ಹೆಣ್ಣು ಮಕ್ಕಳ ಬಾಯಲ್ಲಿ ಗುಟ್ಟು ನಿಲ್ಲಲ್ಲ ಯಾಕೆ? – ಈ ಶಾಪದಿಂದಲೇ ಮಹಿಳೆಯರು ಎಲ್ಲಾ ಹೇಳ್ತಾರೆ..!
ಹೆಣ್ಮಕ್ಕಳ ಬಾಯಲ್ಲಿ ಗುಟ್ಟೇ ನಿಲ್ಲಲ್ಲ. ಗಾಸಿಪ್ ಮಾಡೋದ್ರಲ್ಲಿ ಮಹಿಳೆಯರು ಎತ್ತಿದ ಕೈ ಅಂತಾ ಕೆಲವ್ರು ಆಡಿಕೊಳ್ತಾರೆ. ಯಾರಿಗೂ ಹೇಳಬೇಡಿ ಅಂತಾ ಹೆಣ್ಣು ಮಕ್ಕಳ ಬಳಿ ಏನೇ ಹೇಳಿ. ಅದು ಇನ್ನೊಬ್ಬರಿಗೆ ಗೊತ್ತಾಗಿಯೇ ಗೊತ್ತಾಗುತ್ತೆ. ಯಾಕೆಂದರೆ, ಗಂಡುಮಕ್ಕಳಿಗೆ ಹೋಲಿಸಿದ್ರೆ ಹೆಣ್ಣುಮಕ್ಕಳ ಬಾಯಲ್ಲಿ ಸೀಕ್ರೆಟ್ ನಿಲ್ಲಲ್ಲ. ಬೇರೆಯವ್ರ ಮನೆ ವಿಚಾರಗಳ ಬಗ್ಗೆಯೂ ಹೆಂಗಸರಿಗೆ ಜಾಸ್ತಿ ಗೊತ್ತಿರೋದು. ಒಂದು ಕಡೆ ಹೆಣ್ಣುಮಕ್ಕಳು ಸೇರಿದ್ರಂತೂ ಅಲ್ಲಿ ಎಲ್ಲಾ ಗುಟ್ಟು ರಟ್ಟಾಗಿರುತ್ತದೆ. ಆದರೆ ನಾರಿಯರ ಈ ವರ್ತನೆಗೆ ಕಾರಣ ಒಂದು ಶಾಪ.
ಇದನ್ನೂ ಓದಿ : ಮನೆಯೊಳಗೆ ವಿಷಸರ್ಪ ಬಿಟ್ಟು ಎರಡು ಕೊಲೆ – ಹೆಂಡತಿ ಮತ್ತು 2 ವರ್ಷದ ಮಗುವನ್ನು ಕೊಂದೇ ಬಿಟ್ಟ ಕಟುಕ
ಮಹಿಳೆಯರ ಈ ವರ್ತನೆಗೆ ಕಾರಣದ ಮಹಾಭಾರತ ಯುದ್ಧದ ವೇಳೆ ನಡೆದ ಒಂದು ಘಟನೆ ಅಂತೆ. ಮಹಾಭಾರತ ಯುದ್ಧ ಕೊನೆಗೊಂಡ ನಂತರ ಪಾಂಡವರು ದೃತರಾಷ್ಟನ ಬಳಿ ಬರ್ತಾರೆ. ಬಳಿಕ ಯುಧಿಷ್ಟಿರ ಯುದ್ಧದಲ್ಲಿ ಮಡಿದವರ ಮೃತದೇಹಗಳನ್ನ ಸಂಪ್ರದಾಯಬದ್ಧವಾಗಿ ಸುಟ್ಟು ಗಂಗೆಯಲ್ಲಿ ಅವರ ಶ್ರಾದ್ಧ ಕಾರ್ಯ ಮಾಡಿ ತರ್ಪಣ ಬಿಡುತ್ತಾನೆ. ಆ ಸಂದರ್ಭದಲ್ಲಿ ಕೌರವ ಸ್ತ್ರೀಯರು ತಮ್ಮ ತಮ್ಮ ಪತಿಯರಿಗೆ ಉದಕ ನೀಡುತ್ತಿರುತ್ತಾರೆ. ಆದರೆ ಕರ್ಣನಿಗೆ ಮಾತ್ರ ಯಾರು ತರ್ಪಣ ಬಿಡುವವರೇ ಇರಲ್ಲ. ಆಗ ಕುಂತಿ ಪಾಂಡವರ ಕಿವಿ ಬಳಿ ಬಂದು ಕರ್ಣ ನಿಮ್ಮ ಜೇಷ್ಠ ಸಹೋದರ, ಅವನಿಗೂ ಒಂದು ತರ್ಪಣ ಬಿಡಿ ಎಂದು ಮೆಲ್ಲನೆ ಹೇಳುತ್ತಾಳಂತೆ. ಯುದ್ಧದಿಂದಾಗ ಸಾವು ನೋವುಗಳ ಬಗ್ಗೆ ದುಃಖದಲ್ಲಿದ್ದ ಪಾಂಡವರಿಗೆ ಕುಂತಿಯ ಮಾತು ಮತ್ತಷ್ಟು ನೋವು ಉಂಟು ಮಾಡುತ್ತದೆ. ಕರ್ಣ ನಮ್ಮ ಸಹೋದರ ಹೇಗಾಗುತ್ತಾನೆ ಎಂದು ಪಾಂಡವರು ಕುಂತಿಯ ಬಳಿ ಪ್ರಶ್ನೆ ಮಾಡುತ್ತಾರೆ. ಆಗ ಕುಂತಿ ತನ್ನ ಹಿಂದಿನ ಕಥೆಯನ್ನು ಹೇಳುತ್ತಾಳೆ. ಈ ಕಥೆಯನ್ನು ಕೇಳಿ ತೀವ್ರ ಆಘಾತಕ್ಕೊಳಗಾದ ಯುಧಿಷ್ಠಿರ, ಅಮ್ಮ ನೀವು ಈ ಸತ್ಯವನ್ನು ಮೊದಲೇ ಹೇಳಿದ್ದರೆ ಯುದ್ಧವೇ ನಡೆಯುತ್ತಿರಲಿಲ್ಲ. ಏಕೆ ಮುಚ್ಚಿಟ್ಟೆ ಎಂದು ತಾಯಿಯ ಬಳಿ ಯುಧಿಷ್ಠಿರ ದುಃಖದಿಂದ ಕೇಳಿಕೊಳ್ಳುತ್ತಾನೆ. ಕೊನೆಗೆ ತರ್ಪಣ ಬಿಟ್ಟ ಮೇಲೆ ಇನ್ನು ಮುಂದೆ ಹೆಂಗಸರ ಬಾಯಲ್ಲಿ ಯಾವುದೇ ಗುಟ್ಟುಗಳು ನಿಲ್ಲೋದು ಬೇಡ ಅಂತ ಕೋಪದಿಂದ ಹೆಣ್ಣು ಕುಲಕ್ಕೆ ಶಾಪ ನೀಡಿದನಂತೆ. ಹೀಗಾಗೇ ಮಹಿಳೆಯರ ಬಾಯಲ್ಲಿ ಯಾವುದೇ ಗುಟ್ಟುಗಳು ನಿಲ್ಲಲ್ಲವಂತೆ. ಆದ್ರೆ ಇದು ಎಷ್ಟು ಸತ್ಯ, ಎಷ್ಟು ಸುಳ್ಳೋ ಅನ್ನೋದು ಮಾತ್ರ ಗೊತ್ತಿಲ್ಲ.