ಮಹಿಳೆಯರ ಯೋಗಕ್ಷೇಮಕ್ಕಾಗಿ ವಿಭಿನ್ನ ದೇವಾಲಯ – ಸ್ತನ ಪೂಜೆ ಮಾಡಿದರೆ ಈಡೇರುತ್ತೆ ಸ್ತ್ರೀಯರ ಹರಕೆ..!

ಮಹಿಳೆಯರ ಯೋಗಕ್ಷೇಮಕ್ಕಾಗಿ ವಿಭಿನ್ನ ದೇವಾಲಯ – ಸ್ತನ ಪೂಜೆ ಮಾಡಿದರೆ ಈಡೇರುತ್ತೆ ಸ್ತ್ರೀಯರ ಹರಕೆ..!

ದೇವಾಲಯಗಳು ಅಂದರೆ ದೇವರ ಮೂರ್ತಿ ಇದ್ದೇ ಇರುತ್ತದೆ. ಆದರೆ, ಕೆಲವೊಂದು ಕಡೆ ತಾವು ನಂಬಿರುವ ದೇವರನ್ನು ವಸ್ತುಗಳ ರೂಪದಲ್ಲೂ ಪೂಜಿಸುವುದೂ ಇದೆ. ಆದರೆ, ಜಪಾನಿನಲ್ಲಿ ಇದೆಲ್ಲಕ್ಕಿಂತ ವಿಭಿನ್ನವಾದ ದೇವಾಲಯ ಇದೆ. ಇಲ್ಲಿ ಪೂಜೆಯೂ ನಡೆಯುತ್ತದೆ. ಆದರೆ, ಪೂಜೆ ನಡೆಯುವುದು ಸ್ತನಗಳಿಗೆ. ಮಹಿಳೆಯರ ಸ್ತನಗಳಿಗೆ ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಹೀಗೆ ಸ್ತನಪೂಜೆಗೂ ಕಾರಣವಿದೆ. ಯಾಕೆಂದರೆ ಈ ದೇವಾಲಯವು ಸಂಪೂರ್ಣವಾಗಿ ಮಹಿಳೆಯರ ಯೋಗಕ್ಷೇಮ ಮತ್ತು ಆರೋಗ್ಯಕ್ಕಾಗಿಯೇ ನಿರ್ಮಿಸಿರುವಂತದ್ದು.

ಇದನ್ನೂ ಓದಿ: ಸತ್ತ ಪ್ರೇಯಸಿಯ ಮೃತದೇಹದೊಂದಿಗೆ 7 ವರ್ಷ ಜೀವನ – ಡಾ.ಡೆತ್ ರಹಸ್ಯ ಬಯಲಾಗಿದ್ದು ಹೇಗೆ?  

ಇಲ್ಲಿ ದೇವಸ್ಥಾನದ ಸುತ್ತ ಮುತ್ತ ಮಹಿಳೆಯರ ಸ್ತನಗಳ ಆಕಾರಗಳು ಕಾಣಸಿಗುತ್ತವೆ. ಜಪಾನಿನ ಸ್ತನ ದೇವಾಲಯ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಸ್ತನ ಕ್ಯಾನ್ಸರ್ ನಿಂದ ಮಹಿಳೆಯನ್ನು ರಕ್ಷಿಸಲು ಇಲ್ಲಿ ಪೂಜೆ ನಡೆಯುತ್ತದೆ. ಹತ್ತಿ ಹಾಗೂ ಬಟ್ಟೆಯಿಂದ ಮಾಡಿದ ಸ್ತನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ದೇವಾಲಯಕ್ಕೆ ದೂರದ ಊರುಗಳಿಂದ ಮಹಿಳೆಯರು ಬರುತ್ತಾರೆ. ಸ್ತನ ಕ್ಯಾನ್ಸರ್ ನಿಂದ ಮುಕ್ತಿ ಹೊಂದಲು ಹಾಗೂ ಸುರಕ್ಷಿತ ಗರ್ಭಧಾರಣೆಗಾಗಿ ಇಲ್ಲಿಗೆ ಆಗಮಿಸಿ ಪೂಜೆ ಮಾಡ್ತಾರೆ. ಜಪಾನಿನ ವೈದ್ಯರೊಬ್ಬರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿಯನ್ನು ರಕ್ಷಿಸುವಂತೆ ಇಲ್ಲಿ ಹರಕೆ ಹೊತ್ತಿದ್ದರಂತೆ. ಆ ನಂತರದ ದಿನಗಳಲ್ಲಿ ರೋಗಿಗೆ ಸ್ತನ ಕ್ಯಾನ್ಸರ್ ಗುಣವಾಯ್ತಂತೆ. ಅಲ್ಲಿಂದ ಈ ದೇವಸ್ಥಾನ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ದೇವಾಲಯವನ್ನು 1492ರಲ್ಲಿ ಮೌಂಟ್ ಕೊಮಾಕಿಯಲ್ಲಿ ಸ್ಥಾಪಿಸಲಾಯಿತು. ಬಳಿಕ, 16ನೇ ಶತಮಾನದಲ್ಲಿ ಸಮುರಾಯ್ ಲಾರ್ಡ್ ಓಡಾ ನೊಬುನಾಗಾ ಅವರ ಆದೇಶದ ಮೇರೆಗೆ ದೇವಾಲಯವನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಈ ದೇವಾಲಯ ಮಮ್ಮಾ ಕಣ್ಣೋನ್ ಎಂದೇ ಪ್ರಸಿದ್ಧಿ ಪಡೆದಿದೆ. 1665ರಲ್ಲಿ, ಸ್ತನ್ಯಪಾನ ಮಾಡಲು ಸಾಧ್ಯವಾಗದ ಮಹಿಳೆಯೊಬ್ಬರು ದೇವಾಲಯದಲ್ಲಿ ಪ್ರಾರ್ಥಿಸಿಕೊಂಡಿದ್ದರಂತೆ. ಆಗ ಅವರಿಗೆ ತಮ್ಮ ಮಗುವಿಗೆ ಹಾಲುಣಿಸಲು ಮತ್ತು ಆಹಾರವನ್ನು ನೀಡಲು ಸಾಧ್ಯವಾಯಿತಂತೆ. ಹೀಗೆ ಮಹಿಳೆಯರು ತಮ್ಮ ಹರಕೆ ಈಡೇರಿಸುವ ದೇವಾಲಯ ಇದು ಎಂದು ನಂಬಿದ್ದಾರೆ.

suddiyaana