ಮಕ್ಕಳಿಗೆ ಜನ್ಮ ನೀಡಲು ಮಹಿಳೆಯರೇ ಒಪ್ಪುತ್ತಿಲ್ಲ – ಇಳಿಕೆಯಾಗುತ್ತಲೇ ಇದೆ ಜನಸಂಖ್ಯೆ..!

ಮಕ್ಕಳಿಗೆ ಜನ್ಮ ನೀಡಲು ಮಹಿಳೆಯರೇ ಒಪ್ಪುತ್ತಿಲ್ಲ – ಇಳಿಕೆಯಾಗುತ್ತಲೇ ಇದೆ ಜನಸಂಖ್ಯೆ..!

ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ದಕ್ಷಿಣಕೊರಿಯಾದಲ್ಲಿ ದಿನದಿಂದ ದಿನಕ್ಕೆ ಜನನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಜನಸಂಖ್ಯೆ ಏರಿಕೆಗೆ ಸರ್ಕಾರ 200 ಬಿಲಿಯನ್ ಡಾಲರ್ ಖರ್ಚು ಮಾಡಿದರೂ ಕೂಡಾ ಜನಸಂಖ್ಯೆ ವಿಚಾರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಹೀಗಿರುವಾಗಲೇ ಜನಸಂಖ್ಯೆ ಗಣನೀಯವಾಗಿ ಕುಸಿಯಲು ಇನ್ನೊಂದು ಕಾರಣ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದೇನೆಂದರೆ, ಮಕ್ಕಳಿಗೆ ಜನ್ಮ ನೀಡಲು ಸ್ವತಃ ಕೊರಿಯನ್ ಮಹಿಳೆಯರು ಒಪ್ಪುತ್ತಿಲ್ಲ. ಮಕ್ಕಳನ್ನು ಹೆರಲು ದಕ್ಷಿಣ ಕೊರಿಯಾ ಮಹಿಳೆಯರು ನಿರಾಕರಿಸುತ್ತಿದ್ದಾರೆ ಅನ್ನೋ ಮಾಹಿತಿಯೊಂದು ಹೊರಬಿದ್ದಿದೆ.

ಇದನ್ನೂ ಓದಿ:  ಪದೋನ್ನತಿ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ – ಹಿರಿಯ ವಕೀಲೆ ವಿಕ್ಟೋರಿಯಾ ಗೌರಿ ಪ್ರಮಾಣವಚನ!

ದಕ್ಷಿಣ ಕೊರಿಯಾ ತಂತ್ರಜ್ಞಾನದ ವಿಷಯದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದರೂ, ಜನಸಂಖ್ಯೆಯ ವಿಚಾರದಲ್ಲಿ ಕಳವಳಕಾರಿಯಾಗಿದೆ. 2020ರಲ್ಲಿ 2,75,800 ಮಕ್ಕಳು ಜನಿಸಿದ್ದರೆ, 3,07,764 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಫಲವತ್ತತೆ ದರವು ಕಡಿಮೆ ಇದೆ. 2015 ಮತ್ತು 2019 ರ ನಡುವೆ ಸುಮಾರು 1 ಮಿಲಿಯನ್ ಜನರು ವಿವಾಹವಾಗಿದ್ದಾರೆ. ಈ ದಂಪತಿಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ದಂಪತಿಗೆ ಮಕ್ಕಳಿಲ್ಲ. ಸಮೀಕ್ಷೆಯೊಂದರ ಪ್ರಕಾರ, ಹಣದುಬ್ಬರವೂ ಇದಕ್ಕೆ ಕಾರಣ ಎನ್ನಲಾಗ್ತಿದೆ. ಶಿಕ್ಷಣದ ಮೊದಲ 6 ವರ್ಷಗಳ ಅವಧಿಯಲ್ಲಿ ಮಗುವಿಗೆ ಸುಮಾರು 61.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಮಕ್ಕಳ ವೆಚ್ಚವನ್ನು ಭರಿಸಲು ಕಷ್ಟವಾಗುತ್ತದೆ ಅನ್ನೋ ಕಾರಣಕ್ಕೆ ಮಕ್ಕಳಾಗದಂತೆ ಮಹಿಳೆಯರು ಎಚ್ಚರವಹಿಸುತ್ತಿದ್ದಾರೆ ಎನ್ನಲಾಗಿದೆ. 2022ರ ಜನಗಣತಿ ಪ್ರಕಾರ ದಕ್ಷಿಣ ಕೊರಿಯಾದಲ್ಲಿ 5 ಕೋಟಿ ಜನಸಂಖ್ಯೆ ಪ್ರಮಾಣವಿತ್ತು. 2050ರ ವೇಳೆಗೆ ಈ ಪ್ರಮಾಣ 3 ಕೋಟಿಗೆ ಇಳಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

suddiyaana