ನಾಪತ್ತೆಯಾದ 13 ತಿಂಗಳ ಬಳಿಕ ಮಹಿಳೆಯ ಶವ ಸ್ಮಶಾನದಲ್ಲಿ ಪತ್ತೆ – ಮಗಳೇ ತಾಯಿಯನ್ನು ಕೊಲೆ ಮಾಡಿದ್ಯಾಕೆ ಗೊತ್ತಾ?

ನಾಪತ್ತೆಯಾದ 13 ತಿಂಗಳ ಬಳಿಕ ಮಹಿಳೆಯ ಶವ ಸ್ಮಶಾನದಲ್ಲಿ ಪತ್ತೆ – ಮಗಳೇ ತಾಯಿಯನ್ನು ಕೊಲೆ ಮಾಡಿದ್ಯಾಕೆ ಗೊತ್ತಾ?

ಮಕ್ಕಳಿಗೆ ತಾಯಿಯೇ ದೇವರು.. ಅಮ್ಮ ಒಂದು ಕ್ಷಣ ಕಣ್ಣೆದುರು ಇಲ್ಲದಿದ್ರೂ ಕೂಡ ಮಕ್ಕಳು ಚಡಪಡಿಸುತ್ತಾರೆ. ಅವಳಿಗೆ ಏನಾದ್ರು ಆದ್ರೆ ಮಕ್ಕಳು ಸಹಿಸಿಕೊಳ್ಳುವುದಿಲ್ಲ. ಆದ್ರೆ ಇಲ್ಲೊಬ್ಬಳು ಮಹಿಳೆ ಹೆತ್ತಮ್ಮಳನ್ನೇ ಕೊಂದಿದ್ದಾಳೆ. ತಾಯಿಯನ್ನು ಕೊಲ್ಲಲು ಕಾರಣ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಈ ಘಟನೆ ಮೈಸೂರಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮತ್ತು ತಾಲೂಕು ಹೆಬ್ಬಕವಾಡಿ ಗ್ರಾಮದ ಲೇಟ್ ದೇವರಾಜಾಚಾರಿ ಎಂಬವರ ಪತ್ನಿ ಶಾರದಮ್ಮ(45) ತನ್ನ ಮಗಳಿಂದ ಹತ್ಯೆಯಾದವರು. ಇವರನ್ನು ಪುತ್ರಿ ಅನುಷಾ ಮತ್ತು ಆಕೆಯ ಪತಿ ದೇವರಾಜು ಸೇರಿ ಕೊಲೆ ಮಾಡಿದ್ದಾರೆ. ಬಳಿಕ ತಾಯಿ ನಾಪತ್ತೆಯಾಗಿದ್ದಾರೆ ಎಂದು ಕತೆ ಕಟ್ಟಿದ್ದಾರೆ. ಕೊಲೆ ನಡೆದು 13 ತಿಂಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ! – ಒಂದೇ ದಿನದಲ್ಲಿ 250ಕ್ಕೂ ಹೆಚ್ಚು ಪಾಸಿಟಿವ್‌ ಕೇಸ್‌

ಶಾರದಮ್ಮ ಪತಿ ನಿಧನದ ಬಳಿಕ ಹೆಬ್ಬಕವಾಡಿಯಲ್ಲಿ ಒಂಟಿಯಾಗಿ ವಾಸುತ್ತಿದ್ದು, ಇತ್ತೀಚೆಗೆ ಕಣ್ಣಿನ ತೊಂದರೆಯಿಂದ ನರಳುತ್ತಿದ್ದರು. ಈ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತೆ ಪುತ್ರಿ ಅನುಷಾಗೆ ಹೇಳಿದ್ದಾರೆ. ಆದರೆ, ಹಣದ ತೊಂದರೆಯಿಂದ ಚಿಕಿತ್ಸೆ ಕೊಡಿಸಲು ಅನುಷಾ ವಿಳಂಬ ಮಾಡಿದ್ದಾರೆ. 2022ರ ನವೆಂಬರ್‌ ನಲ್ಲಿ ತಾಯಿಗೆ ಕಣ್ಣಿನ ಚಿಕಿತ್ಸೆ ಕೊಡಿಸಿ ಹೆಬ್ಬಕವಾಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಈ ವೇಳೆ ಚಿಕಿತ್ಸೆ ಕೊಡಿಸಲು ತಡ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾರದಮ್ಮ, ಮಗಳೊಂದಿಗೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅನುಷಾ ತಾಯಿಯನ್ನು ಕೆಳಗೆ ತಳ್ಳಿದ್ದು, ಕೆಳಗೆ ಬಿದ್ದ ಶಾರದಮ್ಮ ಅವರ ತಲೆಗೆ ಮಂಚ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಯಲ್ಲಿ ತಾಯಿ ಶಾರದಮ್ಮ ಮೃತಪಟ್ಟಿದ್ದರಿಂದ ಕಂಗಲಾದ ಅನುಷಾ, ಪತಿ ದೇವರಾಜ ಜೊತೆಗೆ ಬೈಕಿನಲ್ಲಿ ಶವ ಸಾಗಿಸಿ ಗ್ರಾಮದ ಸ್ಮಶಾನಕ್ಕೆ ರಾತ್ರಿ ವೇಳೆ ಹೊತ್ತು ತೆರಳಿ ಶವನ್ನು ಗುಂಡಿ ತೆಗೆದು ಹೂತು ಹಾಕಿದ್ದಾರೆ. ಬಳಿಕ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿರುವ ಮನೆಗೆ ಬಂದಿದ್ದಾರೆ.

ಈ ಮಧ್ಯೆ ಕೆಲವು ತಿಂಗಳು ಕಳೆದರೂ ಮನೆಯ ಬಳಿ ಶಾರದಮ್ಮ ಕಾಣದೇ ಇದ್ದುದ್ದರಿಂದ ಆತಂಕಗೊಂಡ ಆಕೆಯ ಸಹೋದರಿ ದೇವಮ್ಮ, ಅನುಷಾಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕೊನೆಗೆ ಸಂಬಂಧಿಕರ ಒತ್ತಡದ ಮೇರೆಗೆ 8 ತಿಂಗಳ ಬಳಿಕ 2023 ಜೂನ್ ನಲ್ಲಿ ಅನುಷಾ ತಮ್ಮ ತಾಯಿ ನಾಪತ್ತೆಯಾಗಿದ್ದಾರೆ ಎಂದು ವರುಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ಅನುಷಾ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಿಸಿದಾಗ ಮಗಳೇ ತಾಯಿಯನ್ನು ಕೊಂದು ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸಲಿದ್ದು, ಸ್ಮಶಾನದಲ್ಲಿ ಹೂತಿಟ್ಟರ ಶವದ ಮರಣೋತ್ತರ ಪರೀಕ್ಷೆಯನ್ನು ಅಲ್ಲಿನ ಸ್ಥಳೀಯ ಪೊಲೀಸರ ನಡೆಸಲಿದ್ದಾರೆ.

Shwetha M