸ ಮುಂದುವರೆಸಿದೆ. ಹಾಗಾಗಿ ಜನರೂ ಕೂಡ ತಮ್ಮ ಕೆಲಸಗಳನ್ನು ಮನೆಯಲ್ಲೇ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ.
ವರ್ಕ್ ಫ್ರಮ್ ಹೋಮ್ ಎಷ್ಟು ಜನರ ಮೇಲೆ ಪ್ರಭಾವ ಬೀರಿದೆ ಎಂದರೆ ಕೆಲವೊಂದು ಕಂಪೆನಿಗಳು ರಜೆ ನೀಡುತ್ತಿಲ್ಲ. ಹಾಗಾಗಿ ಕೆಲವು ವ್ಯಕ್ತಿಗಳು ತಾವು ಹೋಗುವ ಕಡೆ ಲ್ಯಾಪ್ ಟಾಪ್ ಅನ್ನು ಕೊಂಡೊಯ್ಯುತ್ತಾರೆ. ತಾವಿದ್ದ ಸ್ಥಳದಲ್ಲೇ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ. ಅದರಂತೆ ಇಲ್ಲೊಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಅದರಲ್ಲಿ ಮದುಮಗ ತನ್ನ ಮದುವೆಯ ದಿನ ಮದುವೆ ಶಾಸ್ತ್ರ ನಡೆಯುತ್ತಿದ್ದರೆ, ಇತ್ತ ವರ ಕೈಯಲ್ಲಿ ಲ್ಯಾಪ್ ಟಾಪ್ ಹಿಡಿದುಕೊಂಡು ಕೆಲಸದಲ್ಲೇ ಮಗ್ನನಾಗಿದ್ದಾನೆ.
ಇದನ್ನೂ ಓದಿ: 13 ಸಿಸಿಟಿವಿ ಕ್ಯಾಮರಾಗಳನ್ನು ಕದ್ದ ಕಳ್ಳ ಕಪಿರಾಯ- ಅಂಗಡಿ ಮಾಲೀಕನ ಸ್ಥಿತಿ ಅಯ್ಯೋ ಮಾರಾಯ
ಈ ಘಟನೆ ನಡೆದಿರುವುದು ಕೋಲ್ಕತ್ತಾದ ಒಂದು ಪ್ರದೇಶದಲ್ಲಿ ಎಂಬುದು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ ಫೋಟೋದಲ್ಲಿ ಕಾಣಬಹುದು. ಇಲ್ಲಿ ಇಬ್ಬರು ಪುರೋಹಿತರು ವರನ ಮದುವೆ ಶಾಸ್ತ್ರಗಳನ್ನು ಮಾಡುತ್ತಿದ್ದರೆ, ವರ ಮಾತ್ರ ಲ್ಯಾಪ್ ಟಾಪ್ ಹಿಡಿದು ತನ್ನ ಕೆಲಸದಲ್ಲೇ ಮಗ್ನನಾಗಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಕೆಲವೊಂದಷ್ಟು ಮಂದಿ ಹಾಸ್ಯಭರಿತವಾಗಿ ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ಇದೊಂದು ಆಘಾತಕಾರಿ ಬೆಳವಣಿಗೆ ಎಂದು ಹೇಳಿಕೊಂಡಿದ್ದಾರೆ.
View this post on Instagram
ಒಬ್ಬ ವ್ಯಕ್ತಿ ಹೀಗೆ ಬರೆದುಕೊಂಡಿದ್ದಾನೆ, ನನಗೆ ಇದು ತಮಾಷೆಯಾಗಿ ಕಾಣುತ್ತಿಲ್ಲ. ಜೊತೆಗೆ ಯಾವುದೇ ಸಂಸ್ಥೆಯು ತನ್ನ ಉದ್ಯೋಗಿಯನ್ನು ಅವನ ಮದುವೆಯ ದಿನವೂ ಕೆಲಸ ಮಾಡಿಸುವ ಹಂತಕ್ಕೆ ಹೋಗುವುದಿಲ್ಲ ಎಂದು ಬರೆದುಕೊಂಡಿದ್ದಾನೆ.