ಈ ಬುಡಕಟ್ಟು ಜನರ‌ ಮನೆಗೆ ಬರುವ ಅತಿಥಿಗಳಿಗೆ ಮಹಿಳೆಯರ ಸೇವೆ – ಸ್ನಾನ ಮಾತ್ರ ಸಂಪೂರ್ಣ ನಿಷಿದ್ಧ!

ಈ ಬುಡಕಟ್ಟು ಜನರ‌ ಮನೆಗೆ ಬರುವ ಅತಿಥಿಗಳಿಗೆ ಮಹಿಳೆಯರ ಸೇವೆ – ಸ್ನಾನ ಮಾತ್ರ ಸಂಪೂರ್ಣ ನಿಷಿದ್ಧ!

ಬುಡಕಟ್ಟು ಜನರು‌ ಮತ್ತು ಅವರ ವಿಚಿತ್ರ ಆಚರಣೆಗಳು ನಾಗರಿಕ ಸಮಾಜಕ್ಕೆ ಇಂದಿಗೂ ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ಇಂದು ದೊಡ್ಡ ಸಮುದಾಯ ಜೀವನಪೂರ್ತಿ ಸ್ನಾನವನ್ನೇ ಮಾಡೋದಿಲ್ಲ.‌ ನೀರಿನಲ್ಲಿ‌ ಸ್ನಾನ ಮಾಡೋದು ಅವರಿಗೆ ನಿಷಿದ್ಧ. ಬದಲಿಗೆ ಅವರ ಸ್ನಾನಕ್ಕೆ ಪರ್ಯಾಯ ಮಾರ್ಗವಿದೆ‌. ಇನ್ನು ಮನೆಗೆ ಬರುವ ಅತಿಥಿಗಳಿಗೆ ಮನೆಯೊಡತಿಯೂ ವಿಶೇಷ ಸೇವೆ ಸಲ್ಲಿಸಬೇಕು.

ಅಂದ ಹಾಗೆ, ನಮೀಬಿಯಾದಲ್ಲಿರುವ ಹಿಂಬಾ ಬುಡಕಟ್ಟಿನ ಜನಾಂಗದ ಜನರು ಆಚರಿಸುವ ಪದ್ಧತಿಗಳು ಅಚ್ಚರಿ ಮೂಡಿಸುತ್ತವೆ. ಇಂದು, ಈ ಬುಡಕಟ್ಟು 50,OOO ಜನರನ್ನು ಹೊಂದಿದೆ. ಆದರೆ ಇಂದಿಗೂ ಈ ಬುಡಕಟ್ಟು ಜನಾಂಗದವರು ಕೆಲವು ವಿಚಿತ್ರ ನಿಯಮಗಳನ್ನು ಪಾಲಿಸುತ್ತಾ ಬಂದಿದ್ದಾರೆ.

ಅತಿಥಿಗಳಿಗೆ ಮಹಿಳೆಯರಿಂದ ವಿಶೇಷ ಸತ್ಕಾರ!

ಈ ಬುಡಕಟ್ಟಿನಲ್ಲಿ ಸ್ನಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಮೀಬಿಯಾದಲ್ಲಿರುವ ಈ ಆದಿವಾಸಿಗಳ ಸಂಪ್ರದಾಯಗಳು ಶತಮಾನಗಳ ಹಿಂದೆ ಇದ್ದಂತೆಯೇ ಇವೆ. ಪ್ರಪಂಚದ ಪ್ರಗತಿಯು ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಬುಡಕಟ್ಟುಗಳಲ್ಲಿ, ಹೊರಗಿನಿಂದ ಬರುವ ಅತಿಥಿಗಳಿಗೆ ಊಟದ ಜೊತೆಗೆ ಮನೆಯ ಮಹಿಳೆಯರು ಸತ್ಕರಿಸುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ದೇವಸ್ಥಾನದ ಹೆಸರು ಕೇಳಿದ್ರೆ ಪಾಕ್‌ ಸೇನೆಗೆ ಗಡಗಡ – ಪಾಕ್‌ ಯೋಧರಿಗೆ ದೇವಿ ಮೇಲೆ ಏಕೆ ಇಷ್ಟೊಂದು ಭಯ?

ನೀರು‌‌ ಸ್ನಾನ ನಿಷೇಧಹೊಗೆ ಸ್ನಾನ!

ಹಿಂಬಾ ಬುಡಕಟ್ಟು ಜನರು ತಮ್ಮದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದ್ದಾರೆ.‌ ಅವರು ತಮ್ಮ ಇಡೀ ದಿನವನ್ನು ಆಹಾರದ ಹುಡುಕಾಟದಲ್ಲಿ ಕಳೆಯುತ್ತಾರೆ. ಇನ್ನು ಈ ಬುಡಕಟ್ಟು ಜನರಿಗೆ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ನೀರಿನಲ್ಲಿ ಸ್ನಾನ ಮಾಡುವ ಬದಲು ಹೊಗೆಯಲ್ಲಿ ಸ್ನಾನ ಮಾಡುತ್ತಾರೆ. ಇದನ್ನು ಹೊಗೆ ಸ್ನಾನ ಎಂದು ಕರೆಯಲಾಗುತ್ತದೆ.

ಈ ಬುಡಕಟ್ಟು ಜನಾಂಗದವರ ಕುರಿತು ತಯಾರಿಸಲಾದ ಸಾಕ್ಷ್ಯಚಿತ್ರದಲ್ಲಿ ಇಂತಹ ಕುತೂಹಲಕಾರಿ ಮಾಹಿತಿಗಳಿವೆ. ಇಪ್ಪತ್ತೊಂದನೆಯ ಶತಮಾನದಲ್ಲಿ‌ ಜಗತ್ತು ಆಧುನಿಕವಾಗಿ ಮುನ್ನುಗ್ಗುತ್ತಿದ್ದರೂ ಈ ಆದಿವಾಸಿ ಜನಾಂಗ ಶತಶತಮಾನಗಳ ಹಿಂದಿನ ಆಚರಣೆಗಳಿಂದ ಇನ್ನೂ ಹೊರಬಂದಿಲ್ಲ!

Shwetha M