ಆಟವಾಡುತ್ತಿದ್ದ ಬಾಲಕನ ಮೇಲೆರಗಿತ್ತು ಚಿರತೆ – ಕುಡುಗೋಲಿನಲ್ಲೇ ಮಗುವನ್ನ ರಕ್ಷಿಸಿದ್ದೇಗೆ ತಾಯಿ..!?

ಆಟವಾಡುತ್ತಿದ್ದ ಬಾಲಕನ ಮೇಲೆರಗಿತ್ತು ಚಿರತೆ – ಕುಡುಗೋಲಿನಲ್ಲೇ ಮಗುವನ್ನ ರಕ್ಷಿಸಿದ್ದೇಗೆ ತಾಯಿ..!?

ಅಮ್ಮ ಅನ್ನೋ ಬಂಧವೇ ಅಂಥಾದ್ದು. ತನ್ನ ಜೀವ ಒತ್ತೆ ಇಟ್ಟಾದ್ರೂ ತನ್ನ ಕರುಳಕುಡಿಯನ್ನ ಕಾಪಾಡುತ್ತಾಳೆ. ಇಂಥಾದ್ದೇ ಒಂದು ಘಟನೆ ಈಗ ಉತ್ತರ ಪ್ರದೇಶದಲ್ಲಿ ನಡೆದಿದ್ದು ತಾಯಿ ಪ್ರೇಮಕ್ಕೆ ಎಲ್ಲರೂ ಶಹಬ್ಬಾಸ್ ಅಂತಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಜೀತ್​ಪುರ್ ಗ್ರಾಮವೇ ಇಂಥಾದ್ದೊಂದು ಅಚ್ಚರಿಗೆ ಕಾರಣವಾಗಿದೆ. 34 ವರ್ಷದ ಶಾಂತರೇಶ್ ದೇವಿ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡ್ತಿದ್ರು. ಈ ವೇಳೆ ಸಮೀಪದಲ್ಲೇ ಅವರ 10 ವರ್ಷದ ಮಗ ಟಿಕೇಂದ್ರ ಸೈನಿ ಆಟವಾಡುತ್ತಿದ್ದ. ಈ ವೇಳೆ ಅದೆಲ್ಲಿತ್ತೋ ಏನೋ ಚಿರತೆ ಮಗುವಿನ ಮೇಲೆ ದಿಢೀರ್ ದಾಳಿ ಮಾಡಿದೆ.

ಇದನ್ನೂ ಓದಿ : ಪ್ರೇಯಸಿ ಕೊಂದು ಶವ ಫ್ರಿಡ್ಜ್ ನಲ್ಲಿಟ್ಟು ಮರುದಿನವೇ ಮತ್ತೊಬ್ಬಳ ಜತೆ ಮದುವೆ – ಪಾಪಿಯ ಕೃತ್ಯವೇ ಭಯಾನಕ..!

ಚಿರತೆ ದಾಳಿಗೆ ತುತ್ತಾದ ಮಗು ಜೋರಾಗಿ ಚೀರಾಡಿದೆ. ಮಗನ ಅಳುವ ಸದ್ದು ಕೇಳಿ ತಾಯಿ ಓಡಿ ಬಂದಿದ್ದಾಳೆ. ಈ ವೇಳೆ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವುದು ಕಂಡಿದೆ. ಇಂಥಾ ಟೈಮಲ್ಲಿ ಬೇರೆ ಯಾರಾದ್ರೂ ಆಗಿದ್ರೆ ಅಲ್ಲಿಂದ ಓಡಿ ಹೋಗ್ತಿದ್ರು. ಆದ್ರೆ ಸ್ವಲ್ಪವೂ ಭಯಪಡದ ದೇವಿ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಚಿರತೆ ಮೇಲೆ ಪ್ರತಿದಾಳಿ ಮಾಡಿದ್ದಾರೆ. ಚಿರತೆ ಮಗುವನ್ನ ಬಿಡೋವರೆಗೂ ಕುಡುಗೋಲಿನಿಂದ ಹೊಡೆದಿದ್ದಾರೆ. ಬಳಿಕ ಚಿರತೆ ಮಗುವನ್ನ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗಿದೆ.

ತಾಯಿ, ಮಗುವಿನ ಕೂಗಾಟದ ಸದ್ದು ಕೇಳಿ ಅಕ್ಕ ಪಕ್ಕ ಕೆಲಸ ಮಾಡ್ತಿದ್ದ ರೈತರು ಮತ್ತು ಕೂಲಿಯಾಳುಗಳು  ಓಡಿ ಬಂದಿದ್ದಾರೆ. ಈ ವೇಳೆ ತಾಯಿ ತನ್ನ ರಕ್ತಸಿಕ್ತ ಮಗುವನ್ನ ಕೈಯಲ್ಲಿ ಎತ್ತಿಕೊಂಡು ಬರೋದನ್ನ ನೋಡಿದ್ದಾರೆ. ದಾಳಿ ವೇಳೆ ದೇವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಗು ಗಂಭೀರವಾಗಿ ಗಾಯಗೊಂಡಿದೆ. ತಲೆ, ಕೈ, ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಪ್ರಜ್ಞೆ ತಪ್ಪಿದ್ದಾನೆ.

ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ ಬಳಿಕ ಮಗುವನ್ನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯ ನವೀನ್ ಚೌಹಾಣ್ ‘ಮಗುವಿನ ತಲೆ, ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಬಿಜ್ನೋರ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ. ಮತ್ತೊಂದೆಡೆ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಗ್ರಾಮದಲ್ಲಿ ಬೋನ್ ಇಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ರೆ ಪದೇಪದೆ ಚಿರತೆ ದಾಳಿಯಿಂದ ಭಯಭೀತರಾಗಿರೋ ನೂರಾರು ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

 

 

suddiyaana