ಮೂವರು ಮಕ್ಕಳಿಗೆ ಜನ್ಮ ನೀಡಿದರೆ ಅಧಿಕ ವೇತನ, 3 ಲಕ್ಷ ಸಹಾಯಧನ! – ಸರ್ಕಾರದಿಂದ ಬಂಪರ್ ಆಫರ್

ಮೂವರು ಮಕ್ಕಳಿಗೆ ಜನ್ಮ ನೀಡಿದರೆ ಅಧಿಕ ವೇತನ, 3 ಲಕ್ಷ ಸಹಾಯಧನ! – ಸರ್ಕಾರದಿಂದ ಬಂಪರ್ ಆಫರ್

ಕೆಲವು ದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಬಾರದು ಎಂಬ ಉದ್ದೇಶದಿಂದ ದಂಪತಿಗೆಇಂತಿಷ್ಟೇ ಮಕ್ಕಳು ಮಾತ್ರ ಇರಬೇಕು ಎಂಬ ಕಾನೂನಿದೆ. ಆದರೆ, ಭಾರತದ ಒಂದು ರಾಜ್ಯದಲ್ಲಿ ಮಾತ್ರ 3 ಮಕ್ಕಳಿಗೆ ಜನ್ಮ ನೀಡಿದವರಿಗೆ ಅಲ್ಲಿನ ಸರ್ಕಾರ ಬಂಪರ್ ಆಫರ್ ನೀಡಿದೆ.

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಈ ವಿಚಿತ್ರ ಘೋಷಣೆಯೊಂದನ್ನು ಮಾಡಿದ್ದಾರೆ. 3 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರಿಗೆ 3ಲಕ್ಷ ರೂ ಸಹಾಯಧನ, ಹಾಗೂ ಅಧಿಕ ವೇತನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕೀನ್ಯಾ ದೇಶದಲ್ಲಿ ಬರಗಾಲ ತಂದ ಆತಂಕ – ರೆಡ್ ಬಿಲ್ಡ್ ಕ್ವೆಲಿಯಾ ಹಕ್ಕಿಗಳ ಜೀವಕ್ಕೆ ಕಂಟಕ

ಪ್ರಸ್ತುತ, ಸಿಕ್ಕಿಂನ ಜನಸಂಖ್ಯೆಯು ಸರಿಸುಮಾರು ಏಳು ಲಕ್ಷಕ್ಕಿಂತ ಕಡಿಮೆಯಿದೆ. ಅವರಲ್ಲಿ ಸುಮಾರು 80 ಪ್ರತಿಶತ ಸ್ಥಳೀಯರು ಇದ್ದಾರೆ. ಸಿಕ್ಕಿಂನಲ್ಲಿ ಜನಸಂಖ್ಯಾ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನಿಸುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಈಗಾಗಲೇ ಮಹಿಳೆಯರಿಗೆ 365 ದಿನಗಳ ಹೆರಿಗೆ ರಜೆ ಮತ್ತು ಪುರುಷ ಉದ್ಯೋಗಿಗಳಿಗೆ 30 ದಿನಗಳ ರಜೆಯನ್ನು ನೀಡುತ್ತಿದೆ.

ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, “ಸಿಕ್ಕಿಂನ ಜನಸಂಖ್ಯೆಯು ಸರಿಸುಮಾರು ಏಳು ಲಕ್ಷಕ್ಕಿಂತ ಕಡಿಮೆಯಿದೆ. ಅವರಲ್ಲಿ ಸುಮಾರು 80 ಪ್ರತಿಶತ ಸ್ಥಳೀಯರು ಇದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಅಧಿಕ ವೇತನ ಹಾಗೂ 3 ಲಕ್ಷ ರೂ ಸಹಾಯಧನ ನೀಡಲು ರಾಜ್ಯ ಸರಕಾರ ಮುಂದಾಗಿದೆ” ಎಂದು ಹೇಳಿದರು.

“ಮಹಿಳೆಯರು ಸಾಧ್ಯವಾದಷ್ಟು ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಉತ್ತೇಜಿಸುವ ಮೂಲಕ ಫಲವತ್ತತೆಯ ಪ್ರಮಾಣ ಕುಸಿಯುತ್ತಿರುವುದನ್ನು ತಡೆಯುವ ಅಗತ್ಯವಿದೆ. ನಮ್ಮ ಸರ್ಕಾರವು ದೊಡ್ಡ ಕುಟುಂಬವನ್ನು ಹೊಂದಲು ಸ್ಥಳೀಯ ಜನರನ್ನು ಪ್ರೋತ್ಸಾಹಿಸುತ್ತಿದೆ. ಕೇವಲ ಒಂದು ಮಗುವನ್ನು ಹೊಂದಿರುವ ಮಹಿಳೆಯರು ಈ ಆರ್ಥಿಕ ಪ್ರಯೋಜನವನ್ನು ಪಡೆಯುವುದಿಲ್ಲ. ಸಾಮಾನ್ಯ ಜನರು ಗರಿಷ್ಠ ಸಂಖ್ಯೆಯ ಮಕ್ಕಳನ್ನು ಹೊಂದಿರುವವರು ಈ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ. ಇದನ್ನು ಆರೋಗ್ಯ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳು ಮೇಲ್ವಿಚಾರಣೆ ಮಾಡುತ್ತವೆ” ಎಂದು ತಿಳಿಸಿದರು.

ತಮಾಂಗ್, ಸರ್ಕಾರವು ಸಿಕ್ಕಿಂನ ಆಸ್ಪತ್ರೆಗಳಲ್ಲಿ ಐವಿಎಫ್ ಸೌಲಭ್ಯವನ್ನು ಪ್ರಾರಂಭಿಸಿದೆ. ನೈಸರ್ಗಿಕವಾಗಿ ಗರ್ಭಧರಿಸಲು ತೊಂದರೆ ಇರುವ ಮಹಿಳೆಯರು ಈ ಪ್ರಕ್ರಿಯೆಯ ಮೂಲಕ ಮಕ್ಕಳಿಗೆ ಜನ್ಮ ನೀಡಬಹುದು. ಈ ರೀತಿ ಹೆರಿಗೆಯಾಗುವ ಮಹಿಳೆಯರಿಗೆ 3 ಲಕ್ಷ ರೂ. ಸಹಾಯಧನ ನೀಡಲಾಗುವುದು” ಎಂದು ಹೇಳಿದರು.

suddiyaana