15 ಸಾವಿರ ಆಸೆಗೆ ಬಿದ್ದು ತಲೆ ಬೊಳಿಸಿಕೊಂಡ ಮಹಿಳೆಯರು – ತಮಿಳುನಾಡಿನಲ್ಲಿ ವಿಚಿತ್ರ ಸೈಬರ್ ಮೋಸ

15 ಸಾವಿರ ಆಸೆಗೆ ಬಿದ್ದು ತಲೆ ಬೊಳಿಸಿಕೊಂಡ ಮಹಿಳೆಯರು – ತಮಿಳುನಾಡಿನಲ್ಲಿ ವಿಚಿತ್ರ ಸೈಬರ್ ಮೋಸ

ಜನ ದುಡ್ಡು ಸಿಗುತ್ತೆ ಅಂದ್ರೆ ಏನಾಲ್ಲಾ ಮಾಡ್ತಾರೆ, ಹೇಗೆ ಮೋಸ ಹೋಗ್ತಾರೆ ಎನ್ನುವುದ್ದಕ್ಕೆ ತಮಿಳುನಾಡಿನಲ್ಲಿ ನಡೆದ ಘಟನೆಯೇ ಸಾಕ್ಷಿ. ತಲೆ ಬೋಳಿಸಿಕೊಂಡರೆ ಸರ್ಕಾರದಿಂದ ಭಾರಿ ಹಣ ಹಾಗೂ ಉಚಿತ ಲ್ಯಾಪ್‌ಟಾಪ್ ಸಿಗಲಿದೆ ಎಂಬ ಸೈಬರ್ ಖದೀಮನ ಸುಳ್ಳು ಮಾತನ್ನು ನಂಬಿ ಮೂವರು ಮಹಿಳೆಯರು ತಲೆ ಬೋಳಿಸಿಕೊಂಡು ವಂಚನೆಗೊಳಗಾದ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಸೇಲಂ ಜಿಲ್ಲೆಯ ಅತ್ತೂರು ಬಳಿಯ ಪುದುಕ್ಕೊಟ್ಟಂಬಾಡಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಕೆಲಸದ ಅವಧಿಯಲ್ಲಿ ಎಣ್ಣೆ ಪಾರ್ಟಿ- 6 ಪಿಡಿಒ, ಇಬ್ಬರು ಕಾರ್ಯದರ್ಶಿಗಳು ಸಸ್ಪೆಂಡ್

ಪಳನಿಯಮ್ಮಾಳ್ ಎಂಬವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ತಾನು ತಾಲೂಕು ಕಚೇರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. “ಕರೋನದಂತೆ ಹೊಸದೊಂದು ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಅದು ಕೂದಲಿನ ಮೂಲಕವೇ ವ್ಯಾಪಿಸುತ್ತದೆ. ವಿದೇಶಗಳಲ್ಲಿ ಜನರು ತಲೆ ಬೋಳಿಸಿಕೊಂಡು ಸುರಕ್ಷಿತವಾಗಿದ್ದಾರೆ. ಹೀಗಾಗಿ ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ತಲೆ ಬೋಳಿಸಿಕೊಳ್ಳುವವರಿಗೆ ಸರ್ಕಾರದಿಂದ ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ,” ಎಂದು ನಂಬಿಸಿದ್ದಾನೆ.

ಅಷ್ಟೇ ಅಲ್ಲದೆ, ಮಹಿಳೆಯರಿಗೆ 15,000 ರೂ., ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 45,000 ರೂ. ಹಾಗೂ ಉಚಿತ ಲ್ಯಾಪ್‌ಟಾಪ್ ಮತ್ತು ಪುರುಷರಿಗೆ 6,000 ರೂ. ಧನಸಹಾಯ ನೀಡುವುದಾಗಿ ಆಮಿಷ ಒಡ್ಡಿದ್ದಾನೆ. ಈ ಯೋಜನೆಗೆ ಗ್ರಾಮಕ್ಕೆ ಕೇವಲ 18 ಟೋಕನ್‌ಗಳು ಮಾತ್ರ ಲಭ್ಯವಿವೆ ಎಂದು ತುರ್ತು ಪರಿಸ್ಥಿತಿ ಸೃಷ್ಟಿಸಿದ್ದಾನೆ.

ಮೋಸ ಹೋದ ಮಹಿಳೆಯರು: ಈ ಸುಳ್ಳು ಮಾಹಿತಿಯನ್ನು ನಿಜವೆಂದು ನಂಬಿದ ಸುಮಾರು 20 ಜನರು ತಲೆ ಬೋಳಿಸಿಕೊಳ್ಳಲು ಮು ಮುಂದಾಗಿದ್ದರು. ಅವರಲ್ಲಿ ಕಾವೇರಿ, ರಾಮಯಿ ಮತ್ತು ಚಿತ್ರಾ ಎಂಬ ಮೂವರು ಮಹಿಳೆಯರು ಮೊದಲು ತಲೆ ಬೋಳಿಸಿಕೊಂಡು, ಆ ಫೋಟೋಗಳನ್ನು ವಂಚಕ ನೀಡಿದ್ದ ವಾಟ್ಸಾಪ್ ಸಂಖ್ಯೆಗೆ ರವಾನಿಸಿದ್ದಾರೆ.

ಆದರೆ, ಫೋಟೋ ಕಳುಹಿಸಿದ ತಕ್ಷಣವೇ ಆ ವ್ಯಕ್ತಿಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ. ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ, ತಲೆ ಬೋಳಿಸಿಕೊಳ್ಳಲು ಕಾಯುತ್ತಿದ್ದ ಉಳಿದ 20 ಜನರು ಅನುಮಾನಗೊಂಡು ತಕ್ಷಣವೇ ಅಲ್ಲಿಂದ ಕಾಲ್ಕಿತ್ತಿದ್ದಾರೆ

Kishor KV

Leave a Reply

Your email address will not be published. Required fields are marked *