ಈ ಗ್ರಾಮದಲ್ಲಿ 5 ದಿನ ಮಹಿಳೆಯರು ಬಟ್ಟೆ ಹಾಕುವಂತಿಲ್ಲ – ನಿಯಮ ಮೀರಿದರೆ ಕೆಡುಕಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ..!

ಈ ಗ್ರಾಮದಲ್ಲಿ 5 ದಿನ ಮಹಿಳೆಯರು ಬಟ್ಟೆ ಹಾಕುವಂತಿಲ್ಲ – ನಿಯಮ ಮೀರಿದರೆ ಕೆಡುಕಾಗುವುದನ್ನು  ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ..!

ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ತಾಂತ್ರಿಕವಾಗಿ ಜಗತ್ತು ಎಷ್ಟೇ ಮುಂದುವರೆದರೂ ಕೆಲ ಸಮುದಾಯದ ಜನ ಇಂದಿಗೂ ಕೆಲ ವಿಚಿತ್ರ ಆಚರಣೆಗಳನ್ನು ಮಾಡುತ್ತಿದ್ದಾರೆ. ಕೆಲವೊಂದು ತೀರಾ ಸಾಮಾನ್ಯ ಎನಿಸಿದರೂ, ಇನ್ನು ಕೆಲವು ಆಚರಿಸುವ ಪದ್ಧತಿಗಳು ನಾವು ಎಲ್ಲಿದ್ದೇವೆ. ಯಾವ ಕಾಲದಲ್ಲಿದ್ದೇವೆ ಎಂದು ಅಚ್ಚರಿಯಾಗದೇ ಇರಲ್ಲ.

ಈ ಆಚರಣೆ ನೀವು ಕೇಳಿದರೆ ನಿಜಕ್ಕೂ ಹೀಗೆಲ್ಲಾ ಇದೆಯಾ ಅಂತಾ ಅನಿಸದೆ ಇರಲ್ಲ. ಯಾಕೆಂದರೆ, ಇಲ್ಲಿ ಒಂದು ನಿರ್ಧಿಷ್ಟ ತಿಂಗಳಲ್ಲಿ 5 ದಿನ ಮಹಿಳೆಯರು ಬಟ್ಟೆಯನ್ನೇ ಹಾಕುವಂತಿಲ್ಲ.

ಇದನ್ನೂ ಓದಿ: ಯುರೋಪ್‌ಗೆ ಮುತ್ತಿಗೆ ಹಾಕಿದ ಇರುವೆಗಳ ಸೈನ್ಯ! – ಇರುವೆ ಮುಟ್ಟಿದ್ದೆಲ್ಲಾ ಸರ್ವನಾಶ!

ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆ ಪ್ರದೇಶದ ಒಂದು ಹಳ್ಳಿಯಲ್ಲಿ ಒಂದು ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಆ ಗ್ರಾಮದ ಮಹಿಳೆಯರು ವರ್ಷದ ನಿರ್ದಿಷ್ಟ ತಿಂಗಳಲ್ಲಿ ಐದು ದಿನಗಳ ಕಾಲ ಬಟ್ಟೆಯನ್ನೇ ಧರಿಸಬಾರದು ಎಂಬ ವಿಚಿತ್ರ ಸಂಪ್ರದಾಯವೊಂದು ಜಾರಿಯಲ್ಲಿದೆ. ಬಿನಿ ಎಂಬ ಗ್ರಾಮದಲ್ಲಿ ಶ್ರಾವಣ ಮಾಸದಲ್ಲಿ ಐದು ದಿನ ಈ ಗ್ರಾಮದ ಯಾವೊಬ್ಬ ಹೆಂಗಸರೂ ಬಟ್ಟೆ ಧರಿಸಬಾರದು. ಈ ಸಂಪ್ರದಾಯ ಮೀರಿ ಏನಾದರೂ ಬಟ್ಟೆ ಧರಿಸಿದರೆ ಕೆಟ್ಟದ್ದು ಆಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.

ಈ ಐದು ದಿನಗಳಲ್ಲಿ ಗಂಡ-ಹೆಂಡತಿ ಪರಸ್ಪರ ಮಾತನಾಡಬಾರದು. ಅಲ್ಲದೆ ಪತಿ-ಪತ್ನಿ ಪ್ರತ್ಯೇಕವಾಗಿರಬೇಕು. ಈ ದಿನಗಳಲ್ಲಿ ಪುರುಷರಿಗೂ ಕೆಲವು ನಿರ್ಬಂಧಗಳಿವೆ. ಅದೇನೆಂದರೆ, ಈ ಐದು ದಿನಗಳಲ್ಲಿ ಹಳ್ಳಿಯಲ್ಲಿರುವ ಪುರುಷರು ಮದ್ಯಪಾನ ಮಾಡಬಾರದು ಮತ್ತು ಮಾಂಸಾಹಾರವನ್ನು ಸೇವಿಸಬಾರದು. ಯಾರೂ ಕೂಡಾ ಯಾವುದೇ ನಿಯಮಗಳನ್ನು ಉಲ್ಲಂಘಿಸಬಾರದು. ಈ ವಿಚಿತ್ರ ಪದ್ಧತಿಯನ್ನು ಗ್ರಾಮಸ್ಥರು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಆ ಹಳ್ಳಿಯ ಜನರು ಇದನ್ನು ತಮ್ಮ ಸಾಂಪ್ರದಾಯಿಕ ಪದ್ಧತಿ ಎನ್ನುತ್ತಾರೆ. ಇನ್ನು ಈ ಆಚರಣೆಯ ಹಿಂದೆ ಒಂದು ಕತೆಯಿದೆ. ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆಯಲ್ಲಿರುವ ಈ ಬಿನಿ ಗ್ರಾಮವನ್ನು ಕೆಲವು ದೆವ್ವಗಳು ಹಿಡಿದಿದ್ದವಂತೆ. ಆ ಗ್ರಾಮಕ್ಕೆ ಲೂನಾ ಗೋತ್ ದೇವತೆ ಬಂದಾಗ, ಆ ಎಲ್ಲ ದೆವ್ವಗಳು ನಾಶವಾದವಂತೆ. ಅಂದಿನಿಂದ ಈ ಪದ್ಧತಿಯು ಹಳ್ಳಿಗೆ ಬಂದಿತು ಎಂದು ಹೇಳಲಾಗುತ್ತದೆ. ದೆವ್ವಗಳು ಸುಂದರವಾಗಿ ಬಟ್ಟೆ ಧರಿಸಿದ ಮಹಿಳೆಯರನ್ನೇ ಆವರಿಸಿಕೊಳ್ಳುತ್ತಿದ್ದವು ಎಂದು ಹೇಳಲಾಗಿದೆ. ಅದನ್ನು ನೆನಪಿಟ್ಟುಕೊಳ್ಳಲು ಈ ಹಬ್ಬವನ್ನು 5 ದಿನಗಳವರೆಗೆ ಆಚರಿಸಲಾಗುತ್ತದೆ ಎಂದು ಬಿನಿ ಗ್ರಾಮದ ನಿವಾಸಿಗಳು ಹೇಳುತ್ತಿದ್ದಾರೆ.

Sulekha