ಇಬ್ಬರು ಮಕ್ಕಳನ್ನ ಕೊಂದು ಮಹಿಳೆ ಆತ್ಮಹತ್ಯೆ! – ಹೆಂಡತಿ, ಮಕ್ಕಳ ಸಾವಿಗೆ ಪತಿಯೇ ಕಾರಣ ಆದ್ನಾ?

ಇಬ್ಬರು ಮಕ್ಕಳನ್ನ ಕೊಂದು ಮಹಿಳೆ ಆತ್ಮಹತ್ಯೆ! – ಹೆಂಡತಿ, ಮಕ್ಕಳ ಸಾವಿಗೆ ಪತಿಯೇ ಕಾರಣ ಆದ್ನಾ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದೆ. ಇಬ್ಬರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ.

ಇದನ್ನೂ ಓದಿ:ಗಂಟೆಗಟ್ಟಲೆ ಜಗಳ ನೋಡುವುದೇ ಬಿಗ್‌ಬಾಸ್ ಶೋ – ಹೀಗಾದರೆ ಈ ರಿಯಾಲಿಟಿ ಶೋ ನೋಡೋದು ಕಷ್ಟ ಅಂತಿದ್ದಾರೆ ವೀಕ್ಷಕರು

ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ರಾತ್ರಿ ಮಹಿಳೆಯ ತಂಗಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಭುವನ್ (1), ಬೃಂದಾ (4), ತಾಯಿ ವಿಜಯಲಕ್ಷ್ಮಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಜಯಲಕ್ಷ್ಮಿ, ರಾಯಚೂರು ಮಸ್ಕಿ ಮೂಲದ ರಮೇಶ್ ಎಂಬಾತನ್ನ ಐದು ವರ್ಷಗಳ ಹಿಂದೆ ಮದುವೆಯಾಗಿದ್ರು. ಆಕೆಯ ಪತಿ ರಮೇಶ್ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರಿಂದ ಇಡೀ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಆದ್ರೆ ಗುರುವಾರ ವಿಜಯಲಕ್ಷ್ಮೀ ಮಕ್ಕಳನ್ನ ಕೊಂದು, ಆತ್ಮತ್ಯೆಗೆ ಶರಣಾಗಿದ್ದಾರೆ. ಸಾವಿನ ಬಗ್ಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪತಿಯೇ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ರಮೇಶ್‌ ಮತ್ತೊಂದು ಮದುವೆಯಾಗಿದ್ದು ಡಿವೋರ್ಸ್ ಕೊಡುವಂತೆ ಪತ್ನಿಗೆ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಪದೇ ಪದೇ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಈ ವಿಚಾರ ಕುಟುಂಬಸ್ಥರ ಬಳಿ ವಿಜಯಲಕ್ಷ್ಮಿ ಹೇಳಿದ್ದಳು. ಈತನ ಹಿಂಸೆಯಿಂದ ಬೇಸತ್ತು ವಿಜಯಲಕ್ಷ್ಮಿ ತನ್ನ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿರೋ ಮಾಹಿತಿ ಪ್ರಕಾರ, ವಿಜಯಲಕ್ಷ್ಮಿ ಪತಿ ರಮೇಶ್​ಗೆ ಇನ್​ಸ್ಟಾಗ್ರಾಮ್​​ನಲ್ಲಿ ಬೇರೆ ಯಾವುದೋ ಮಹಿಳೆಗೆ ಮೆಸೇಜ್ ಮಾಡ್ತಿದ್ದ. ಪ್ರತಿನಿತ್ಯ ಮನೆಗೆ ಬರುತ್ತಿದ್ದ ರಮೇಶ್, ಪತ್ನಿ ಜೊತೆ ಗಲಾಟೆ ಮಾಡ್ತಿದ್ದ. ನಾನು ಮತ್ತೊಂದು ಮದುವೆಯಾಗ್ತೀನಿ ಅಂದಿದ್ನಂತೆ. ವಿಜಯಲಕ್ಷ್ಮೀಗೆ ಡಿವೋರ್ಸ್ ಕೊಡೋದಾಗಿ ಹೆದರಿಸ್ತಿದ್ದ. ಈ ವಿಚಾರವನ್ನು ವಿಜಯಲಕ್ಷ್ಮೀ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಎರಡು ತಿಂಗಳ ಹಿಂದೆ ಊರಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆನಂತರ ಮತ್ತೆ ರಮೇಶ್ ಜೊತೆ ವಿಜಯಲಕ್ಷ್ಮೀ ಬೆಂಗಳೂರಿಗೆ ಬಂದಿದ್ದಳು. ರಾಜಿ ಸಂಧಾನ ಮುಗಿದ ನಂತರವೂ ಆತ ಮೆಸೇಜ್ ಮಾಡ್ತಿದ್ದ ಎನ್ನಲಾಗಿದೆ.

Shwetha M